ಈ ಮಹಾನಗರಕ್ಕೆ ದಕ್ಕಿದೆ 2024ರ ಒಲಿಂಪಿಕ್ಸ್ ಆತಿಥ್ಯ

Posted By:

ನವದೆಹಲಿ, ಸೆಪ್ಟೆಂಬರ್ 14: ಪ್ಯಾರಿಸ್ ನಗರಕ್ಕೆ 2024ರ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸುವ ಅವಕಾಶ ಸಿಕ್ಕಿದೆ. ಅಂತೆಯೇ, 2028ರ ಒಲಿಂಪಿಕ್ಸ್ ನ ಆತಿಥ್ಯ ಲಾಸ್ ಏಂಜಲೀಸ್ ನಗರಕ್ಕೆ ದಕ್ಕಿದೆ.

ಈ ಕುರಿತಂತೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಯ ಕಚೇರಿಯಲ್ಲಿ ನಡೆದ ಸದಸ್ಯ ರಾಷ್ಟ್ರಗಳ ಮತದಾನದಲ್ಲಿ ಪ್ಯಾರಿಸ್ ಹಾಗೂ ಲಾಸ್ ಏಂಜಲೀಸ್ ನಗರಗಳು ಈ ಪ್ರತಿಷ್ಠಿತ ಕ್ರೀಡಾಕೂಟ ಆಯೋಜಿಸುವ ಗೌರವ ಪಡೆದವು.

IOC awards 2024 Olympics to Paris, Los Angeles to host 2028 Games

ಅಲ್ಲದೆ, ಆಧುನಿಕ ಒಲಿಂಪಿಕ್ಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎರಡು ಒಲಿಂಪಿಕ್ಸ್ ಗಳ ಆತಿಥ್ಯ ಪಡೆದ ನಗರಗಳ ಹೆಸರುಗಳನ್ನು ಬಹಿರಂಗಗೊಳಿಸಲಾಗಿದೆ.

ಅಂದಹಾಗೆ, ಈ ಎರಡೂ ನಗರಗಳಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿರುವುದು ಮೂರನೇ ಬಾರಿಯಾಗಿದೆ. ಪ್ಯಾರಿಸ್ ನಲ್ಲಿ 1900 ಹಾಗೂ 1924ರಲ್ಲಿ ಒಲಿಂಪಿಕ್ಸ್ ಆಯೋಜನೆಯಾಗಿದ್ದರೆ, ಲಾಸ್ ಏಂಜಲೀಸ್ ನಲ್ಲಿ 1932 ಹಾಗೂ 1984ರಲ್ಲಿ ಒಲಿಂಪಿಕ್ಸ್ ಆಯೋಜನೆಗೊಂಡಿದ್ದವು.

Story first published: Thursday, September 14, 2017, 1:49 [IST]
Other articles published on Sep 14, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