ನಮ್ಮೂರ ಪ್ರತಿಭೆ: ರಾಷ್ಟ್ರೀಯ ಕ್ರೀಡಾಪಟು ಕಾರವಾರದ ಚಿನ್ನದ ಹುಡುಗಿ ನಿವೇದಿತಾ ಸಾವಂತ

ಕಾರವಾರದ ಚಿನ್ನದ ಹುಡುಗಿ ನಿವೇದಿತಾ ಸಾವಂತ ಅವರು ರಾಜ್ಯಮಟ್ಟದ ಹೆಮರ್ ಥ್ರೋನಲ್ಲಿ ಬೆಳ್ಳಿ ಮತ್ತು ಡಿಸ್ಕಸ್ ಥ್ರೋನಲ್ಲಿ ಕಂಚಿನ ಪದಕ ಗೆದ್ದು ಹೆತ್ತವರಿಗೆ ಮತ್ತು ಉತ್ತರ ಕನ್ನಡ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ದಿನಾಂಕ 8-5-22 ರಿಂದ 9-5-22ರವರೆಗೆ ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಷನ್ ಮತ್ತು ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಮುಕ್ತ ಪುರುಷರು ಮತ್ತು ಮಹಿಳೆಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕಾರವಾರದ ಚಿನ್ನದ ಹುಡುಗಿ ನಿವೇದಿತಾ ಪ್ರಶಾಂತ ಸಾವಂತ ಭಾವಹಿಸಿ ಮಹಿಳೆಯರ ಹೆಮರ್ ಥ್ರೋ ವಿಭಾಗದಲ್ಲಿ 40.08 ಮೀಟರ್ ಹೆಮರ್ ಥ್ರೋ ಮಾಡುವ ಮೂಲಕ ಬೆಳ್ಳಿ ಪದಕ, ಡಿಸ್ಕಸ್ ಥ್ರೋ ವಿಭಾಗದಲ್ಲಿ 41.90 ಮೀಟರ್ ಎಸೆಯುವ ಮೂಲಕ ಕಂಚಿನ ಪದಕವನ್ನು ಪಡೆದಿದ್ದಾಳೆ.

ನಮ್ಮೂರ ಪ್ರತಿಭೆ: ಕುಸ್ತಿಯಲ್ಲಿ 'ಕರ್ನಾಟಕದ ಕಿಶೋರಿ'ಯಾದ ಹಳಿಯಾಳದ ಸುಜಾತಾ ಪಾಟೀಲ್ನಮ್ಮೂರ ಪ್ರತಿಭೆ: ಕುಸ್ತಿಯಲ್ಲಿ 'ಕರ್ನಾಟಕದ ಕಿಶೋರಿ'ಯಾದ ಹಳಿಯಾಳದ ಸುಜಾತಾ ಪಾಟೀಲ್

ನಿವೇದಿತಾ ಕಳೆದ 10 ವರ್ಷಗಳಿಂದ ಕಾರವಾರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ತರಬೇತುದಾರರಾದ ಪ್ರಕಾಶ ರೇವಣಕರ ಬಳಿ ಕಾರವಾರದ ಮಾಲಾದೇವಿ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್‌ನಲ್ಲಿ ತರಬೇತಿ ಪಡೆಯುತ್ತಿದ್ದರು. ರಾಷ್ಟ್ರಮಟ್ಟದಲ್ಲಿ ಡಿಸ್ಕಸ್ ಥ್ರೋ ವಿಭಾಗ ಮತ್ತು ಶಾಟ್ ಪುಟ್ ಥ್ರೋ ವಿಭಾಗದಲ್ಲಿ 19 ಪದಕಗಳನ್ನು ಪಡೆದಿದ್ದು, ಕ್ರೀಡಾ ಕೋಟಾದ ಅಡಿಯಲ್ಲಿ ತುಮಕೂರಿನ ಸಿದ್ದಗಂಗಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ವಿಭಾಗದಲ್ಲಿ ಪದವಿಯನ್ನು ಪಡೆದಿದ್ದಾರೆ ಮತ್ತು ಪ್ರಸ್ತುತ ಮುಂಬೈನ ಟಿಸಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ವೃತ್ತಿಪರ ರಾಷ್ಟ್ರೀಯ ಅಥ್ಲೀಟ್

