'ಕುಸ್ತಿಗೆ ಬೈ, ಮಾರ್ಷಲ್ ಆರ್ಟ್ಸ್‌ಗೆ ಜೈ' ಎಂದ ರಸ್ಲರ್ ರೀತು ಫೋಗಟ್!

ಚಂಡೀಗಢ, ಫೆಬ್ರವರಿ 26: ಜನಪ್ರಿಯ ದಂಗಲ್ ಕುಟುಂಬದ ಕುಸ್ತಿ ಕೋಚ್ ಮಹಾವೀರ್ ಫೋಗಟ್ ಅವರ ಪುತ್ರಿ ರೀತು ಫೋಗಟ್ ಅವರು ಭಾರತದ ರಸ್ಲಿಂಗ್ ಫೆಡರೇಷನ್ ಅನ್ನು ದಂಗಾಗಿಸಿದ್ದಾರೆ. ರಸ್ಲಿಂಗ್ ವೃತ್ತಿ ತೊರೆದು ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ (ಎಂಎಂಎ)ನತ್ತ ನಡೆಯುವ ನಿರ್ಧಾರವನ್ನು ರೀತು ಪ್ರಕಟಿಸಿದ್ದಾರೆ.

ಚೆನ್ನಾಗಿ ಆಡಿದ್ದೀರಿ: ಸರ್ಜಿಕಲ್‌ ಸ್ಟ್ರೈಕ್‌-2ಗೆ ಕ್ರಿಕೆಟ್ ಸ್ಟೈಲಲ್ಲಿ ಸೆಹ್ವಾಗ್ ಮೆಚ್ಚುಗೆ!ಚೆನ್ನಾಗಿ ಆಡಿದ್ದೀರಿ: ಸರ್ಜಿಕಲ್‌ ಸ್ಟ್ರೈಕ್‌-2ಗೆ ಕ್ರಿಕೆಟ್ ಸ್ಟೈಲಲ್ಲಿ ಸೆಹ್ವಾಗ್ ಮೆಚ್ಚುಗೆ!

'ದಂಗಲ್' ಖ್ಯಾತಿಯ ಫೋಗಟ್ ಕುಟುಂಬದ ಗೀತಾ, ಬಬಿತಾ, ಸಂಗೀತಾ ಇವರಲ್ಲಿ ಮೂರನೇ ಪುತ್ರಿಯಾಗಿರುವ 24ರ ಹರೆಯದ ರೀತು ಫೋಗಟ್, ಭಾರತದ ರಸ್ಲಿಂಗ್ ಫೆಡರೇಷನ್ ತೊರೆದು, ಸಿಂಗಾಪುರ ಮೂಲದ 'ಇವಾಲ್ವ್ ಫೈಟ್ ಟೀಮ್' ಎನ್ನುವ ಮಿಕ್ಸ್ಡ್ ಮಾರ್ಷಲ್ ಆರ್ಟ್ ತಂಡವನ್ನು ಸೇರಿಕೊಂಡಿದ್ದಾರೆ.

'ಹೊಸ ಬದುಕನ್ನರಸಿ ಹೊರಟಿರುವುದು ನನಗೆ ಹರ್ಷವೆನಿಸಿದೆ. ಎಂಎಂಎ ವರ್ಲ್ಡ್ ಚಾಂಪಿಯನ್ ಶಿಪ್‌ನಲ್ಲಿ ನಾನು ಭಾರತದ ಮೊದಲ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಸ್ಪರ್ಧಿಯಾಗಿ ಗುರುತಿಸಿಕೊಳ್ಳಲಿದ್ದೇನೆ' ಎಂದು ಸಿಂಗಾಪುರದಲ್ಲಿರುವ ರೀತು ದೂರವಾಣಿ ಕರೆಯ ಮೂಲಕ ತಿಳಿಸಿದ್ದಾರೆ. ಭಾರತ ಪರ ರೀತು ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಬಂಗಾರ, ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, February 26, 2019, 17:17 [IST]
Other articles published on Feb 26, 2019

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X