ಓಟದರಸ ಉಸೇನ್ ಬೋಲ್ಟ್ ಮೀರಿಸಿದ ಕಂಬಳ ವೀರ ಶ್ರೀನಿವಾಸ್ ಗೌಡ

Karnataka's kambala Jockey breaks Usain bolt's record | Kambala | Usain Bolt | Record

ಉಡುಪಿ, ಫೆಬ್ರವರಿ 14: ಅಥ್ಲೆಟಿಕ್ಸ್‌ನಲ್ಲಿ ಮಿಂಚಿನ ವೇಗದ ಓಟಕ್ಕಾಗಿ ಈಗಲೂ ವಿಶ್ವದಾಖಲೆ ಉಳಿಸಿಕೊಂಡಿರುವ ಓಟದರಸ, ಜಮೈಕಾದ ಉಸೇನ್ ಬೋಲ್ಟ್‌ ಬಗ್ಗೆ ನೀವು ಕೇಳಿರುತ್ತೀರಿ. ಇದೇ ಉಸೇನ್ ಅನ್ನು ಮೀರಿಸುವ ಸಾಧನೆ ಕನ್ನಡಿಗರೊಬ್ಬರು ಮಾಡಿದ್ದಾರೆ. ಕಂಬಳ ಓಟದಲ್ಲಿ ಶ್ರೀನಿವಾಸ ಗೌಡ ಎಂಬವರು ಬೋಲ್ಟ್ ಮೀರಿಸುವ ಕಾಲಾವಧಿ ತೋರಿಸಿದ್ದಾರೆ.

ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆ ಮಾಡಲಿದ್ದಾರೆ ರಾಸ್ ಟೇಯ್ಲರ್

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯವರಾದ 28ರ ಹರೆಯದ ಶ್ರೀನಿವಾಸ್ ಗೌಡ, ಇತ್ತೀಚೆಗೆ ಐಕಳದಲ್ಲಿ ನಡೆದ ನೇಗಿಲು ಹಿರಿಯ ಕಂಬಳದಲ್ಲಿ 142.50 ಮೀಟರ್ ಓಟವನ್ನು ಕೇವಲ 13.62 ಸೆಕೆಂಡ್‌ಗಳಲ್ಲಿ ಮುಗಿಸಿದ್ದಾರೆ. ಇದೇ ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ 100 ಮೀಟರ್ ದೂರವನ್ನು 9.58 ಸೆಕೆಂಡ್‌ಗಳಲ್ಲಿ ಓಡಿದ್ದರು.

ಭಾರತ vs ಕಿವೀಸ್, 0, 0, 1: ಟೆಸ್ಟ್‌ಗೂ ಮುನ್ನ ಸಮಸ್ಯೆಯ ಸುಳಿಯಲ್ಲಿ ಭಾರತ!

ಶ್ರೀನಿವಾಸ್ ಗೌಡ ಅವರು ತೋರಿರುವ 13.62 ಸೆಕೆಂಡ್‌ ಸಾಧನೆ ಕಂಬಳ ಇತಿಹಾಸದಲ್ಲಿ ದಾಖಲೆಯಾಗಿ ಗುರುತಿಸಿಕೊಂಡಿದೆ. ಈ ಕಾಲಾವಧಿ ಸುಮಾರು 30 ವರ್ಷಗಳ ಹಿಂದಿನ ಕಂಬಳ ದಾಖಲೆಯನ್ನು ಮೀರಿಸುವಂತಿದೆ. ಅಷ್ಟೇ ಅಲ್ಲ, ಬೋಲ್ಟ್‌ ಹೆಸರಿನಲ್ಲಿರುವ ದಾಖಲೆಯನ್ನೂ ಸರಿಗಟ್ಟುವಂತಿದೆ.

ಗೌಡ ಅವರು 142.50 ಮೀಟರ್ ಓಟವನ್ನು 13.62 ಮುಗಿಸಿದ್ದಾರೆ. ಇದೇ ಕಾಲಾವಧಿಯನ್ನು 100 ಮೀ. ಓಟಕ್ಕೆ ಹೋಲಿಸಿ ಲೆಕ್ಕಾಚಾರ ಹಾಕಿದರೆ ಶ್ರೀನಿವಾಸ್, 9.55 ಸೆಕೆಂಡ್‌ಗಳಲ್ಲಿ 100 ಮೀ. ಓಟ ಮುಗಿಸಿದಂತಾಗುತ್ತದೆ. ಅಂದರೆ ಇದು ಬೋಲ್ಟ್‌ಗಿಂತ 3 ಸೆಕೆಂಡ್‌ ಉತ್ತಮ ಸಾಧನೆಯಾಗುತ್ತದೆ.

ಐಪಿಎಲ್ 2020ಕ್ಕೆ ನೂತನ ಲೋಗೋ ಬಿಡುಗಡೆಗೊಳಿಸಿದ ಆರ್‌ಸಿಬಿ

ಹಾಗಂತ ಕಂಬಳ ಕೋಣಗಳ ಜೊತೆ ಓಡಿದಾಗಿನ ಕಾಲಾವಧಿಯನ್ನು ಒಬ್ಬನೇ ಓಟಗಾರ ಓಡಿದ ಕಾಲಾವಧಿಗೆ ಹೋಲಿಸಿ ನಿರ್ಧಾರಕ್ಕೆ ಬರುವಂತಿಲ್ಲ. ಅಲ್ಲದೆ ಶ್ರೀನಿವಾಸ್ ಗೌಡ ಅವರು ಓಡಿದ ದೂರಕ್ಕೂ ಬೋಲ್ಟ್‌ ದಾಖಲೆ ನಿರ್ಮಾಣವಾಗಿದ್ದಾಗ ಓಡಿದ್ದ ದೂರಕ್ಕೂ ವ್ಯತ್ಯಾಸವೂ ಇದೆ. ಆದರೆ ಒಂದು ಲೆಕ್ಕಾಚಾರದ ಆಧಾರದಲ್ಲಿ ಕನ್ನಡಿಗ ಮಿಂಚಿನ ಓಟಗಾರನನ್ನು ಮೀರಿಸಿದಂತಾಗುವುದಂತೂ ಹೌದು. ಶ್ರೀನಿವಾಸ ಗೌಡ ಓಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

For Quick Alerts
ALLOW NOTIFICATIONS
For Daily Alerts
Story first published: Friday, February 14, 2020, 15:58 [IST]
Other articles published on Feb 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X