ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ದೇವೇಂದ್ರ ಝಝಾರಿಯಾಗೆ ಪದ್ಮಭೂಷಣ: ನೀರಜ್ ಚೋಪ್ರಾ ಸಹಿತ 8 ಕ್ರೀಡಾಪಟುಗಳಿಗೆ ಪದ್ಮಶ್ರೀ ಗೌರವ

Padma awards 2022: Olympic Medallist Neeraj Chopra, Avani Lekhara and Pramod Bhagat honored with Padma Shri

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ನೀರಜ್ ಚೋಪ್ರಾ ಸೇರಿದಂತೆ 8 ಕ್ರೀಡಾಪಟುಗಳಿಗೆ ಪದ್ಮಶ್ರೀ ಗೌರವ ದೊರೆತಿದೆ. ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾಗಿರುವ ಪದ್ಮಶ್ರೀ ಪ್ರಶಸ್ತಿಗೆ ಕ್ರೀಡಾ ವಿಭಾಗದಿಂದ ಈ ಸಾಧಕರಿಗೆ ಈ ವಿಶೇಷ ಗೌರವ ಸಂದಿದೆ. ಇನ್ನು ಕ್ರೀಡಾ ವಿಭಾಗದಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ದೇವೇಂದ್ರ ಝಝಾರಿಯಾ ಅವರಿಗೆ ನೀಡಲಾಗಿದೆ.

ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದೆಂದು ಪರಿಗಣಿಸಲಾಗಿರುವ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಈ ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ. ಇದರಲ್ಲಿ ಒಲಿಂಪಿಯನ್‌ಗಳಾದ ನೀರಜ್ ಚೋಪ್ರಾ, ಪ್ರಮೋದ್ ಭಗತ್, ಅವನಿ ಲೇಖರಾ ಮತ್ತು ವಂದನಾ ಕಟಾರಿಯಾ ಅವರಿಗೆ 2022 ರ ಕ್ರೀಡಾ ವಿಭಾಗದಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ.

ಕೊಹ್ಲಿ ನಾಯಕತ್ವ ಬಿಡುವಂತೆ ತಂಡದೊಳಗೆ ರಚಿಸಿದ್ದ ಈ ಪ್ಲಾನ್ ಯಾರಿಗೂ ಗೊತ್ತಿಲ್ಲ ಬಿಡಿ: ಮಾಜಿ ಕ್ರಿಕೆಟಿಗ!ಕೊಹ್ಲಿ ನಾಯಕತ್ವ ಬಿಡುವಂತೆ ತಂಡದೊಳಗೆ ರಚಿಸಿದ್ದ ಈ ಪ್ಲಾನ್ ಯಾರಿಗೂ ಗೊತ್ತಿಲ್ಲ ಬಿಡಿ: ಮಾಜಿ ಕ್ರಿಕೆಟಿಗ!

73ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ಕೇಂದ್ರ ಸರ್ಕಾರ ಒಟ್ಟು ಒಂಬತ್ತು ಭಾರತೀಯ ಕ್ರೀಡಾಪಟುಗಳಿಗೆ ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಖ್ಯಾತ ಕ್ರೀಡಾಪಟುಗಳಾದ ನೀರಜ್, ಭಗತ್, ಸುಮಿತ್ ಅಂತಿಲ್, ಅವನಿ ಲೇಖರ, ಫೈಸಲ್ ಅಲಿ ದಾರ್, ಶಂಕರನಾರಾಯಣ ಮೆನನ್ ಚುಂಡಾಯಿಲ್, ಬ್ರಹ್ಮಾನಂದ ಸಂಖ್ವಾಲ್ಕರ್, ವಂದನಾ ಕಟಾರಿಯಾ ಪದ್ಮಶ್ರೀ ವಿಭಾಗದಲ್ಲಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ.

ಅತ್ಯಂತ ಯಶಸ್ವೀ ಪ್ಯಾರಾಲಿಂಪಿಕ್ ಅಥ್ಲೀಟ್‌ಗಳಲ್ಲಿ ಒಬ್ಬರಾದ ದೇವೇಂದ್ರ ಜಜಾರಿಯಾ ಅವರಿಗೆ ಪದ್ಮಭೂಷಣ ಪ್ರಶ್ತಿ ನೀಡಲಾಗಿದೆ. ಝಝಾರಿಯಾ ಅವರು ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ ಪ್ಯಾರಾಲಿಂಪಿಕ್ಸ್ ಕ್ರೀಡಾಪಟುವಾಗಿದ್ದಾರೆ.

ಪದ್ಮಪ್ರಶಸ್ತಿ ಗೌರವಕ್ಕೆ ಪಾತ್ರರಾದ ಕ್ರೀಡಾಪಟುಗಳು
ಪದ್ಮಭೂಷಣ: ದೇವೇಂದ್ರ ಝಝಾರಿಯಾ

ಪದ್ಮಶ್ರೀ ಪ್ರಶಸ್ತಿ ವಿಜೇತರು:
ನೀರಜ್ ಚೋಪ್ರಾ
ಸುಮಿತ್ ಅಂತಿಲ್
ಪ್ರಮೋದ್ ಭಗತ್
ಅವನಿ ಲೇಖರ
ಫೈಸಲ್ ಅಲಿ ದಾರ್
ಶಂಕರನಾರಾಯಣ ಮೆನನ್ ಚುಂಡಾಯಿಲ್
ಬ್ರಹ್ಮಾನಂದ ಸಂಖ್ವಾಲ್ಕರ್
ವಂದನಾ ಕಟಾರಿಯಾ

Story first published: Tuesday, January 25, 2022, 21:57 [IST]
Other articles published on Jan 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X