ಜಪಾನ್‌ನ ಸುಮೋ ಕುಸ್ತಿಪಟುಗೆ ಕೊರೊನಾವೈರಸ್ ಸೋಂಕು

ಟೋಕಿಯೋ, ಏಪ್ರಿಲ್ 10: ಜಪಾನ್‌ನ ಸುಮೋ ಕುಸ್ತಿಪಟುವಿಗೆ ಮಾರಕ ಕೊರೊನಾವೈರಸ್ ಸೋಂಕು ತಗುಲಿರುವುದು ಪರೀಕ್ಷೆಯ ವೇಳೆ ಕಂಡುಬಂದಿದೆ. ಈಗಾಗಲೇ ಕೊರೊನಾವೈರಸ್‌ನ ಕಾರಣ ಮುಂದೂಡಲ್ಪಟ್ಟಿರುವ ಸಮ್ಮರ್ ಗ್ರ್ಯಾಂಡ್‌ ಸುಮೋ ಟೂರ್ನಮೆಂಟ್‌ ಮತ್ತೀಗ ಮುಂದಕ್ಕೆ ಮುಂದೂಡಲ್ಪಟ್ಟಿದೆ.

ಕ್ರಿಕೆಟ್‌ಗೂ ಮುನ್ನ ಬೇರೆ ಕ್ರೀಡೆಗಳನ್ನಾಡುತ್ತಿದ್ದ 5 ಜನಪ್ರಿಯ ಕ್ರಿಕೆಟಿಗರುಕ್ರಿಕೆಟ್‌ಗೂ ಮುನ್ನ ಬೇರೆ ಕ್ರೀಡೆಗಳನ್ನಾಡುತ್ತಿದ್ದ 5 ಜನಪ್ರಿಯ ಕ್ರಿಕೆಟಿಗರು

ಪರೀಕ್ಷೆಯ ವೇಳೆ ಫಲಿತಾಂಶ ಪಾಸಿಟಿವ್ ಬಂದಿರುವುದನ್ನು ಜಪಾನ್‌ನ ಸುಮೋ ಅಸೋಸಿಯೇಷನ್ ಖಾತ್ರಿಪಡಿಸಿದೆ. ಜಪಾನ್‌ನ ಪುರಾತನ ಕ್ರೀಡೆಯಾದ ಸುಮೋ ಕುಸ್ತಿಯಲ್ಲಿ ಕಾಣಿಸಿರುವ ಮೊದಲ ಕೊರೊನಾವೈರಸ್ ಪ್ರಕರಣವಿದೆಂದು ಅಸೋಸಿಯೇಷನ್ ತಿಳಿಸಿದೆ.

ಇಂಡೋ-ಪಾಕ್ ಸರಣಿ: ಅಖ್ತರ್ ಪ್ರಸ್ತಾಪಕ್ಕೆ ಕಪಿಲ್ ದೇವ್ ಖಡಕ್ ಉತ್ತರಇಂಡೋ-ಪಾಕ್ ಸರಣಿ: ಅಖ್ತರ್ ಪ್ರಸ್ತಾಪಕ್ಕೆ ಕಪಿಲ್ ದೇವ್ ಖಡಕ್ ಉತ್ತರ

ಸುಮೋ ಕುಸ್ತಿಪಟುವಿಗೆ ಕಳೆದ ವಾರ ಜ್ವರ ಕಾಣಿಸಿಕೊಂಡಿತ್ತು. ಆದರೆ ಅವರ ಜೊತೆಗಿದ್ದ ಸಹ ಕುಸ್ತಿಪಟುಗಳು ಅಥವಾ ಸಿಬ್ಬಂದಿಗಳು ಇದು ಕೊರೊನಾ ವೈರಸ್‌ ಲಕ್ಷಣವಿರಬಹುದೆಂದು ದೂರು ನೀಡಿರಲಿಲ್ಲ. ಆದರೆ ಕುಸ್ತಿಪಟುವನ್ನು ಪರೀಕ್ಷೆಗೊಳಪಡಿಸಿದಾಗ ಅವರಿಗೆ ಸೋಂಕು ಹಬ್ಬಿರುವುದು ಸಾಭೀತಾಗಿದೆ.

ಸಚಿನ್ ತೆಂಡೂಲ್ಕರ್ ರಾಹುಲ್ ದ್ರಾವಿಡ್ ಬಗ್ಗೆ ಯುವ ಕ್ರಿಕೆಟಿಗ ಪೃಥ್ವಿ ಶಾ ಮಾತುಸಚಿನ್ ತೆಂಡೂಲ್ಕರ್ ರಾಹುಲ್ ದ್ರಾವಿಡ್ ಬಗ್ಗೆ ಯುವ ಕ್ರಿಕೆಟಿಗ ಪೃಥ್ವಿ ಶಾ ಮಾತು

ಟೋಕಿಯೋದಲ್ಲಿ ನಡೆಯಲಿದ್ದ ಸುಮೋ ಕುಸ್ತಿ ಸಮ್ಮರ್ ಟೂರ್ನಿಯನ್ನು ಅಸೋಸಿಯೇಷನ್ ಈಗಾಗಲೇ ಎರಡು ವಾರಗಳ ಕಾಲ ಮುಂದೂಡಿದೆ. ಸದ್ಯಕ್ಕೆ ಟೂರ್ನಿಯ ಹೊಸ ಆರಂಭಿಕ ದಿನಾಂಕ ಮೇ 24.

For Quick Alerts
ALLOW NOTIFICATIONS
For Daily Alerts
Story first published: Friday, April 10, 2020, 14:47 [IST]
Other articles published on Apr 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X