ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

WWEಗೆ ನಿವೃತ್ತಿ ಘೋಷಿಸಿದ ರಸ್ಲಿಂಗ್ ಸೂಪರ್ ಸ್ಟಾರ್ ಅಂಡರ್‌ಟೇಕರ್!

Legend The Undertaker announces retirement from WWE
Undertaker says good bye to WWE after spending 30 years in the ring | WWE | UNDERTAKER

ಕ್ಯಾಲಿಫೋರ್ನಿಯಾ: ವರ್ಲ್ಡ್ ರಸ್ಲಿಂಗ್ ಎಂಟರ್‌ಟೇನ್ಮೆಂಟ್‌(WWE)ನ ಸ್ಟಾರ್ ರಸ್ಲರ್ ಅಂಡರ್ ಟೇಕರ್ WWE ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಸುಮಾರು 30 ವರ್ಷಗಳ ಸುದೀರ್ಘ ವೃತ್ತಿ ಜೀವನದ ಬಳಿಕ 55ರ ಹರೆಯದ ಟೇಕರ್ ಗುದ್ದಾಡುವಾಟ ನಿಲ್ಲಿಸುವ ನಿರ್ಧಾರ ತಾಳಿದ್ದಾರೆ. ಅಂಡರ್ ಟೇಕರ್ ನಿಜವಾದ ಹೆಸರು ಮಾರ್ಕ್ ಕ್ಯಾಲವೇ. ಆದರೆ ಅಮೆರಿಕಾದ ಈ ರಸ್ಲಿಂಗ್ ದಂತಕತೆ ಅಂಡರ್‌ಟೇಕರ್, ಡೆಡ್‌ ಮ್ಯಾನ್ ಎಂಬಿತ್ಯಾದಿ ಹೆಸರುಗಳಿಂದ ರಿಂಗ್‌ನಲ್ಲಿ ಖ್ಯಾತರಾಗಿದ್ದರು.

ಔಟಿಲ್ಲದಿದ್ದರೂ ಔಟ್‌ ನೀಡಿದ್ದೆ: ಸಚಿನ್‌ ವಿವಾದಾತ್ಮಕ ತೀರ್ಪಿನ ಬಗ್ಗೆ ಸ್ಟೀವ್ ಬಕ್ನರ್ ಮಾತುಔಟಿಲ್ಲದಿದ್ದರೂ ಔಟ್‌ ನೀಡಿದ್ದೆ: ಸಚಿನ್‌ ವಿವಾದಾತ್ಮಕ ತೀರ್ಪಿನ ಬಗ್ಗೆ ಸ್ಟೀವ್ ಬಕ್ನರ್ ಮಾತು

ತನ್ನ ಕಡೇಯ ರಿಂಗ್ ಪ್ರವೇಶವಾದ 'ಅಂಡರ್‌ಟೇಕರ್: ದ ಲಾಸ್ಟ್ ರೈಡ್‌'ನಲ್ಲಿ ಪಾಲ್ಗೊಂಡಿದ್ದ ಟೇಕರ್, ತಾನು ಮತ್ತೆ ರಿಂಗ್‌ಗೆ ಪ್ರವೇಶದಿರಲು ನಿರ್ಧರಿಸಿರುವುದಾಗಿ ಹೇಳಿಕೊಂಡಿದ್ದಾರೆ. ಅಂಡರ್ ಟೇಕರ್‌ ಈ ನಿರ್ಧಾರ ರಸ್ಲಿಂಗ್ ಅಭಿಮಾನಿಗಳಿಗೆ ಆಘಾತ ತಂದಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ ನಾಯಕರ ವಾರ್ಷಿಕ ಸಂಬಳ ಎಷ್ಟಿರುತ್ತದೆ ಗೊತ್ತಾ?!ಅಂತಾರಾಷ್ಟ್ರೀಯ ಕ್ರಿಕೆಟ್‌ ನಾಯಕರ ವಾರ್ಷಿಕ ಸಂಬಳ ಎಷ್ಟಿರುತ್ತದೆ ಗೊತ್ತಾ?!

