ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕ್ರೀಡಾಪಟುವಾಗಿದ್ದು ಕೆಲಸಹುಡುಕುತ್ತಿದ್ದೀರಾ? ಕಳೆದುಕೊಳ್ಳದಿರಿ ಈ ಅವಕಾಶ

ಬೆಂಗಳೂರು, ಜನವರಿ 20 : ಕ್ರೀಡಾಪಟುಗಳಿಗಾಗಿ ವಿಶೇಷ ಅವಕಾಶವೊಂದು ಕಾಯುತ್ತಿದೆ. ಕ್ರೀಡಾಪಟುವಾಗಿದ್ದು ಕೆಲಸಕ್ಕಾಗಿ ಎದುರು ನೋಡುತ್ತಿದ್ದರೆ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಈ ವರದಿಯನ್ನು ಸಂಪೂರ್ಣವಾಗಿ ಗಮನವಿಟ್ಟು ನೋಡಿ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ

ಕ್ರೀಡಾ ಕೋಟಾದಡಿ ಒಟ್ಟು 44 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ. ಆಯ್ಕೆಯಾದವರು ಕರ್ನಾಟಕದ ವಿವಿಧ ಅಂಚೆ ಘಟಕಗಳು, ಕಚೇರಿಗಳು, ವಿಭಾಗಗಳಲ್ಲಿ ಕೆಲಸ ಮಾಡಬೇಕಿದೆ.

ಕರ್ನಾಟಕ ಅಂಚೆ ವೃತ್ತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಡೌನ್ ಲೋಡ್ ಮಾಡಿಕೊಂಡು ಆಸಕ್ತರು ಸಲ್ಲಿಸಲು 26/2/2020 ಕೊನೆಯ ದಿನವಾಗಿದೆ.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಮತ್ತು ಕ್ರೀಡಾ ಅರ್ಹತೆಗಳನ್ನು ಆಧರಿಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಕ್ರೀಡಾ ಅರ್ಹತೆಗಳಲ್ಲಿ ಮೊದಲು ಅಂತರರಾಷ್ಟ್ರೀಯ ಮಟ್ಟದಲ್ಲಿ ನಂತರ ರಾಷ್ಟ್ರೀಯ ಮಟ್ಟದಲ್ಲಿ ನಂತರ ರಾಜ್ಯ ನಂತರ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಭಾಗವಹಿಸಿದವರಿಗೆ ಆದ್ಯತೆ ನೀಡಲಾಗುತ್ತದೆ.

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು https://www.karnatakapost.gov.in/ ವೆಬ್‌ಸೈಟ್‌ನಲ್ಲಿ ಅರ್ಜಿಗಳನ್ನು ಡೌನ್‌ ಲೋಡ್ ಮಾಡಿಕೊಂಡು, ಅಗತ್ಯ ದಾಖಲೆಗಳ ಜೊತೆ ಸ್ಪೀಡ್ ಅಥವ ರಿಜಿಸ್ಟರ್ ಪೋಸ್ಟ್ ಮೂಲಕ ಕಳಿಸಬೇಕು. ಅಂಚೆ ಕವರ್‌ ಮೇಲೆ ಯಾವ ಹುದ್ದೆಗೆ ಅರ್ಜಿ ಎಂದು ನಿಖರವಾಗಿ ಬರೆಯಬೇಕು.

 ಯಾವ-ಯಾವ ಹುದ್ದೆಗಳು

ಯಾವ-ಯಾವ ಹುದ್ದೆಗಳು

ಕರ್ನಾಟಕ ಅಂಚೆ ವೃತ್ತದಲ್ಲಿ ಖಾಲಿ ಇರುವ ಜ್ಯೂನಿಯರ್ ಅಕೌಂಟ್ (ಪೋಸ್ಟಲ್ ಅಕೌಂಟ್ ಆಫೀಸ್‌ಗಳಲ್ಲಿ) 2 ಹುದ್ದೆಗಳು. ಪೋಸ್ಟಲ್ ಅಸಿಸ್ಟೆಂಟ್ (ಪೋಸ್ಟ್ ಆಫೀಸ್ ಅಥವ ಆಡಳಿತ ಕೇಂದ್ರ) 11, ವಿಂಗಡಣೆ ಸಹಾಯಕ (ರೈಲ್ವೆ ಅಂಚೆ ಕಚೇರಿಗಳಲ್ಲಿ) 4, ಪೋಸ್ಟ್‌ಮನ್ (ಅಂಚೆ ಕಚೇರಿಗಳಲ್ಲಿ) 27 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

 ವಿದ್ಯಾರ್ಹತೆಯ ವಿವರಗಳು

ವಿದ್ಯಾರ್ಹತೆಯ ವಿವರಗಳು

ಜ್ಯೂನಿಯರ್ ಅಕೌಂಟ್ ಹುದ್ದೆಗೆ ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಪದವಿ ಪಡೆದಿರಬೇಕು. ಪೋಸ್ಟಲ್ ಅಸಿಸ್ಟೆಂಟ್ ಹುದ್ದೆಗೆ ಪಿಯುಸಿ, ವಿಂಗಡಣೆ ಸಹಾಯಕ ಹುದ್ದೆಗೆ ಪಿಯುಸಿ, ಪೋಸ್ಟ್ ಮನ್ ಪಿಯುಸಿ ಮತ್ತು ಕನ್ನಡ ಭಾಷೆ ಬರೆಯಲು, ಮಾತನಾಡಲು ಬರಬೇಕು. ಕನಿಷ್ಠ 10ನೇ ತರಗತಿ ತನಕ ಕನ್ನಡ ಮಾಧ್ಯಮದಲ್ಲಿ ಓದಿರಬೇಕು.

