ಇಶಾಂತ್ ಶರ್ಮ ಸೇರಿದಂತೆ 27 ಸಾಧಕರಿಗೆ ಅರ್ಜುನ ಪ್ರಶಸ್ತಿ

ಬೆಂಗಳೂರು, ಆ. 21: ದೇಶದ ಕ್ರೀಡಾಪಟುಗಳನ್ನು ಉತ್ತೇಜಿಸುವ ಸಲುವಾಗಿ ಸರ್ಕಾರದಿಂದ ನೀಡಲಾಗುವ ಕ್ರೀಡಾ ಸಾಧಕ ಪ್ರಶಸ್ತಿಗಳ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ. ರೋಹಿತ್ ಶರ್ಮ ಸೇರಿದಂತೆ ಐವರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಲಭಿಸಿದೆ. ಅರ್ಜುನ ಪ್ರಶಸ್ತಿ ಪಡೆದವರ ವಿವರ ಇಲ್ಲಿದೆ...
ಕೇಂದ್ರ ಯುವಜನ ಹಾಗೂ ಕ್ರೀಡಾ ಸಚಿವಾಲಯವು ಪ್ರಶಸ್ತಿಯನ್ನು ಘೋಷಿಸಿದೆ. ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಪಟ್ಟಿ ಪ್ರಕಟಿಸಿದ್ದು, ಅರ್ಜುನ ಪ್ರಶಸ್ತಿಗೆ ಜಸ್ಟೀಸ್(ನಿವೃತ್ತ) ಮುಕುಂದಕಂ ಶರ್ಮ ನೇತೃತ್ವದ ಸಮಿತಿ ಕ್ರೀಡಾ ಸಚಿವಾಲಯಕ್ಕೆ ನೀಡಿದ್ದ ಶಿಫಾರಸ್ಸಿನ ಅನ್ವಯ 29 ಮಂದಿಗೆ ಬದಲಾಗಿ 27 ಕ್ರೀಡಾಪಟುಗಳಿಗೆ ಈ ಬಾರಿ ಅರ್ಜುನ ಪ್ರಶಸ್ತಿ ಲಭಿಸಿದೆ.
27 ಮಂದಿ ಪ್ರಶಸ್ತಿ ವಿಜೇತರ ಪೈಕಿ ಕ್ರಿಕೆಟರ್ ಇಶಾಂತ್ ಶರ್ಮ, ಬಿಲ್ವಿದ್ಯೆ ಪಟು ಅತನು ದಾಸ್, ಹಾಕಿ ಆಟಗಾರ್ತಿ ದೀಪಿಕಾ ದಾಸ್, ಅಥ್ಲೀಟ್ ದ್ಯುತಿ ಚಂದ್, ಟೆನಿಸ್ ಆಟಗಾರ ದಿವಿಜ್ ಶರಣ್ ಇದ್ದಾರೆ.
| 2020ನೇ ಸಾಲಿನ ಅರ್ಜುನ ಪ್ರಶಸ್ತಿ ವಿಜೇತರ ಪಟ್ಟಿ | ||
|---|---|---|
| ಕ್ರಮ ಸಂಖ್ಯೆ | ಕ್ರೀಡಾಪಟು | ಕ್ರೀಡೆ |
| 01 | ಅತನು ದಾಸ್ | ಆರ್ಚರಿ |
| 02 | ದ್ಯುತಿ ಚಂದ್ | ಅಥ್ಲೆಟಿಕ್ಸ್ |
| 03 | ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ | ಬಾಡ್ಮಿಂಟನ್ |
| 04 | ಚಿರಾಗ್ ಚಂದ್ರಶೇಖರ್ ಶೆಟ್ಟಿ | ಬಾಡ್ಮಿಂಟನ್ |
| 05 | ವಿಶೇಷ್ ಭೃಗುವಂಶಿ | ಬಾಸ್ಕೆಟ್ ಬಾಲ್ |
| 06 | ಸುಬೇದಾರ್ ಮನೀಶ್ ಕೌಶಿಕ್ | ಬಾಕ್ಸಿಂಗ್ |
| 07 | ಲವ್ಲೀನಾ ಬೊರ್ಗೊಹೈನ್ | ಬಾಕ್ಸಿಂಗ್ |
| 08 | ಇಶಾಂತ್ ಶರ್ | ಕ್ರಿಕೆಟ್ |
| 09 | ದೀಪ್ತಿ ಶರ್ಮ | ಕ್ರಿಕೆಟ್ |
| 10 | ಸಾವಂತ್ ಅಜಯ್ ಅನಂತ್ | ಈಕ್ವೆಷ್ಟ್ರಿಯನ್ |
| 11 | ಸಂದೇಶ್ ಜಿಂಗಾನ್ | ಫುಟ್ಬಾಲ್ |
| 12 | ಅದಿತಿ ಅಶೋಕ್ | ಗಾಲ್ಫ್ |
| 13 | ಆಕಾಶ್ ದೀಪ್ ಸಿಂಗ್ | ಹಾಕಿ |
| 14 | ದೀಪಿಕಾ | ಹಾಕಿ |
| 15 | ದೀಪಕ್ | ಕಬಡ್ಡಿ |
| 16 | ಕಾಳೆ ಸರಿಕಾ ಸುಧಾಕರ್ | ಖೋ ಖೋ |
| 17 | ದತ್ತು ಬಾಬಬ್ ಭೊಕನಾಲ್ | ರೋಯಿಂಗ್ |
| 18 | ಮನು ಬಾಕರ್ | ಶೂಟಿಂಗ್ |
| 19 | ಸೌರಭ್ ಚೌಧರಿ | ಶೂಟಿಂಗ್ |
| 20 | ಮಧುರಿಕ ಸುಹಾಸ್ ಪಾಟ್ಕರ್ | ಟೇಬಲ್ ಟೆನಿಸ್ |
| 21 | ದಿವಿಜ್ ಶರಣ್ | ಟೆನಿಸ್ |
| 22 | ಶಿವ ಕೇಶವನ್ | ಚಳಿಗಾಲ ಕ್ರೀಡೆ |
| 23 | ದಿವ್ಯಾ ಕಾಕ್ರಾನ್ | ಕುಸ್ತಿ |
| 24 | ರಾಹುಲ್ ಅವಾರೆ | ಕುಸ್ತಿ |
| 25 | ಸುಯಾಶ್ ನಾರಾಯಣ್ ಜಾಧವ್ | ಪ್ಯಾರಾ ಈಜು |
| 26 | ಸಂದೀಪ್ | ಪ್ಯಾರಾ ಅಥ್ಲೆಟಿಕ್ಸ್ |
| 27 | ಮನೀಶ್ ನರ್ವಾಲ್ | ಪ್ಯಾರಾ ಶೂಟಿಂಗ್ |
Story first published: Saturday, August 22, 2020, 10:02 [IST]
Other articles published on Aug 22, 2020
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications