ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕಾಮನ್‌ವೆಲ್ತ್ ಗೇಮ್ಸ್‌ನಿಂದ ನೀರಜ್ ಚೋಪ್ರಾ ಔಟ್; ಕನಸು ನನಸಾಗಲಿಲ್ಲ ಎಂದು ಬೇಸರಗೊಂಡ ಚಿನ್ನದ ಹುಡುಗ

Neeraj Chopra confirms that he is not participating in Commonwealth games 2022

ಕಳೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದ ನೀರಜ್ ಚೋಪ್ರಾ ಇತ್ತೀಚೆಗಷ್ಟೆ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿಯೂ ಕೂಡ ರಜತ ಪದಕ ಗೆದ್ದು ಮಿಂಚಿದ್ದರು. ಈಗಾಗಲೇ ಸಾಕಷ್ಟು ಪದಕ ಬೇಟೆಯಾಡಿರುವ ನೀರಜ್ ಚೋಪ್ರಾ ಈ ಬಾರಿ ಬರ್ಮಿಂಗ್‍ಹ್ಯಾಮ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವುದಿಲ್ಲ ಎಂಬ ಸುದ್ದಿ ಹರಿದಾಡಿತ್ತು.

Chess Olympiad 2022: ಚೆನ್ನೈ ಹೊಟೇಲ್ ಆತಿಥ್ಯಕ್ಕೆ ಮನಸೋತ ಸ್ಪ್ಯಾನಿಷ್ ಚೆಸ್ ಗ್ರ್ಯಾಂಡ್‌ಮಾಸ್ಟರ್Chess Olympiad 2022: ಚೆನ್ನೈ ಹೊಟೇಲ್ ಆತಿಥ್ಯಕ್ಕೆ ಮನಸೋತ ಸ್ಪ್ಯಾನಿಷ್ ಚೆಸ್ ಗ್ರ್ಯಾಂಡ್‌ಮಾಸ್ಟರ್

ಹೌದು, ನಿನ್ನೆಯಷ್ಟೇ ಈ ಕುರಿತಾದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ನೀರಜ್ ಚೋಪ್ರಾ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಇದೇ ತಿಂಗಳ 28ರಂದು ಆರಂಭಗೊಳ್ಳಲಿರುವ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಕುರಿತಾಗಿ ನೀರಜ್ ಚೋಪ್ರಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಇದೀಗ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ನೀರಜ್ ಚೋಪ್ರಾ ತಾವು ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ.

ಈ ಬಾರಿ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಭಾರತವನ್ನು ಈ ತಂಡ ಸೋಲಿಸಿ ಚಾಂಪಿಯನ್ ಆಗಲಿದೆ ಎಂದ ಪಾಂಟಿಂಗ್ಈ ಬಾರಿ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಭಾರತವನ್ನು ಈ ತಂಡ ಸೋಲಿಸಿ ಚಾಂಪಿಯನ್ ಆಗಲಿದೆ ಎಂದ ಪಾಂಟಿಂಗ್

ಜುಲೈ 27ರ ಬುಧವಾರದಂದು 12.11AMಗೆ ಟ್ವೀಟ್ ಮಾಡಿರುವ ನೀರಜ್ ಚೋಪ್ರಾ ಈ ಕೆಳಕಂಡಂತೆ ವಿಶೇಷ ಪತ್ರ ಬರೆದುಕೊಂಡು ಬೇಸರ ಹೊರಹಾಕಿದ್ದಾರೆ.

ಕಾರಣ ಬಿಚ್ಚಿಟ್ಟ ನೀರಜ್ ಚೋಪ್ರಾ

'ಎಲ್ಲರಿಗೂ ನಮಸ್ಕಾರ, ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಾನು ದೇಶವನ್ನು ಪ್ರತಿನಿಧಿಸಲು ಸಾಧ್ಯವಾಗುವುದಿಲ್ಲ ಎಂದು ನಿಮಗೆ ತಿಳಿಸಲು ನನಗೆ ತುಂಬಾ ನಿರಾಶೆಯಾಗಿದೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನನ್ನ ನಾಲ್ಕನೇ ಎಸೆತದ ಸಮಯದಲ್ಲಿ ನನ್ನ ತೊಡೆಸಂದು ಗಾಯಕ್ಕೊಳಗಾಗಿದ್ದೇನೆ. ನಂತರ ಅಮೆರಿಕಾದ ವೈದ್ಯರು ಪರೀಕ್ಷೆ ನಡೆಸಿದ್ದು, ಸಣ್ಣ ಸ್ಟ್ರೈನ್ ಪತ್ತೆಯಾಗಿದ್ದು, ವೈದ್ಯರು ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ' ಎಂದು ನೀರಜ್ ಚೋಪ್ರಾ ಬರೆದುಕೊಂಡಿದ್ದಾರೆ.