 ವಯೋಮಿತಿ ವಿವರಗಳು

ವಯೋಮಿತಿ ವಿವರಗಳು

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಗರಿಷ್ಠ ವಯೋಮಿತಿ 27 ವರ್ಷಗಳು. ನಿಯಮಗಳ ಪ್ರಕಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷದ ವಯೋಮಿತಿ ಸಡಿಲಿಕೆ ಇರುತ್ತದೆ.

 ವೇತನ ಶ್ರೇಣಿಯ ವಿವರಗಳು

ವೇತನ ಶ್ರೇಣಿಯ ವಿವರಗಳು

ಜ್ಯೂನಿಯರ್ ಅಕೌಂಟ್ : 25,500-81,100 ರೂ.ಗಳು (ಭತ್ಯೆಗಳು ಪ್ರತ್ಯೇಕ). ಪೋಸ್ಟಲ್ ಅಸಿಸ್ಟೆಂಟ್ ಹುದ್ದೆಗೆ 25,500-81,100 ರೂ. (ಭತ್ಯೆ ಪ್ರತ್ಯೇಕ), ವಿಂಗಡಣೆ ಸಹಾಯಕ ಹುದ್ದೆಗೆ 25,500-81,100 (ಭತ್ಯೆ ಹೊರತುಪಡಿಸಿ). ಪೋಸ್ಟ್ ಮನ್ ಹುದ್ದೆಗೆ 21,700-69,100 (ಭತ್ಯೆಗಳು ಪ್ರತ್ಯೇಕ) ವೇತನ ನಿಗದಿ ಮಾಡಲಾಗಿದೆ.

 ಕ್ರೀಡಾ ಕೋಟಾದ ವಿವರ

ಕ್ರೀಡಾ ಕೋಟಾದ ವಿವರ

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ 43 ಕ್ರೀಡೆಗಳಲ್ಲಿ ಯಾವುದೇ ಕ್ರೀಡೆಯಲ್ಲಾದರೂ ಸ್ಪರ್ಧಿಸಿರಬೇಕು (ಕ್ರೀಡೆಗಳಪಟ್ಟಿ ನೇಮಕಾತಿ ಅಧಿಸೂಚನೆಯಲ್ಲಿದೆ). ವಿಶ್ವವಿದ್ಯಾಲಯಗಳಿಂದ ಸ್ಪರ್ಧಿಸಿರಬೇಕು. ಆಲ್ ಇಂಡಿಯಾ ಸ್ಕೂಲ್ ಗೇಮ್ಸ್ ಸ್ಪರ್ಧೆಯಲ್ಲಿ ಶಾಲಾ-ಕಾಲೇಜುಗಳಿಂದ ಭಾಗವಹಿಸಿರಬೇಕು. ಅಗತ್ಯ ದಾಖಲೆ ಹೊಂದಿರಬೇಕು.

 ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವುದು ಹೇಗೆ?

https://www.karnatakapost.gov.in/ ವೆಬ್‌ ಸೈಟ್‌ನಲ್ಲಿ ನೇಮಕಾತಿ ಅಧಿಸೂಚನೆ ಇದೆ. ಅರ್ಜಿಯನ್ನು ವೆಬ್‌ ಸೈಟ್ ಮೂಲಕ ಪಡೆದು ಅಗತ್ಯ ದಾಖಲೆಗಳ ನಕಲು ಲಗತ್ತಿಸಿ ಸ್ಪೀಡ್ ಅಥವ ರಿಜಿಸ್ಟರ್ ಪೋಸ್ಟ್ ಮೂಲಕ ಸಲ್ಲಿಸಬಹುದು.

ವಿಳಾಸ : The Assistant Director (R & E)
Chief Postmaster General
Karnataka Circle
Bengaluru 560001

ಈ ವಿಭಾಗಗಳಲ್ಲಿದ್ದವರಿಗೆ ಅರ್ಜಿಗೆ ಅವಕಾಶ;

ಈ ವಿಭಾಗಗಳಲ್ಲಿದ್ದವರಿಗೆ ಅರ್ಜಿಗೆ ಅವಕಾಶ;

ಕ್ರೀಡಾ ಕೋಟಾದ ಅಡಿಯಲ್ಲಿ 43 ವಿವಿಧ ಕ್ರೀಡೆಗಳಿಗೆ ಅವಕಾಶವನ್ನು ನೀಡಲಾಗಿದೆ. ಬಿಲ್ಲುಗಾರಿಕೆ, ಆ್ಯಥ್ಲೆಟಿಕ್, ಬ್ಯಾಟ್ಮಿಂಟನ್, ಬಾಸ್ಕೆಟ್‌ಬಾಲ್, ಕ್ರಿಕೆಟ್, ಚೆಸ್, ಫೂಟ್‌ಬಾಲ್, ಟೆನ್ನಿಸ್ ಸೇರಿದಂತೆ 43 ವಿಭಾಗಳಿವೆ. ಈ ಕ್ರೀಡೆಯಲ್ಲಿ ಸಾಧನೆ ಮಾಡಿ ಗುರುತಿಸಿಕೊಂಡವರು ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ.

Story first published: Monday, January 20, 2020, 12:12 [IST]
Other articles published on Jan 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X