ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಎಂಸಿಜಿಯಲ್ಲಿ ಪ್ರಧಾನಿ ಮೋದಿ ಕನಸು ಬಹಿರಂಗ

By Mahesh

ಮೆಲ್ಬೋರ್ನ್, ನ.18: ಕ್ರಿಕೆಟ್ ಇಲ್ಲದೆ ಭಾರತ ಹಾಗೂ ಆಸ್ಟ್ರೇಲಿಯಾ ದೇಶಗಳನ್ನು ಊಹಿಸಲು ಸಾಧ್ಯವಿಲ್ಲ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಐತಿಹಾಸಿಕ ಕ್ರಿಕೆಟ್ ಮೈದಾನ ಮೆರ್ಲ್ಬೋರ್ನ್ ಕ್ರಿಕೆಟ್ ಮೈದಾನ(ಎಂಸಿಜಿ) ಗೆ ಭೇಟಿ ನೀಡಿ 2015ರ ವಿಶ್ವಕಪ್ ಟ್ರೋಫಿಯೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ.ಜೊತೆಗೆ ಮೋದಿ ಅವರು ತಮ್ಮ ಕನಸನ್ನು ಬಹಿರಂಗಗೊಳಿಸಿದರು.

ಆಸ್ಟ್ರೇಲಿಯಾದ ಪ್ರಧಾನಿ ಟೋನಿ ಅಬೋಟ್ ಅವರು ಆಯೋಜಿಸಿದ್ದ ವಿಶೇಷ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಕ್ರಿಕೆಟ್ ಲೋಕದ ದಿಗ್ಗಜರಾದ ಸುನಿಲ್ ಗವಾಸ್ಕರ್, ಕಪಿಲ್ ದೇವ್, ಅಲೆನ್ ಬಾರ್ಡರ್, ಡೀನ್ ಜೋನ್ಸ್, ವಿವಿಎಸ್ ಲಕ್ಷ್ಮಣ್ ಮುಂತಾದವರು ಉಪಸ್ಥಿತರಿದ್ದರು. 2015ರ ವಿಶ್ವಕಪ್ ಟ್ರೋಫಿ ಹಾಗೂ ಗವಾಸ್ಕರ್ ಅಲೆನ್ ಬಾರ್ಡರ್ ಟ್ರೋಫಿಯೊಂದಿಗೆ ಎಲ್ಲರೂ ಫೋಟೋ ತೆಗೆಸಿಕೊಂಡರು.

Hope it is a India-Australia World Cup final at MCG: PM Modi

ಆಸ್ಟ್ರೇಲಿಯನ್ನರ ಕ್ರೀಡಾ ಸ್ಪೂರ್ತಿ, ಸಂಸ್ಕೃತಿಯನ್ನು ಮೋದಿ ಹಾಡಿ ಹೊಗಳಿದರು. 161 ವರ್ಷ ಹಳೆಯದಾದ ಎಂಸಿಜಿ ಮೈದಾನದಲ್ಲಿ ಆಸ್ಟ್ರೇಲಿಯನ್ ವೇಗಿಗಳಾದ ಮೆಕ್ ಗ್ರಾಥ್ ಹಾಗೂ ಬ್ರೆಟ್ ಲೀ ವಿರುದ್ಧ ಶತಕ ಗಳಿಸುವುದನ್ನು ನೋಡುವುದೇ ಅದ್ಭುತ ಕ್ಷಣ ಎಂದರು.

ಎಂಸಿಜಿಯಲ್ಲಿನ ಕ್ರಿಕೆಟ್ ಪಂದ್ಯಗಳು ನನ್ನ ನೆನಪಲ್ಲಿ ಸದಾ ನೆಲೆಸಿದೆ. ವಿಶೇಷವಾಗಿ ಬಾಕ್ಸಿಂಗ್ ಡೇ ಪಂದ್ಯಗಳು ಆಷ್ಯಸ್ ಸರಣಿಯ ಪಂದ್ಯಗಳು, 1985ರಲ್ಲಿ ಚಾಂಪಿಯನ್ ಟ್ರೋಫಿ ಗೆದ್ದ ಭಾರತ ಆಡಿದ ಪಂದ್ಯಗಳನ್ನು ನೋಡುವುದೇ ಕಣ್ಣಿಗೆ ಹಬ್ಬ ಎಂದು ಮೋದಿ ವರ್ಣಿಸಿದರು.

ಮಾರ್ಚ್ 29, 2015ರಂದು ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ 2015ರ ಫೈನಲ್ ಪಂದ್ಯ ವೀಕ್ಷಿಸುವ ಅಸೆಯಿದೆ ಎಂದು ಮೋದಿ ತಮ್ಮ ಬಯಕೆ ತೋಡಿಕೊಂಡರು. ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅವರೊಂದಿಗೆ ಸೆಲ್ಫಿ ಫೋಟೊ ತೆಗೆದುಕೊಂಡು ಫೇಸ್ಬುಕ್ ನಲ್ಲೂ ಹಾಕಿಕೊಂಡಿದ್ದಾರೆ. (ಪಿಟಿಐ)

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X