ಹಾಫ್ ಮ್ಯಾರಥಾನ್‌ನಲ್ಲಿ ತನ್ನ ದಾಖಲೆ ತಾನೇ ಮುರಿದ ಜೆಪ್ಚಿರ್ಚಿರ್

ಗ್ಡಿನಿಯಾ: ಮಹಿಳಾ ಹಾಫ್ ಮ್ಯಾರಥಾನ್‌ನಲ್ಲಿ ಕೀನ್ಯಾದ ಪೆರೆಸ್ ಜೆಪ್ಚಿರ್ಚಿರ್ ವಿಶೇಷ ಸಾಧನೆ ತೋರಿದ್ದಾರೆ. ತನ್ನ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಜೆಪ್ಚಿರ್ಚಿರ್ ತಾನೇ ಮುರಿದಿದ್ದಾರೆ. ಪೋಲೆಂಡ್‌ನ ಗ್ಡಿನಿಯಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಜೆಪ್ಚಿರ್ಚಿರ್ ಈ ವಿಶ್ವದಾಖಲೆ ನಿರ್ಮಿಸಿದ್ದಾರೆ.

2016ರಲ್ಲಿ ವರ್ಲ್ಡ್ ಮ್ಯಾರಥಾನ್‌ನಲ್ಲಿ ಬಂಗಾರದ ಪದಕ ಗೆದ್ದಿದ್ದ 27ರ ಹರೆಯದ ಪೆರೆಸ್ ಜೆಪ್ಚಿರ್ಚಿರ್ ಈ ಬಾರಿ ಹಾಫ್ ಮ್ಯಾರಥಾನ್ ಸ್ಪರ್ಧೆಯನ್ನು (21.5 ಕಿ.ಮೀ.) 1 ಗಂಟೆ, 5 ನಿಮಿಷ ಮತ್ತು 16 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಸೆಪ್ಟೆಂಬರ್ 5ರಂದು ಪ್ರೇಗ್‌ನಲ್ಲಿ ನಡೆದಿದ್ದ ಚಾಂಪಿಯನ್‌ಶಿಪ್‌ನಲ್ಲಿ ಹಾಫ್‌ ಮ್ಯಾರಥಾನ್ ಸ್ಪರ್ಧೆಯನ್ನು ಇದೇ ಜೆಪ್ಚಿರ್ಚಿರ್ 1 ಗಂಟೆ, 5 ನಿಮಿಷ ಮತ್ತು 34 ಸೆಕೆಂಡ್‌ಗಳಲ್ಲಿ ಮುಗಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಈಗ ತನ್ನ ದಾಖಲೆಯನ್ನು ತಾನೇ ಉತ್ತಮ ಪಡಿಸಿಕೊಂಡಂತಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Saturday, October 17, 2020, 23:08 [IST]
Other articles published on Oct 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X