ಭವಿಷ್ಯವನ್ನು ಪರಿಗಣಿಸಿ ಕಾಮನ್‌ವೆಲ್ತ್‌ನಿಂದ ಹಿಂದಕ್ಕೆ

ಭವಿಷ್ಯವನ್ನು ಪರಿಗಣಿಸಿ ಕಾಮನ್‌ವೆಲ್ತ್‌ನಿಂದ ಹಿಂದಕ್ಕೆ

ಇನ್ನೂ ಮುಂದುವರೆದು ಬರೆದುಕೊಂಡಿರುವ ನೀರಜ್ ಚೋಪ್ರಾ ಮುಂದಿನ ದಿನಗಳಲ್ಲಿ ಹೆಚ್ಚಿನ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕೆಂದರೆ ಸದ್ಯ ವಿಶ್ರಾಂತಿ ತೆಗೆದುಕೊಳ್ಳಬೇಕಾದ ಅಗತ್ಯವಿದೆ. ಹೀಗಾಗಿ ಮುಂದಿನ ಭವಿಷ್ಯದ ದಿನಗಳನ್ನು ತಲೆಯಲ್ಲಿಟ್ಟುಕೊಂಡು ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹಿಂದೆ ಸರಿದಿದ್ದಾಗಿ ನೀರಜ್ ಚೋಪ್ರಾ ಸ್ಪಷ್ಟ ಪಡಿಸಿದ್ದಾರೆ.

ನನ್ನ ಮತ್ತು ವೀರೇಂದ್ರ ಸೆಹ್ವಾಗ್ ಆಟದ ವ್ಯತ್ಯಾಸ ಏನು ಅಂತ ಹೇಳಿದ ರಾಹುಲ್ ದ್ರಾವಿಡ್ | OneIndia Kannada
ಹಲವು ದಿನಗಳ ಕನಸು ನನಸಾಗಲಿಲ್ಲ

ಹಲವು ದಿನಗಳ ಕನಸು ನನಸಾಗಲಿಲ್ಲ

ಇನ್ನು ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನ ಉದ್ಘಾಟನೆಯ ವೇಳೆ ಭಾರತದ ಧ್ವಜದಾರಿಯಾಗಿ ನೀರಜ್ ಚೋಪ್ರಾ ಭಾಗವಹಿಸಬೇಕಿತ್ತು. ಆದರೆ, ಇದೀಗ ಅದು ಸಾಧ್ಯವಾಗದೇ ಇರುವುದರಿಂದ ತುಂಬಾ ದಿನಗಳ ಈ ತನ್ನ ಕನಸು ನನಸಾಗುತ್ತಿಲ್ಲ ಎಂಬ ನೋವು ತನ್ನನ್ನು ಕಾಡುತ್ತಿದೆ ಎಂದು ನೀರಜ್ ಚೋಪ್ರಾ ಬರೆದುಕೊಂಡಿದ್ದಾರೆ.

ನೀರಜ್ ಚೋಪ್ರಾ ಗೆದ್ದಿರುವ ಪದಕಗಳ ಪಟ್ಟಿ:

• 2016 - ಸೌತ್ ಏಷ್ಯನ್ ಗೇಮ್ಸ್ - ಚಿನ್ನ

• 2016 - ಏಷ್ಯನ್ ಜೂನಿಯರ್ ಚಾಂಪಿಯನ್‍ಶಿಪ್ - ಬೆಳ್ಳಿ

• 2016 - ವಿಶ್ವ ಅಂಡರ್ 20 ಚಾಂಪಿಯನ್‍ಶಿಪ್ - ಚಿನ್ನ

• 2017 - ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಸರಣಿ - ಬೆಳ್ಳಿ

• 2017 - ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಸರಣಿ - ಬೆಳ್ಳಿ

• 2017 - ಏಷ್ಯನ್ ಗ್ರ್ಯಾಂಡ್ ಪ್ರಿಕ್ಸ್ ಸರಣಿ - ಕಂಚು

• 2018 - ಆಫೆನ್‌ಬರ್ಗ್ ಜಾವೆಲಿನ್ ಥ್ರೋ ಮೀಟ್ - ಬೆಳ್ಳಿ

• 2018 - ಕಾಮನ್ ವೆಲ್ತ್ ಗೇಮ್ಸ್ - ಚಿನ್ನ

• 2018 - ಸಾಟ್ ವಿಲ್ಲೆ ಅಥ್ಲೆಟಿಕ್ಸ್ ಮೀಟ್ - ಚಿನ್ನ

• 2018 - ಏಷ್ಯನ್ ಗೇಮ್ಸ್ - ಚಿನ್ನ

• 2020 - ಅಥ್ಲೆಟಿಕ್ಸ್ ಸೆಂಟ್ರಲ್ ನಾರ್ತ್ ವೆಸ್ಟ್ ಲೀಗ್ ಮೀಟ್ - ಚಿನ್ನ

• 2021 - ಮೀಟಿಂಗ್ ಸಿಡಡ್ ಡಿ ಲಿಸ್ಬೊವಾ - ಚಿನ್ನ

• 2021 - ಫೋಲ್ಕ್ ಸ್ಕಾಮ್ ಗ್ರ್ಯಾಂಡ್ ಪ್ರಿಕ್ಸ್ - ಚಿನ್ನ

• 2021 - ಕೌರ್ಟೆನ್ ಗೇಮ್ಸ್ - ಕಂಚು

• 2021 - ಒಲಿಂಪಿಕ್ ಕ್ರೀಡಾಕೂಟ - ಚಿನ್ನ

• 2022 - ಪಾವೋ ನುರ್ಮಿ ಗೇಮ್ಸ್ - ಬೆಳ್ಳಿ

• 2022 - ಕೌರ್ಟೆನ್ ಗೇಮ್ಸ್ - ಚಿನ್ನ

• 2022 - ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ - ಬೆಳ್ಳಿ

Story first published: Wednesday, July 27, 2022, 15:55 [IST]
Other articles published on Jul 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X