ವೃತ್ತಿಪರ ರಾಷ್ಟ್ರೀಯ ಅಥ್ಲೀಟ್

ನಿವೇದಿತಾರವರ ಈ ಕ್ರೀಡಾ ಸಾಧನೆಗೆ ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಸದಾನಂದ ನಾಯ್ಕ, ಕಾರ್ಯದರ್ಶಿಗಳಾದ ಕೆ.ಆರ್. ನಾಯಕ ಹಾಗೂ ಜಿಲ್ಲೆಯ ಅಪಾರ ಕ್ರೀಡಾ ಪ್ರೇಮಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಕುಮಾರಿ ನಿವೇದಿತಾ ಸಾವಂತ್, ಕಾರವಾರದ 'ಚಿನ್ನದ ಹುಡುಗಿ' ಎಂದೂ ಕರೆಯಲ್ಪಡುವ ವೃತ್ತಿಪರ ರಾಷ್ಟ್ರೀಯ ಅಥ್ಲೀಟ್. 19ನೇ ಮಾರ್ಚ್ 1998ರಂದು ಪ್ರಶಾಂತ್ ಸಾವಂತ್ ಮತ್ತು ಸಲಿಜಾ ಪುತ್ರಿಯಾಗಿ ಜನಿಸಿದರು. ತಂದೆ ದೈಹಿಕ ಶಿಕ್ಷಕರಾಗಿದ್ದು, ತಾಯಿ ಆರೋಗ್ಯ ಸಹಾಯಕಿಯಾಗಿದ್ದಾರೆ. ನಿವೇದಿತಾ ಕರ್ನಾಟಕದಲ್ಲಿಯೇ ಶಿಕ್ಷಣ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ ಪದವಿ ಪೂರ್ಣಗೊಳಿಸಿದ್ದಾರೆ.

ಚಿನ್ನದ ಹುಡುಗಿ ನಿವೇದಿತಾ ಕುರಿತು

ಚಿನ್ನದ ಹುಡುಗಿ ನಿವೇದಿತಾ ಕುರಿತು

ಪೂರ್ಣ ಹೆಸರು- ನಿವೇದಿತಾ ಪ್ರಶಾಂತ ಸಾವಂತ

ಜನ್ಮ ದಿನಾಂಕ- ಮಾರ್ಚ್ 19, 1998

ಶಿಕ್ಷಣ

ಸೆಂಟ್ ಮೈಕಲ್ಸ್ ಹೈಸ್ಕೂಲ್, ಕಾರವಾರ

ಸೆಂಟ್ ಜೋಸೆಪ್ ಪಿಯು ಕಾಲೇಜು (ವಿಜ್ಞಾನ) ಕಾರವಾರ

ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯ, ತುಮಕೂರು

ನಿವೇದಿತಾ ಹೇಳುವ ಪ್ರಕಾರ, "2010ರಿಂದ ನನ್ನ ಶಿಕ್ಷಣದ ಜೊತೆ ಜೊತೆಗೆ ಕ್ರೀಡೆಗಳ ಬಗ್ಗೆಯೂ ನನ್ನ ಉತ್ಸಾಹ ಮತ್ತು ಪ್ಯಾಶನ್ ಬೆಳೆಯಿತು. ಅಥ್ಲೆಟಿಕ್ಸ್‌ನಲ್ಲಿನ ನನ್ನ ಪ್ರಯಾಣವು ನನ್ನ ಗುರು ಪ್ರಕಾಶ್ ರೇವಣಕರ್ ಮಾರ್ಗದರ್ಶನದ ಅಡಿಯಲ್ಲಿ "ಥ್ರೋವಿಂಗ್ ಥಿಂಗ್ಸ್ ಫಾರ್' ಅನ್ನು ಪ್ರೀತಿಸುವಂತೆ ಮಾಡಿತು. ಹೌದು, ನಾನು ಡಿಸ್ಕಸ್ ಎಸೆತ ಮತ್ತು ಶಾಟ್‌ಪುಟ್‌ ಎಸೆತದಲ್ಲಿ ರಾಷ್ಟ್ರೀಯ ಚಿನ್ನದ ಪದಕ ವಿಜೇತೆ," ಎಂದು ಹೇಳಿದ್ದಾರೆ.

ನಮ್ಮೂರ ಪ್ರತಿಭೆ: ದೈಹಿಕ ಶಿಕ್ಷಕಿಯ ಸವಾಲುಗಳೇ ಅವಳನ್ನು ಬಲಗೊಳಿಸಿದಾಗ

ಚಿನ್ನದ ಹುಡುಗಿ ನಿವೇದಿತಾಳ ಪದಕ ಬೇಟೆ

ಚಿನ್ನದ ಹುಡುಗಿ ನಿವೇದಿತಾಳ ಪದಕ ಬೇಟೆ

* ನಿವೇದಿತಾ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಶಿಪ್‌ಗಳಲ್ಲಿ ಭಾಗವಹಿಸಿದ್ದು, 12 ಚಿನ್ನ, 8 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಗೆದ್ದಿದ್ದಾಳೆ.