ಇತ್ತೀಚೆಗಷ್ಟೇ WWE ಸ್ಟಾರ್ ರಸ್ಲರ್ ರೇ ಮಿಸ್ಟೀರಿಯೋ ಗಂಭೀರವಾಗಿ ಗಾಯಗೊಂಡು, ನಿವೃತ್ತಿ ಘೋಷಿಸಿದ್ದರು.

'ರಿಂಗ್‌ಗೆ ಮರಳುವ ಬಯಕೆಯಿಲ್ಲ'

'ರಿಂಗ್‌ಗೆ ಮರಳುವ ಬಯಕೆಯಿಲ್ಲ'

'ನಾನು ಯಾವತ್ತಿಗೂ ಅಂದರೆ ಯಾವತ್ತಿಗೂ ನಿವೃತ್ತಿಯ ಬಗ್ಗೆ ಹೇಳಲಾರೆ. ಆದರೆ ನನ್ನ ವೃತ್ತಿ ಜೀವನದ ಈ ಸಂದರ್ಭದಲ್ಲಿ, ನನಗೆ ರಿಂಗ್‌ಗೆ ಮರಳುವ ಬಯಕೆಯಿಲ್ಲ. ಕೌಬಾಯ್ ಆದ ನಾನು ದೂರಕ್ಕೆ ರೈಡ್ ಹೊರಡುತ್ತಿದ್ದೇನೆ,' ಎಂದು ಐದನೇ ಮತ್ತು ಕೊನೆಯ 'ಅಂಡರ್‌ಟೇಕರ್: ದ ಲಾಸ್ಟ್ ರೈಡ್‌' ಡಾಕ್ಯೂಸೀರೀಸ್ ಎಪಿಸೋಡ್‌ನಲ್ಲಿ ಎಜೆ ಸ್ಟೈಲ್ ಜೊತೆ ಕಾದಾಡಿದ್ದ ಅಂಡರ್‌ಟೇಕರ್ ಹೇಳಿದ್ದಾರೆ.

ಅತೀಂದ್ರೀಯ ಶಕ್ತಿಯುಳ್ಳ ಕುಸ್ತಿಪಟು

ಅತೀಂದ್ರೀಯ ಶಕ್ತಿಯುಳ್ಳ ಕುಸ್ತಿಪಟು

ಟೆಕ್ಸಾಸ್ ಮೂಲದ ಮಾರ್ಕ್ ವಿಲಿಯಂ ಅಲಿಯಾಸ್ ಅಂಡರ್ ಟೇಕರ್ 6 ಅಡಿ10 ಇಂಚು ಎತ್ತರ, 136 ಕೆಜಿ ತೂಕುವ ದೈತ್ಯ. ರಿಂಗ್ ನಲ್ಲಿ ಮಾರಣಾಂತಿಕ ಪೆಟ್ಟು ತಿಂದು ಸಾಯುವ ಸ್ಥಿತಿ ತಲುಪಿದರೂ ಎದ್ದು ಬಡಿದಾಡುವ ಅತೀಂದ್ರೀಯ ಶಕ್ತಿಯುಳ್ಳ ಕುಸ್ತಿಪಟುವೀತ ಎಂಬ ಖ್ಯಾತಿ ಟೇಕರ್‌ಗಿದೆ. 1984ರಿಂದಲೇ ಡಬ್ಲ್ಯೂಡಬ್ಲ್ಯೂಇ ವೃತ್ತಿ ಬದುಕಿಗಿಳಿದಿದ್ದ ಅಂಡರ್ ಟೇಕರ್ ಬಹಳಷ್ಟು ಡಬ್ಲ್ಯೂಡಬ್ಲ್ಯೂಇ ವಿಶ್ವ ಚಾಂಪಿಯನ್‌ಷಿಪ್‌ಗಳನ್ನು ಗೆದ್ದಿದ್ದಾರೆ.

