ಕಾಮನ್‌ವೆಲ್ತ್‌: ಎರಡು ಪದಕ, ಹಲವು ಜಯ, ಕೆಲವು ಸೋಲು

Posted By:
Indias performance in Commonwealth games 2018 on first day

ಕಾಮನ್‌ವೆಲ್ತ್‌ನಲ್ಲಿ ವ್ಹೇಟ್‌ಲಿಫ್ಟರ್‌ಗಳು ಮೊದಲ ದಿನವೇ ಎರಡು ಪದಕ ಗಳಿಸಿ ಭರವಸೆ ಮೂಡಿಸಿರುವ ಹೊತ್ತಲ್ಲೇ ಬ್ಯಾಡ್‌ಮಿಂಟನ್‌ ಅಂಗಳದಿಂದಲೂ ಭಾರತಕ್ಕೆ ಸಿಹಿ ಸುದ್ದಿ ಬಂದಿದೆ.

ಬ್ಯಾಡ್‌ಮಿಂಟನ್‌ ನ ಗುಂಪು ಪಂದ್ಯದಲ್ಲಿ ಭಾರತದ ಶ್ರೀಕಾಂತ್, ಸೈನಾ ನೆಹ್ವಾಲ್ , ಅಶ್ವಿನಿ ಪೊನ್ನಪ್ಪ, ಶಿಖಿ ರೆಡ್ಡಿ, ಸಾತ್ವಿಕ್ ರಾಂಕಿರೆಡ್ಡಿ ಮತ್ತು ಚಿರಾಜ್ ಶೆಟ್ಟಿ ಅವರುಗಳು ಶ್ರೀಲಂಕಾ ಮತ್ತು ಪಾಕಿಸ್ತಾನದ ವಿರುದ್ಧದ ಗುಂಪು ಪಂದ್ಯದಲ್ಲಿ ಸುಲಭದ ಜಯ ಸಾಧಿಸಿ ಮುಂದಿನ ಹಂತಕ್ಕೆ ಏರಿತು.

ಭಾರತಕ್ಕೆ ಮೊದಲ ಚಿನ್ನ ತಂದಿತ್ತ ಮೀರಾಬಾಯಿ ಚಾನು

ಶ್ರೀಕಾಂತ್ ಮತ್ತು ಸೈನಾ ನೆಹ್ವಾಲ್ ಅವರುಗಳು ತಮ್ಮ ವಿಶ್ವದರ್ಜೆಯ ಆಟದಿಂದ ಗಮನ ಸೆಳೆದರು. ಯುವ ಜೋಡಿ ಸಾತ್ವಿಕ್ ರಾಂಕಿರೆಡ್ಡಿ ಮತ್ತು ಚಿರಾಜ್ ಶೆಟ್ಟಿ ಅವರುಗಳೂ ಕೂಡ ಉತ್ತಮ ಆಟ ಪ್ರದರ್ಶನ ಮಾಡಿದರು.

ದಿನೇಶ್ ಕಾರ್ತಿಕ್ ಪತ್ನಿಗೆ ಗೆಲುವು

ದಿನೇಶ್ ಕಾರ್ತಿಕ್ ಪತ್ನಿಗೆ ಗೆಲುವು

ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರ ಪತ್ನಿ ದೀಪಿಕಾ ಪಲ್ಲಿಕಲ್ ಅವರು ಕಾಮನ್‌ವೆಲ್ತ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದು, ಮೊದಲ ದಿನ ಸ್ಕ್ವಾಶ್‌ ಪಂದ್ಯದಲ್ಲಿ ಗೆಲವು ಸಾಧಿಸಿದ್ದಾರೆ. ದೀಪಿಕಾ ಅವರು ಟ್ರಿನಿಡಾಡ್ ಆಂಡ್ ಟೊಬ್ಯಾಗೊ ನ ಕಾರ್ಲೋಟ್ ನ್ಯಾಗ್ಗೆಸ್ ಅವರನ್ನು ಮಣಿಸಿದ್ದಾರೆ. ಅವರು ಮಿಕ್ಸ್‌ನಲ್ಲಿ ಜೊಷ್ನಾ ಚಿನ್ನಪ್ಪ ಜೊತೆ ಆಡಲಿದ್ದಾರೆ.

ಟೇಬಲ್‌ ಟೆನ್ನಿಸ್‌ನಲ್ಲಿ ಭರವಸೆ

ಟೇಬಲ್‌ ಟೆನ್ನಿಸ್‌ನಲ್ಲಿ ಭರವಸೆ

ಟೇಬಲ್ ಟೆನ್ನಿಸ್ ಮಹಿಳೆಯರ ವಿಭಾಗದಲ್ಲಿ ಭಾರತವು ಇಂದು ಶ್ರೀಲಂಕಾ ವಿರುದ್ಧ ಗುಂಪು ಪಂದ್ಯದಲ್ಲಿ ಗೆಲವು ಸಧಿಸಿತು. ಮೊದಲ ಸಿಂಗಲ್ಸ್‌ನಲ್ಲಿ ಮನಿಕಾ ಬಟ್ರಾ ಅವರು ವಿಜಯ ಸಾಧಿಸಿದರು. ಎರಡನೇ ಸಿಂಗಲ್ಸ್‌ನಲ್ಲಿ ಸುತ್ರಿಕಾ ಮುಖರ್ಜಿ ಅವರು ಗೆಲುವು ಸಾಧಿಸಿದರು ನಂತರ ಡಬಲ್ಸ್‌ನಲ್ಲಿ ಸುತ್ರಿಕಾ ಮತ್ತು ಪೂಜಾ ಸಹಸ್ರಬುದ್ಧಿ ಅವರು ಗೆಲವು ಸಾಧಿಸುವ ಮೂಲಕ ಶ್ರೀಲಂಕಾವನ್ನು 3-0 ಇಂದ ಮಣಿಸಿದರು.