* ನಿವೇದಿತಾ ಸತತ 8 ವರ್ಷಗಳ ಕಾಲ (2009-2016) ರಾಜ್ಯ ಚಾಂಪಿಯನ್ ಆಗಿದ್ದಾಳೆ.

* ಸತತ 3 ವರ್ಷಗಳ ಕಾಲ ಕರ್ನಾಟಕ ತಂಡದ ನಾಯಕಿಯಾಗಿ ಮತ್ತು ಧ್ವಜಧಾರಿಯಾಗಿ ನಿವೇದಿತಾ ರಾಷ್ಟ್ರಮಟ್ಟದಲ್ಲಿ ತಂಡವನ್ನು ಮುನ್ನಡೆಸಿದ್ದಾಳೆ.

* ನಾನು ಡಿಸ್ಕಸ್ ಥ್ರೋ ಮತ್ತು ಶಾಟ್ ಪುಟ್ ಥ್ರೋನಲ್ಲಿ ರಾಜ್ಯ ದಾಖಲೆಯನ್ನು ಹೊಂದಿದ್ದಾಳೆ.

* ನಿವೇದಿತಾ ನಿರಂತರವಾಗಿ 4 ವರ್ಷಗಳ ಕಾಲ ಅಥ್ಲೆಟಿಕ್ಸ್ ಮತ್ತು ಫುಟ್ಬಾಲ್‌ನಲ್ಲಿ ಅಖಿಲ ಭಾರತ ವಿಶ್ವವಿದ್ಯಾಲಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ (VTU) ಅನ್ನು ಪ್ರತಿನಿಧಿಸಿದ್ದಾಳೆ.

ರಾಷ್ಟ್ರಕ್ಕಾಗಿ ಚಿನ್ನದ ಪದಕ ಗೆಲ್ಲುವಾಸೆ

ರಾಷ್ಟ್ರಕ್ಕಾಗಿ ಚಿನ್ನದ ಪದಕ ಗೆಲ್ಲುವಾಸೆ

* ನಿವೇದಿತಾ ಸಾವಂತ ಕಳೆದ ನಾಲ್ಕು ವರ್ಷಗಳಿಂದ VTUನಲ್ಲಿ ತನ್ನದೇ ಆದ ದಾಖಲೆಗಳನ್ನು ರಚಿಸಿ "ಯೂನಿವರ್ಸಿಟಿ ಬ್ಲೂ' ಎಂದು ಶೀರ್ಷಿಕೆ ಮಾಡಿದ್ದಾಳೆ.

* ನಿವೇದಿತಾಳನ್ನು ಕರ್ನಾಟಕ ಸರ್ಕಾರ ಮತ್ತು ಇನ್ನೂ ಅನೇಕರು ಗೌರವಿಸಿ, ಸನ್ಮಾನಿಸಿದ್ದಾರೆ. "ರಾಜ್ಯ ಯುವ ಪ್ರಶಸ್ತಿ'(2016), "AVVA" ಪ್ರಶಸ್ತಿ ಮತ್ತು ಮುಂತಾದ ಸಂಸ್ಥೆಗಳು ಪ್ರಶಸ್ತಿ ನೀಡಿವೆ.

* ನಿವೇದಿತಾ ಟಾರ್ಚ್‌ಧಾರಿಯಾಗಿ ಕಾಮನ್‌ವೆಲ್ತ್ ಆಟಗಳ ಭಾಗವಾಗಿದ್ದಾಳೆ.

ಕ್ರೀಡೆ ಬಗ್ಗೆ ಇರುವ ನನ್ನ ಉತ್ಸಾಹ ಮತ್ತು ನನ್ನ ಕಂಪನಿಯ ಆಳವಾದ ಗಮನಾರ್ಹತೆ, ಶ್ರಮವಹಿಸಲು ಪ್ರೇರೇಪಿಸುತ್ತದೆ. ವೃತ್ತಿ ಜೀವನವನ್ನು ಮೀರಿ ನನ್ನ ರಾಷ್ಟ್ರಕ್ಕಾಗಿ ಚಿನ್ನದ ಪದಕ ಮತ್ತು ನನ್ನ ಖ್ಯಾತಿಯನ್ನು ಗಳಿಸಲು ಬೆವರು, ರಕ್ತ ಮತ್ತು ಕಣ್ಣೀರು ಸುರಿಸುತ್ತೇನೆ ಎಂದು ನಿವೇದಿತಾ ಹೇಳುತ್ತಾರೆ.

For Quick Alerts
ALLOW NOTIFICATIONS
For Daily Alerts
Story first published: Thursday, May 12, 2022, 15:50 [IST]
Other articles published on May 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X