ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ ಗಗನ್ ನಾರಂಗ್, ಅನು ರಾಜ್

ನವದೆಹಲಿ: ಭಾರತದ ಅನುಭವಿ ಶೂಟರ್‌ಗಳಿಬ್ಬರು ಒಂಟಿ ಜೀವನದಿಂದ ಜಂಟಿ ಜೀವನಕ್ಕೆ ಕಾಲಿರಿಸಲಿದ್ದಾರೆ. ಲಂಡನ್ ಒಲಿಂಪಿಕ್ಸ್‌ನ ರೈಫಲ್ ಶೂಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಗಗನ್ ನಾರಂಗ್‌ ಮತ್ತು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬಂಗಾರ ಗೆದ್ದಿದ್ದ ಪಿಸ್ತೂಲ್ ಶೂಟರ್ ಅನು ರಾಜ್ ಸಿಂಗ್‌ ದಂಪತಿಗಳಾಗಲಿದ್ದಾರೆ.

ಐಪಿಎಲ್ 2021: 14 ಸ್ಟಾರ್‌ಸ್ಪೋರ್ಟ್ಸ್ ಸಿಬ್ಬಂದಿಗಳಿಗೆ ಕೊರೊನಾ ವೈರಸ್!

ಸುಮಾರು ಎರಡು ದಶಕಗಳಿಂದಲೂ ಭಾರತೀಯ ಶೂಟಿಂಗ್‌ ಟೀಮ್ ನಲ್ಲಿರುವ ಗಗನ್ ನಾರಂಗ್‌ ಮತ್ತು ಅನು ರಾಜ್ ಸಿಂಗ್‌ ಪರಸ್ಪರ ಒಬ್ಬರನೊಬ್ಬರು ಅರಿತುಕೊಂಡಿದ್ದಾರೆ. ಹೀಗಾಗಿ ಇಬ್ಬರೂ ಈ ತಿಂಗಳ ಕೊನೆಗೆ ಹೈದರಾಬಾದ್‌ನಲ್ಲಿ ಮದುವೆಯಾಗುವ ನಿರ್ಧಾರ ತಾಳಿದ್ದಾರೆ.

'ನಾವು ಮದುವೆಯ ನಿರ್ಧಾರಕ್ಕೆ ಬರಲು ಇಂಥದ್ದೇ ಸಂದರ್ಭ ಅಂತೇನೂ ಇಲ್ಲ. ನಾವು 2002ರಿಂದ ಭಾರತೀಯ ಶೂಟಿಂಗ್ ತಂಡದಲ್ಲಿದ್ದೇವೆ. ಆವತ್ತಿನಿಂದಲೂ ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೇವೆ. ನಾವು ಬಹಳ ಹಿಂದಿನಿಂದಲೂ ಜೊತೆಯಾಗಿದ್ದೇವೆ ಮತ್ತು ಪರಸ್ಪರರ ಅರಿತುಕೊಂಡಿದ್ದೇವೆ,' ಎಂದು ನಾರಂಗ್ ಹೇಳಿದ್ದಾರೆ.

ಐಪಿಎಲ್ 2021: ಗೇಲ್ ಯಾವ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಸುಳಿವು ನೀಡಿದ ಕೋಚ್ ಜಾಫರ್

'ನನ್ನ ತಾಯಿಗೆ ಅವಳು (ಅನು ರಾಜ್) ಇಷ್ಟವಾಗಿದ್ದಾಳೆ. ಅವಳ ಹೆತ್ತವರಿಗೂ ನಾನು ಒಪ್ಪಿಗೆಯಾಗಿದ್ದೇನೆ. ಹೀಗಾಗಿ ಇದನ್ನು ಬರೀ ಪ್ರೇಮವಿವಾಹ ಎನ್ನುತ್ತಿಲ್ಲ. ಇದು ಸ್ವಲ್ಪ ಅರೇಂಜ್ಡ್ ಮ್ಯಾರೇಜ್ ಕೂಡಾ ಅನ್ನಿಸುತ್ತದೆ,' ಎಂದು ನಾರಂಗ್ ಮಾಹಿತಿ ನೀಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, April 6, 2021, 9:10 [IST]
Other articles published on Apr 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X