ಮಹಿಳೆಯರ ಹಾಕಿಯಲ್ಲಿ ನಿರಾಸೆ

ಮಹಿಳೆಯರ ಹಾಕಿಯಲ್ಲಿ ನಿರಾಸೆ

ಗೆಲ್ಲುವ ನಿರೀಕ್ಷೆ ಹುಟ್ಟಿಸಿದ್ದ ಮಹಿಳಾ ಹಾಕಿಯಲ್ಲಿ ಭಾರತಕ್ಕೆ ಇಂದು ಅನಿರೀಕ್ಷಿತ ಸೋಲು ಎದುರಾಯಿತು. ವಿಶ್ವ ರ್ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿರುವ ಭಾರತ ಮಹಿಳಾ ಹಾಕಿ ತಂಡವನ್ನು 26ನೇ ಸ್ಥಾನದಲ್ಲಿರುವ ವೇಲ್ಸ್‌ ತಂಡ ಸುಲಭವಾಗಿ ಮಣಿಸಿಬಿಟ್ಟಿತು. ಭಾರತ ಮಹಿಳೆಯರ ತಂಡವು ವೇಲ್ಸ್‌ ವಿರುದ್ಧ 2-3 ಗೋಲುಗಳ ಅಂತರದಲ್ಲಿ ಸೋಲು ಕಂಡಿತು.

ಬಾಸ್ಕೆಟ್‌ಬಾಲ್‌ನಲ್ಲಿ ನಿರಾಸೆ

ಬಾಸ್ಕೆಟ್‌ಬಾಲ್‌ನಲ್ಲಿ ನಿರಾಸೆ

ಭಾರತದ ಮಹಿಳೆಯರ ಬಾಸ್ಕೆಟ್‌ಬಾಲ್ ತಂಡವು ಜಮೈಕಾ ತಂಡದ ವಿರುದ್ಧ ಪ್ರಾಥಮಿಕ ಹಂತದ ಪಂದ್ಯದಲ್ಲಿ ನಿರಾಸೆ ಕಂಡಿದೆ. ಪೂಲ್ ಬಿ ನಲ್ಲಿ ಜಮೈಕಾ ವಿರುದ್ಧ ಆಡಿದ ಭಾರತ ಮಹಿಳೆಯರ ತಂಡವು 57-66 ಅಂತರದಿಂದ ಸೋಲುಂಡಿದೆ.

ಬಾಕ್ಸಿಂಗ್‌ನಲ್ಲಿ ಶುಭಾರಂಭ

ಬಾಕ್ಸಿಂಗ್‌ನಲ್ಲಿ ಶುಭಾರಂಭ

ಭಾರತದ ಪದಕ ಭರವಸೆಯ ವಿಭಾಗ ಬಾಕ್ಸಿಂಗ್‌ನಲ್ಲಿ ಶುಭಾರಂಬ ಮಾಡಿದೆ ಮೊದಲ ದಿನ ಸ್ಟಾರ್ ಬಾಕ್ಸರ್ ಮನೋಜ್ ಕುಮಾರ್ ಅವರು ಒಸಿಟಾ ಉಮೇಹ ಅವರನ್ನು 5-0 ಅಂತರದಿಂದ ಪರಾಭವ ಗೊಳಿಸಿ ಮುಂದಿನ ಹಂತ ತಲುಪಿದ್ದಾರೆ.

ಅತೀ ಆತ್ಮವಿಶ್ವಾಸವೇ ಮುಳುವಾಯ್ತು

ಅತೀ ಆತ್ಮವಿಶ್ವಾಸವೇ ಮುಳುವಾಯ್ತು

ಕಾಮನ್‌ವೆಲ್ತ್‌ ಗೇಮ್ಸ್‌ಗೆ ತೆರಳುವುದಕ್ಕೆ ಮುಂಚೆ ಈ ಬಾರಿ ಮೊದಲ ಸ್ಕ್ವಾಷ್ ಪದಕ ಗೆದ್ದೇ ಗೆಲ್ಲುತ್ತೇನೆ ಎಂದು ಸವಾಲು ಹಾಕಿದ್ದ ಭಾರತೀಯ ಸ್ಕ್ವಾಷ್ ಆಟಗಾರ ಸೌರವ್ ಘೋಷಾರ್ ತೀವ್ರ ನಿರಾಸೆ ಅನುಭವಿಸಿದ್ದಾರೆ. ಮೊದಲ ಎರಡು ಸುತ್ತಿನಲ್ಲಿ ಮುನ್ನಡೆ ಗಳಿಸಿದ್ದ ಅವರು ಇನ್ನುಳಿದ ಮೂರು ಪಂದ್ಯದಲ್ಲಿ ಸೋತಿದ್ದಾರೆ. ಅವರು ಜಮೈಕಾದ ಕ್ರಿಸ್ ಬಿನ್ನಿ ವಿರುದ್ಧ ಸೋತಿದ್ದಾರೆ.

Story first published: Thursday, April 5, 2018, 17:37 [IST]
Other articles published on Apr 5, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