ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ರೋಹಿತ್ ಶರ್ಮ ಭರ್ಜರಿ ದ್ವಿಶತಕ, ಲಂಕಾ ತತ್ತರ

By Mahesh

ಕೋಲ್ಕತ್ತಾ, ನ.13: ಇಲ್ಲಿನ ಈಡೆನ್ ಗಾರ್ಡನ್ ಮೈದಾನದಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮ ಭರ್ಜರಿ ದ್ವಿಶತಕ ಸಿಡಿಸಿ ರುದ್ರನರ್ತನ ಮಾಡಿದರು. ಶ್ರೀಲಂಕಾ ವಿರುದ್ಧದ ನಾಲ್ಕನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಬೌಂಡರಿ, ಸಿಕ್ಸರ್ ಗಳ ಸುರಿಮಳೆಗೈದ ರೋಹಿತ್ ಶರ್ಮ ತಮ್ಮ ವೃತ್ತಿ ಬದುಕಿನ ಎರಡನೇ ದ್ವಿಶತಕ ದಾಖಲಿಸಿದರು. ಈ ಮೂಲಕ ಸಾಧನೆ ಮಾಡಿದ ಏಕೈಕ ಕ್ರಿಕೆಟರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಇದಲ್ಲದೆ, ಏಕದಿನ ಕ್ರಿಕೆಟ್ ನಲ್ಲಿ ಅತ್ಯಧಿಕ ವೈಯಕ್ತಿಕ ಮೊತ್ತ ಗಳಿಸಿದ್ದ ವಿರೇಂದರ್ ಸೆಹ್ವಾಗ್ ಅವರ ದಾಖಲೆಯನ್ನು ರೋಹಿತ್ ಶರ್ಮ ದಾಟಿ ಮುನ್ನಡೆದರು. ವಿಂಡೀಸ್ ವಿರುದ್ಧ ಇಂದೋರ್ ನಲ್ಲಿ ಸೆಹ್ವಾಗ್ 219ರನ್ ಗಳಿಸಿದ್ದು ಅತ್ಯಧಿಕ ಮೊತ್ತ ಎನಿಸಿತ್ತು.

ಈಗ ಲಂಕಾ ವಿರುದ್ಧ ರೋಹಿತ್ ದ್ವಿಶತಕದ ನಂತರ ಬಾರಿಸುವ ಪ್ರತಿ ಹೊಡೆತ ದಾಖಲೆ ಬರೆಯಿತು. ಹೀಗೆ ಆಟ ಮುಂದುವರೆಸಿ 250ರನ್(166 ಎ, 32 ಬೌಂ, 8 ಸಿ) ಗಡಿ ದಾಟಿದ ವಿಶ್ವದ ಪ್ರಥಮ ಕ್ರಿಕೆಟರ್ ಆದರು.

Rohith Sharma hit Double Ton


ಲಂಕಾ ವಿರುದ್ಧದ ಏಕದಿನ ಸರಣಿಯ ನಾಲ್ಕನೇ ಪಂದ್ಯದಲ್ಲಿ ರಾಬಿನ್ ಉತ್ತಪ್ಪ, ರೋಹಿತ್ ಶರ್ಮ ಹಾಗೂ ಕರಣ್ ಶರ್ಮ ಅವರನ್ನು ಆಡಿಸಲಾಗುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಆರಂಭದಿಂದಲೇ ರೋಹಿತ್ ಶರ್ಮ ಹಾಗೂ ಅಜಿಂಕ್ಯ ರಹಾನೆ ಆಟದ ಮೂಲಕ ಉತ್ತಮ ಸ್ಕೋರ್ ಕಲೆ ಹಾಕುವ ಕುರುಹು ತೋರಿತ್ತು. ಸರಣಿಯಲ್ಲಿ ಮೊದಲ ಬಾರಿಗೆ ಶತಕ ಗಳಿಸಿದ ಸಾಧನೆ ಮಾಡಿದ್ದ ಅಂಬಟಿ ರಾಯುಡು ಈ ಪಂದ್ಯದಲ್ಲಿ ವಿಫಲರಾಗಿ 8 ರನ್ ಗಳಿಸಿ ಪೆವಿಲಿಯನ್ ಸೇರಿದರು.

ನಾಯಕ ವಿರಾಟ್ ಕೊಹ್ಲಿ 64 ಎಸೆತಗಳಲ್ಲಿ 66 ಉಪಯುಕ್ತ ರನ್ ಗಳಿಸಿ ರನ್ ಔಟ್ ಆದರು. ಸುರೇಶ್ ರೈನಾ 11 ರನ್ ಗಳಿಸಿ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಉಳಿಯಲಿಲ್ಲ. ರೋಹಿತ್ ಶರ್ಮ ಆರಂಭದಿಂದಲೆ ಭರ್ಜರಿ ಆಟ ಮುಂದುವರೆಸಿ ಇನ್ನಿಂಗ್ಸ್ ನ ಕೊನೆಯ ಎಸೆತದಲ್ಲಿ ಕುಲಶೇಖರ ಬೌಲಿಂಗ್ ನಲ್ಲಿ ಜಯವರ್ಧನೆಗೆ ಕ್ಯಾಚಿತ್ತು ಪೆವಿಲಿಯನತ್ತ ಮುಖ ಮಾಡಿದರು. ರಾಬಿನ್ ಉತ್ತಪ್ಪ 16 ರನ್ ಗಳಿಸಿ ಔಟಾಗದೆ ಉಳಿದರು.

50 ಓವರ್ ಗಳಲ್ಲಿ 8.08ರನ್ ಸರಾಸರಿಯಲ್ಲಿ ಭಾರತ ತಂಡ 404/5 ಸ್ಕೋರ್ ಮಾಡಿದರೆ, ಅದರಲ್ಲಿ ರೋಹಿತ್ ಶರ್ಮ ಕೊಡುಗೆ 264 ರನ್ (173 ಎಸೆತ, 33 ಬೌಂಡರಿ, 9 ಸಿಕ್ಸರ್).

ರೋಹಿತ್ 250ರನ್ ಕತ್ತರಿಸಿದರೆ
* ಮೊದಲ 50 ರನ್ (72 ಎಸೆತ),
* ಎರಡನೇ 50 ರನ್ 28 ಎಸೆತ
* ಮೂರನೇ 50 ರನ್ 25 ಎಸೆತ
* ನಾಲ್ಕನೇ 50 ರನ್ 26 ಎಸೆತ
* ಐದನೇ 50 ರನ್ 15 ಎಸೆತ

ಇದು ನನ್ನ ಲಕ್ಕಿ ಗ್ರೌಂಡ್. ಇಲ್ಲಿ ಶತಕ ಗಳಿಸುವುದು ನನಗೆ ಸಲೀಸು, ರಣಜಿ, ಐಪಿಎಲ್ ನಲ್ಲಿ ಶತಕಗಳಿಸಿದಂತೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲೂ ಶತಕ ದಾಖಲಿಸಿದೆ ಎಂದು ಇನ್ನಿಂಗ್ಸ್ ನಂತರ ರೋಹಿತ್ ಶರ್ಮ ಹೇಳಿದರು.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X