ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕ್ರೀಡಾ ಅಂಕಣ ಗುರುತುದಾರರ ತರಬೇತಿಗೆ ಅರ್ಜಿ ಆಹ್ವಾನ

By ಪ್ರತಿನಿಧಿ
invited for the training of Sports field Markers

ಕೊಪ್ಪಳ, ಡಿ.21 ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ಪರಿಶಿಷ್ಟ ಜಾತಿ ಉಪಯೋಜನೆ ಯುವಜನರಿಗೆ ಕ್ರೀಡಾ ಅಂಕಣ ಮಾರ್ಕರ್ (ಗುರುತುದಾರರು) ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಯುವಜನರಿಗೆ ಕ್ರೀಡಾ ಅಂಕಣ ಮಾರ್ಕರ್ ತರಬೇತಿಗೆ ಕೇಂದ್ರ ಕಛೇರಿ ಆದೇಶದನ್ವಯ ಅರ್ಜಿ ಆಹ್ವಾನಿಸಲಾಗಿದ್ದು, ಕೊಪ್ಪಳ ಜಿಲ್ಲೆಯ ಆಸಕ್ತ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಯುವಜನರು ಡಿ. 28 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ತರಬೇತಿಯನ್ನು ಇಲಾಖೆ ವತಿಯಿಂದ ಕ್ರೀಡಾಶಾಲೆ ಕೂಡಿಗೆ,ಕುಶಾಲ್ ನಗರ, ಕೊಡಗು ಜಿಲ್ಲೆಯಲ್ಲಿ ಆಯೋಜಿಸುತ್ತಾರೆ. ತರಬೇತಿಯು ವಸತಿ ಸಹಿತವಾಗಿದ್ದು, ಹಾಜರಾಗುವ ಯುವಕ/ಯುವತಿಯರಿಗೆ ಪ್ರಮಾಣ ಪತ್ರ, ಕ್ರೀಡಾಗಂಟು, ಊಟೋಪಹಾರ, ವಸತಿ ವ್ಯವಸ್ಥೆ ಹಾಗೂ ಪ್ರಯಾಣ ಭತ್ಯೆಯನ್ನು ಇಲಾಖೆಯಿಂದ ನೀಡಲಾಗುತ್ತದೆ. ಯುವತಿಯರ ಸಂಖ್ಯೆಯನ್ನು ಆಧರಿಸಿ ಪ್ರತ್ಯೇಕವಾಗಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.

ಭಾರತೀಯ ಬೌಲರ್‌ಗಳ ಪೈಕಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ಆರ್ ಅಶ್ವಿನ್ಭಾರತೀಯ ಬೌಲರ್‌ಗಳ ಪೈಕಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ಆರ್ ಅಶ್ವಿನ್

ಆಸಕ್ತ ಯುವಜನರು ತರಬೇತಿಯ ನಿಗದಿತ ನಮೂನೆ ಅರ್ಜಿಗಳನ್ನು ಕಛೇರಿಯಿಂದ ಪಡೆಯಬೇಕು. ತರಬೇತಿಯನ್ನು ಕರ್ನಾಟಕದ ಯುವಜನರಿಗೆ ಮಾತ್ರ ನೀಡಲಾಗುತ್ತದೆ. ಅರ್ಜಿದಾರರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು.(ಆರ್.ಡಿ.ನಂಬರ್ ಇರುವ ಪ್ರಮಾಣ ಪತ್ರ). ಅರ್ಜಿದಾರರು 18 ರಿಂದ 35 ವರ್ಷ ವಯಸ್ಸಿನವರಾಗಿರಬೇಕು. ಕ್ರೀಡಾ ಅಂಕಣ ಗುರುತುದಾರರು ಕನಿಷ್ಠ 7ನೇ ತರಗತಿ ಓದಿರಬೇಕು. ಅರ್ಜಿದಾರರು ಸ್ವಯಂ ಧೃಡೀಕೃತ ಪ್ರಮಾಣ ಪತ್ರಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಅರ್ಜಿದಾರರ ಹೆಸರು ಹಾಗೂ ಭಾವಚಿತ್ರವುಳ್ಳ ಆಧಾರ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಅಥವಾ ಸರ್ಕಾರದಿಂದ ವಿತರಿಸಿರುವ ಗುರುತಿನ ಚೀಟಿಯ ನಕಲನ್ನು ಲಗತ್ತಿಸಬೇಕು. ಬ್ಯಾಂಕ್ ಖಾತೆ ಕಡ್ಡಾಯವಾಗಿ ಅರ್ಜಿದಾರರ ಹೆಸರಿನಲ್ಲಿರಬೇಕು ಸದರಿ ಪ್ರತಿ ಲಗತ್ತಿಸುವುದು. ಅರ್ಜಿದಾರರು ದೈಹಿಕವಾಗಿ ಸಧೃಡ ಹಾಗೂ ಚಟುವಟಿಕೆಯಿಂದ ಕೂಡಿದವರಾಗಿರಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಂದರ್ಭದಲ್ಲಿ ವೈದ್ಯಕೀಯ ಪ್ರಮಾಣ ಪತ್ರ ಹಾಜರುಪಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ ಮಳೇಮಲ್ಲೇಶ್ವರ ರಸ್ತೆ ಕೊಪ್ಪಳ, ಇಲ್ಲಿ ಕಛೇರಿ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಇಲಾಖಾ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Story first published: Monday, December 21, 2020, 21:23 [IST]
Other articles published on Dec 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X