ಭಾರತಕ್ಕೆ ಮೊದಲ ಚಿನ್ನ ತಂದಿತ್ತ ಮೀರಾಬಾಯಿ ಚಾನು

Posted By:
Meera Bhai Chanu wins gold in weight lifting

ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಕ್ರೀಡಾಳು ಮೀರಾಬಾಯಿ ಚಾನು ಅವರು ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದಿದ್ದಾರೆ. ಇದು ಆಭರತದ ಎರಡನೇ ಪದಕವಾಗಿದ್ದು, ಕುಂದಾಪುರದ ಗುರುರಾಜ್ ಪೂಜಾರಿ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಕುಂದಾಪುರದ ಗುರುರಾಜ್

ಮಹಿಳೆಯರ 48 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ 23 ವರ್ಷದ ಮೀರಾಬಾಯಿ ಚಾನು ಒಟ್ಟು 196 ಕೆಜಿ ಭಾರವನ್ನು ಸ್ನಾಚ್, ಕ್ಲೀನ್ ಮತ್ತು ಜರ್ಕ್‌ ವಿಭಾಗದಲ್ಲಿ ಎತ್ತುವ ಮೂಲಕ ಹೊಸ ಕಾಮನ್‌ವೆಲ್ತ್‌ ದಾಖಲೆ ನಿರ್ಮಿಸಿದರು. ಮೀರಾಬಾಯಿ ಅವರು ಕ್ರಮವಾಗಿ 80, 84 ಮತ್ತು 86 ಕೆಜಿ ಭಾರವನ್ನು ಎತ್ತಿದರು.

Meera Bhai Chanu wins gold in weight lifting

ಚಿತ್ರಗಳಲ್ಲಿ: ಝಗಮಗಿಸುವ ಆಸ್ಟ್ರೇಲಿಯಾದಲ್ಲಿ ಕಾಮನ್ ವೆಲ್ತ್ ಕ್ರೀಡಾ ಹಬ್ಬ

ಮರಿಯಾ ಹನಿತ್ರಾ ಅವರು ದ್ವಿತೀಯ ಮತ್ತು ಶ್ರೀಲಂಕಾದ ದಿನುಶಾ ಅವರು ಕಂಚಿನ ಪದಕ ಗಳಿಸಿದರು. ಇದು ಭಾರತದ ವೇಟ್‌ಲಿಫ್ಟರ್‌ಗಳು ಗೆದ್ದ ಎರಡನೇ ಪದಕವಾಗಿದ್ದು, ಇಂದೇ ಕುಂದಾಪುರದ ಗುರುರಾಜ್ ಪೂಜಾರಿ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ.

ಕ್ರೀಡೆಯಲ್ಲಿ ಮೀರಾಬಾಯಿ ಚಾನು ಅವರ ಸಾಧನೆ ಗುರುತಿಸಿ ಈಗಾಗಲೇ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

Story first published: Thursday, April 5, 2018, 12:55 [IST]
Other articles published on Apr 5, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