ರಿಂಗ್‌ಗೆ ಬರುತ್ತಿದ್ದುದೇ ಅಪರೂಪ

ರಿಂಗ್‌ಗೆ ಬರುತ್ತಿದ್ದುದೇ ಅಪರೂಪ

ಅಂಡರ್‌ಟೇಕರ್ ರಿಂಗ್‌ಗೆ ಎಂಟ್ರಿ ಕೊಟ್ಟರೆಂದರೆ ಸಾಕು; ಅರೆನಾದಲ್ಲಿ ಕೂತ ಪ್ರೇಕ್ಷಕರೆಲ್ಲರಲ್ಲಿ ಹೊಸ ಹುಮ್ಮಸ್ಸು ಆವರಿಸಿಬಿಡುತ್ತದೆ. ಡಬ್ಲ್ಯೂಡಬ್ಲ್ಯೂಇ ದಂತಕತೆ ಅಂಡರ್‌ಟೇಕರ್ ಅಭಿಮಾನಿಗಳನ್ನು ಅಷ್ಟರಮಟ್ಟಿಗೆ ರಂಜಿಸುತ್ತ ಬಂದಿದ್ದವರು. 1965ರ ಮಾರ್ಚ್ 24ರಂದು ಜನಿಸಿರುವ ಅಂಡರ್‌ಟೇಕರ್ ವಯೋಸಹಜ ಬಳಲಿಕೆಯಿಂದ ಇತ್ತೀಚೆಗೆ ರಿಂಗ್‌ಗೆ ಬರುತ್ತಿದ್ದುದೇ ಅಪರೂಪವಾಗಿತ್ತು.

ಕೇನ್ ಜೊತೆ ಬಂದರೆ ಭರಪೂರ ಮನರಂಜನೆ

ಕೇನ್ ಜೊತೆ ಬಂದರೆ ಭರಪೂರ ಮನರಂಜನೆ

ದಿ ಕಮ್ಯಾಂಡೋ, ಮಾರ್ಕ್ ಕಾಲೊಸ್, ಮಾಸ್ಟರ್ ಆಫ್ ಪೇಯ್ನ್, ಡಿಸ್ ಮಾರ್ಗನ್, ದಿ ಪನಿಷರ್, ಎಕ್ಸಾಸ್ ರೆಡ್ ಎಂಬಿತ್ಯಾದಿ ಹೆಸರುಗಳಿರುವ ಅಂಡರ್ ಟೇಕರ್ ಚಿತ್ರ ವಿಚಿತ್ರ ಕುಸ್ತಿಗಳ ಜನಪ್ರಿಯ ಆಟಗಾರ. ನಾಲ್ಕು ಮಕ್ಕಳ ತಂದೆ ಅಂಡರ್ ಟೇಕರ್, ಸಹೋದರ ಕೇನ್ ಜೊತೆ ರಿಂಗ್‌ಗೆ ಇಳಿದರೆ ಆವತ್ತು ರಸ್ಲಿಂಗ್ ಪ್ರಿಯರಿಗೆ ಭರಪೂರ ಮನರಂಜನೆ ದೊರೆಯುತ್ತಿತ್ತು. ದ ಬೀಸ್ಟ್ ಬ್ರಾಕ್‌ ಲೆಸ್ನರ್, ಟ್ರಿಪಲ್ ಎಚ್‌, ಶಾನ್ ಮೈಕಲ್ಸ್, ಬಿಗ್‌ ಶೋ, ಜಾನ್ ಸೆನಾ, ಸ್ಟೋನ್ ಕೋಲ್ಡ್ ಸ್ಟೀವ್ ಆಸ್ಟಿನ್, ಬಟಿಸ್ಟಾ ಇಂಥ ಅನೇಕ ಸ್ಟಾರ್‌ಗಳ ಜೊತೆ ಕಾದಾಡಿ ರಂಜಿಸಿದ್ದ ಅಂಡರ್‌ಟೇಕರ್, ಇನ್ಮುಂದೆ ರಿಂಗ್‌ನಿಂದ ದೂರ ಉಳಿಯಲಿದ್ದಾರೆ.

Story first published: Monday, June 22, 2020, 16:07 [IST]
Other articles published on Jun 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X