ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವರ್ಲ್ಡ್ ಶೂಟಿಂಗ್ ಚಾಂಪಿಯನ್ ಶಿಪ್: ಶ್ರೇಯಾ-ದಿವ್ಯಾಂಶ್ ಗೆ ಕಂಚು

Shreya, Divyansh bag mixed air rifle bronze at world championship

ಚಾಂಗ್‍ವೊನ್, ಸೆಪ್ಟೆಂಬರ್ 5: ದಕ್ಷಿಣ ಕೊರಿಯಾ ಚ್ಯಾಂಗ್‍ವೊನ್‍ನಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷನಲ್ ಶೂಟಿಂಗ್ ಫೆಡರೇಷನ್ ವಿಶ್ವ ಚಾಂಪಿಯನ್ ಶಿಪ್ ನ 10 ಮೀ. ಏರ್ ರೈಫಲ್ ಜೂನಿಯರ್ ವಿಭಾಗದಲ್ಲಿ ಭಾರತದ ಶ್ರೇಯಾ ಅಗರ್ವಾಲ್ ಮತ್ತು ದಿವ್ಯಾಂಶ್ ಜೋಡಿ ಕಂಚು ಜಯಿಸಿದೆ.

ಒಲಿಂಪಿಕ್ಸ್ ನಲ್ಲೂ ಹೆಚ್ಚು ಪದಕ ಗೆಲ್ಲಲು ಭಾರತ ತಂಡಕ್ಕೆ ಮೋದಿ ಹಾರೈಕೆಒಲಿಂಪಿಕ್ಸ್ ನಲ್ಲೂ ಹೆಚ್ಚು ಪದಕ ಗೆಲ್ಲಲು ಭಾರತ ತಂಡಕ್ಕೆ ಮೋದಿ ಹಾರೈಕೆ

ಬುಧವಾರ (ಸೆಪ್ಟೆಂಬರ್ 5) ನಡೆದ 52ನೇ ವರ್ಲ್ಡ್ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಜೋಡಿ ಇಟಲಿ ಮತ್ತು ಇರಾನ್ ನ ನಂತರ ಪ್ರಶಸ್ತಿ ತನ್ನದಾಗಿಸಿಕೊಂಡಿತು. 834.4 ಅಂಕಗಳೊಂದಿಗೆ 5ನೇ ಸ್ಥಾನಿಗರಾಗಿದ್ದ ಭಾರತ ತಂಡ ಅನಂತರ ತೃತೀಯ ಸ್ಥಾನ ಗೆಲ್ಲುವುದಕ್ಕಾಗಿ ಉತ್ತಮ ಪ್ರದರ್ಶನ ತೋರಿತು.

ಇಟಲಿಯ ಸೋಫಿಯಾ ಬೆನೆಟ್ಟಿ ಮತ್ತು ಮಾರ್ಕ್ ಸುಪ್ಪಾನಿ ಹಾಗೂ ಇರಾನ್‍ನ ಸಾಡೆಘಿಯಾನ್ ಅರ್ಮಿನಾ ಮತ್ತು ಮಹಮದ್ ಅಮಿರ್ ನೆಕೌನಮ್ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು.

ಕೇವಲ 0.6 ಪಾಯಿಂಟ್ ಅಂತರದಿಂದ ಭಾರತ ತಂಡ ಬೆಳ್ಳಿ ಪದಕದಿಂದ ವಂಚಿತವಾಯಿತು. ಎಲ್ವೆವಿಲ್ ವಲೇರಿವನ್ ಮತ್ತು ಹೃದಯ್ ಹಜಾರಿಕಾ ಅವರನ್ನೊಳಗೊಂಡ ಭಾರತದ ಮತ್ತೊಂದು ಪ್ರಮುಖ ತಂಡ 13ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿತು.

ಈ ಚಾಂಪಿಯನ್ ಶಿಪ್ ನಲ್ಲಿ ಭಾರತದ ಪದಕ ಖಾತೆಯಲ್ಲೀಗ ಒಟ್ಟು 9 ಪದಕಗಳಿವೆ. ಇದರಲ್ಲಿ ತಲಾ 3 ಚಿನ್ನ, ಬೆಳ್ಳಿ, ಕಂಚಿನ ಪದಕಗಳಿವೆ. ಪದಕ ಪಟ್ಟಿಯಲ್ಲಿ ಭಾರತದ ಮೂರನೇ ಸ್ಥಾನವನ್ನು ಚೀನಾದೊಂದಿಗೆ ಹಂಚಿಕೊಂಡಿದೆ. ಕೊರಿಯಾ ಪ್ರಥಮ, ರಷ್ಯಾ ದ್ವಿತೀಯ ಸ್ಥಾನದಲ್ಲಿದೆ.

Story first published: Wednesday, September 5, 2018, 21:34 [IST]
Other articles published on Sep 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X