ಫುಟ್ಬಾಲ್ ದಿಗ್ಗಜ ಥಿಯರಿ ಹೆನ್ರಿ ನಿವೃತ್ತಿ ಘೋಷಣೆ

Posted By:

ಪ್ಯಾರಿಸ್‌, ಡಿ.17: ಫುಟ್ಬಾಲ್ ಜಗತ್ತು ಕಂಡಿರುವ ಅಪ್ರತಿಮ ಆಟಗಾರರ ಪೈಕಿ ಒಬ್ಬರಾದ ಫ್ರಾನ್ಸಿನ ಮುಂಪಡೆ ಆಟಗಾರ ಥಿಯರಿ ಹೆನ್ರಿ ತಮ್ಮ 20 ವರ್ಷಗಳ ಅದ್ಭುತ ಫುಟ್ಬಾಲ್ ಪಯಣವನ್ನು ಅಂತ್ಯಗೊಳಿಸಿದ್ದಾರೆ. 2015ರಿಂದ ಸ್ಕೈ ಸ್ಫೋರ್ಟ್ಸ್ ಪರ ರಾಯಭಾರಿಯಾಗಿ ಹೆನ್ರಿ ಕಾರ್ಯ ನಿರ್ವಹಿಸಲಿದ್ದಾರೆ.

37 ವರ್ಷದ ಫ್ರೆಂಚ್‌ ಆಟಗಾರ ಮಂಗಳವಾರ ತಮ್ಮ ಫೇಸ್ ಬುಕ್ ಪುಟದಲ್ಲಿ ನಿವೃತ್ತಿ ಘೋಷಿಸಿದರು. ಹೆನ್ರಿ ಅವರು 123 ಪಂದ್ಯಗಳಿಂದ 51 ಗೋಲು ಬಾರಿಸಿದ ದಾಖಲೆ ಹೊಂದಿದ್ದಾರೆ. ವಿಶ್ವ ಚಾಂಪಿಯನ್, ಯುರೋಪಿಯನ್ ಚಾಂಪಿಯನ್ ಶಿಪ್, ಇಂಗ್ಲೆಂಡಿನ ಕ್ಲಬ್ ಆರ್ಸೆನಲ್ ಪರ ಆಡಿ ಇಂಗ್ಲೀಷ್ ಪ್ರಿಮಿಯರ್ ಲೀಗ್ ಸೇರಿದಂತೆ ಸುಮಾರು 35 ಪ್ರಶಸ್ತಿ ಕಪ್ ಹೆನ್ರಿ ಅವರ ಹೆಸರಿನಲ್ಲಿದೆ.

Thierry Henry retires

ಚಿನ್ನದ ಬೂಟಿನ ಹೆನ್ರಿ: ಎರಡು ಬಾರಿ ಯುರೋಪಿಯನ್ ಗೋಲ್ಡನ್ ಬೂಟ್, ಇಂಗ್ಲೀಷ್ ಪ್ರಿಮಿಯರ್ ಲೀಗ್ ನಲ್ಲಿ ನಾಲ್ಕು ಬಾರಿ ಚಿನ್ನದ ಬೂಟು ಗೆದ್ದಿದ್ದಾರೆ. ಫ್ರೆಂಚ್ ಆಟಗಾರನಾಗಿ ಐದು ಬಾರಿ ಆಯ್ಕೆಯಾಗಿದ್ದು, ಫುಟ್ಬಾಲ್ ಲೇಖರ ಅಸೋಸಿಯೇಷನ್ ನಿಂದ ಆರ್ಸೆನಲ್ ಪರ ಆಡಿ ವರ್ಷದ ಆಟಗಾರ ಪ್ರಶಸ್ತಿ ಪಡೆದಿದ್ದರು.

2004ರಲ್ಲಿ ಫುಟ್ಬಾಲ್ ಪ್ರೇಮಿಗಳಿಗೆ ರಸದೌತಣ ನೀಡಿದ ಆರ್ಸೆನಲ್ ತಂಡ ಪ್ರಿಮಿಯರ್ ಲೀಗ್ ಗೆದ್ದು ಇತಿಹಾಸ ಸೃಷ್ಟಿಸಿತು. ಆರ್ಸೆನಲ್ ಹಾಗೂ ಫ್ರಾನ್ಸ್ ಪರ ಹೆಚ್ಚು ಗೋಲು ಮಾಡಿರುವ ಹೆನ್ರಿ ಇಟಲಿಯ ಯೂವೆಂಟಸ್, ಮೊನಾಕೋ, ಸ್ಪೇನಿನ ಬಾರ್ಸಿಲೋನಾ ಕ್ಲಬ್ ಪರ ಕೂಡಾ ತಮ್ಮ ಕಾಲ್ಚಳಕ ತೋರಿದ್ದಾರೆ. ತೀರಾ ಇತ್ತೀಚಿನ ತನಕ ನ್ಯೂಯಾರ್ಕ್ ನ ರೆಡ್ ಬುಲ್ಸ್ ತಂಡದ ಪರ ಆಡುತ್ತಿದ್ದರು.

Post by Thierry Henry.

ಹೆನ್ರಿ 1998ರ ವಿಶ್ವಕಪ್‌, 2000ರ ಯುರೋಪಿಯನ್‌ ಚಾಂಪಿಯನ್‌ಶಿಪ್‌ ವಿಜೇತ ತಂಡದಲ್ಲಿ ಆಡಿದ್ದು ಫುಟ್ಬಾಲ್ ಪ್ರೇಮಿಗಳಿಗೆ ಸದಾ ಸ್ಮರಣೀಯವಾಗಿರುತ್ತದೆ. ಇನ್ಮುಂದೆ ಸ್ಕೈ ಸ್ಫೋರ್ಟ್ಸ್ ರಾಯಭಾರಿಯಾಗಿ ತಮ್ಮ ಹೊಸ ವೃತ್ತಿಯಲ್ಲಿ ಹೆನ್ಸಿ ಕಾಣಿಸಿಕೊಳ್ಳಲಿದ್ದಾರೆ.

ಪೆಪ್ಸಿ ಜಾಹೀರಾತಿನಲ್ಲಿ ಡೇವಿಡ್ ಬೆಕ್ ಹ್ಯಾಮ್, ರೊನಾಲ್ಡಿನೋ ಜೊತೆಗೆ ಕಾಣಿಸಿಕೊಂಡಿದ್ದ ಹೆನ್ಸಿ, ಜಿಲೆಟ್, ಪ್ಯೂಮಾ, ರೀಬಾಕ್, ನೈಕಿ, ರಿನೋ ಪರ ಪ್ರಚಾರ ಮಾಡಿದ್ದರು. ಯುನಿಸೆಫ್ ನ ಫೀಫಾ ತಂಡದಲ್ಲೂ ಹೆನ್ಸಿಗೆ ಸ್ಥಾನ ಸಿಕ್ಕಿತ್ತು.

Story first published: Wednesday, December 17, 2014, 12:58 [IST]
Other articles published on Dec 17, 2014

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