ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟಾಪ್ 10 ಚಿತ್ರಗಳಲ್ಲಿ : ಕೋಪಾ ಅಮೆರಿಕಾ ಶತಕ ಫೈನಲ್ ಸಂಭ್ರಮ

By Mahesh

ನ್ಯೂಜೆರ್ಸಿ, ಜೂನ್ 27: ಕೋಪಾ ಅಮೆರಿಕಾ 2016ರ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಆಟಗಾರರಿಗೆ Deja Vu[ಈ ಹಿಂದೆ ಕಂಡ ದೃಶ್ಯ] ಕಾಡಿದ್ದರೆ ಅದು ಅವರ ತಪ್ಪಲ್ಲ, ಚಿಲಿ ತಂಡದ ವಿರುದ್ಧವೇ ಕಳೆದ ಬಾರಿ ಸೋಲು ಕಂಡಿದ್ದ ಮೆಸ್ಸಿ ಪಡೆ ಈ ಬಾರಿಯೂ ಸೋತು ಸುಣ್ಣವಾಗಿದೆ.ಫೈನಲ್ ಪಂದ್ಯದ ರಸ ನಿಮಿಷಗಳನ್ನು 10 ಚಿತ್ರಗಳಲ್ಲಿ ನಿಮ್ಮ ಮುಂದಿಡುತ್ತಿದ್ದೇವೆ.

ಭಾರತೀಯ ಕಾಲಮಾನ ಪ್ರಕಾರ ಭಾನುವಾರ ಬೆಳಗ್ಗೆ ನಡೆದ ಫೈನಲ್ ಫೈಟ್ ನಲ್ಲಿ ಚಿಲಿ ತಂಡ ಮತ್ತೊಮ್ಮೆ ಕಪ್ ಎತ್ತಿ ಮುತ್ತಿಟ್ಟಿದೆ. ಪೆನಾಲ್ಟಿ ಶೂಟೌಟ್ ನಲ್ಲಿ ಚಿಲಿ 4-2 ಅರ್ಜೆಂಟೀನಾವನ್ನು ಸೋಲಿಸಿದೆ. ವಿಶ್ವಕಪ್ ನಲ್ಲಿ ಜರ್ಮನಿ ವಿರುದ್ಧ, ಕೋಪಾ ಅಮೆರಿಕಾದಲ್ಲಿ ಸತತ ಎರಡು ಬಾರಿ ಚಿಲಿ ವಿರುದ್ಧ ಸೋಲು ಕಂಡ ಅರ್ಜೆಂಟೀನಾ ಹಾಗೂ ಮೆಸ್ಸಿಗೆ ಇದು ಘೋರ ದಿನವಾಗಿ ಪರಿಣಮಿಸಿದೆ.[ಟ್ವಿಟ್ಟರ್ ನಲ್ಲಿ ಲಿಯೊನೆಲ್ ಮೆಸ್ಸಿಯದ್ದೇ ಸುದ್ದಿ, ಸದ್ದು]

ನೈತಿಕ ಹೊಣೆ ಹೊತ್ತು ಮೆಸ್ಸಿ ಅವರು ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳಿದ್ದಾರೆ. ಮೆಸ್ಸಿ ಹಾದಿಯಲ್ಲೇ ಮೆಸ್ಕಾರೆನಾಸ್, ಆಗ್ವೆರೋ ಕೂಡಾ ದೇಶದ ಪರ ಇನ್ಮುಂದೆ ಆಡುವುದಿಲ್ಲ ಎಂದಿದ್ದಾರೆ. [ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ಗುಡ್ ಬೈ ಹೇಳಿದ ಲಿಯೊನೆಲ್ ಮೆಸ್ಸಿ]

ಸುಮಾರು 80 ಸಾವಿರಕ್ಕೂ ಅಧಿಕ ಅಭಿಮಾನಿಗಳನ್ನು ಹೊಂದಿದ್ದ ಮೆಟ್ ಲೈಫ್ ಸ್ಟೇಡಿಯಂನಲ್ಲಿ ಒಂದೆಡೆ ಸಂಭ್ರಮೋತ್ಸವ ಕಂಡು ಬಂದರೆ, ಮತ್ತೊಂದೆಡೆ ದುಃಖದ ವಾತಾವರಣ.

In Pictures : Chile beat Argentina 4-2 on penalties, Copa America Final, Messi Retires

ಶತಕದ ಸಂಭ್ರಮದಲ್ಲಿರುವ ಕೋಪಾ ಅಮೆರಿಕಾ ಕಪ್ ಫೈನಲ್ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಗೋಲು ಗಳಿಸಲು ಎರಡು ತಂಡಗಳಿಗೆ ಆಗಲಿಲ್ಲ. ರೆಡ್ ಕಾರ್ಡ್ ಗಳಿಂದ ಅಧಿಕ ಅವಧಿ, ಪೆನಾಲ್ಟಿ ಶೂಟೌಟ್ ವೇಳೆ ಎರಡು ತಂಡಗಳಲ್ಲಿ ತಲಾ 10 ಆಟಗಾರರು ಮಾತ್ರ ಇದ್ದರು. 2014ರ ಫೈನಲ್ ಪಂದ್ಯದ ಕಾರ್ಬನ್ ಕಾಪಿಯಂತೆ ಕಂಡ ಈ ಪಂದ್ಯದಲ್ಲಿ ಮತ್ತೊಮ್ಮೆ ಚಿಲಿ ವಿಜಯಶಾಲಿಯಾಗಿ ಹೊರಹೊಮ್ಮಿದೆ. [ಅರ್ಜೆಂಟೀನಾ ಮಣಿಸಿ ಕೋಪಾ ಅಮೆರಿಕಾಕ್ಕೆ ಮುತ್ತಿಟ್ಟ ಚಿಲಿ]

ಈ ನಡುವೆ ಕೋಪಾ ಅಮೆರಿಕಾ 2016 ಆಯೋಜಕರು ಟಾಪ್ XI ಪ್ರಕಟಿಸಿದ್ದಾರೆ. ಚಿಲಿ ನಾಯಕ ಗೋಲ್ ಕೀಪರ್ ಕ್ಲಾಡಿಯೋ ಬ್ರಾವೋ ಅವರು ಗೋಲ್ ಕೀಪರ್ ಆಗಿದ್ದರೆ, ಜೀನ್ ಬೀಸೆಯೋರ್, ಗ್ಯಾರಿ ಮೆಡೆಲ್, ನಿಕೊಲಾಸ್ ಒಟಮೆಂಡಿ, ಮಾರಿಸಿಯೊ ಇಸ್ಲಾ ರಕ್ಷಣಾತ್ಮಕ ಆಟಗಾರರಾಗಿ, ಮಿಡ್ ಫೀಲ್ಡರ್ ಗಳಾಗಿ ಚಾರ್ಲ್ಸ್ ಅರಂಗ್ವೇಜ್, ಮೆಸ್ಕಾರೆನಾಸ್, ಅರ್ಟುರೋ ವಿಡಾಲ್ ಇದ್ದಾರೆ. ಫಾರ್ವರ್ಡ್ ನಲ್ಲಿ ಲಿಯೊನೆಲ್ ಮೆಸ್ಸಿ,ಅಲೆಕ್ಸಿಸ್ ಸ್ಯಾಂಚೆಜ್, ಈಡ್ವರ್ಡೊ ವರ್ಗಾಸ್ ಅಯ್ಕೆಯಾಗಿದ್ದಾರೆ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X