ರಷ್ಯಾದಲ್ಲಿ ಫೋರ್ಸ್ ಇಂಡಿಯಾ ಗೆಲುವು, ಮಲ್ಯ ಫುಲ್ ಖುಷ್

Posted By:

ಸೋಚಿ (ರಷ್ಯಾ), ಅ.12: ಸಿಬಿಐ ದಾಳಿಯಿಂದ ಕಂಗೆಟ್ಟಿದ್ದ ಉದ್ಯಮಿ ವಿಜಯ್ ಮಲ್ಯ ಈಗ ಸಕತ್ ಖುಷಿಯಲ್ಲಿದ್ದಾರೆ. ಮಲ್ಯ ಒಡೆತನದ ಸಹರಾ ಫೋರ್ಸ್ ಒನ್ ತಂಡದ ಚಾಲಕ ಸರ್ಗಿಯೋ ಪೆರೆಜ್ ಅವರು ರಷ್ಯನ್ ಗ್ರಾನ್ ಪ್ರೀಯಲ್ಲಿ ಮೂರನೇ ಸ್ಥಾನ ಪಡೆದು ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಭಾನುವಾರ ನಡೆದ ರಷ್ಯನ್ ಗ್ರ್ಯಾನ್ ಪ್ರೀ ರೇಸ್​ನಲ್ಲಿ ಪೆರೆಜ್ 3ನೇ ಸ್ಥಾನ ಗಳಿಸಿದರು. ವಿಜಯ್ ಮಲ್ಯ ಒಡೆತನದ ಫೋರ್ಸ್ ತಂಡ ಇದಕ್ಕೂ ಮೊದಲು 2014ರಲ್ಲಿ ಬೆಹರಿಯನ್ ಜಿಪಿಯಲ್ಲಿ 3 ಹಾಗೂ 2009ರಲ್ಲಿ ಬೆಲ್ಜಿಯಂ ಜಿಪಿಯಲ್ಲಿ 2ನೇ ಸ್ಥಾನ ಗಳಿಸಿದ್ದೇ ಸಾಧನೆಯಾಗಿತ್ತು.

Third place for Sergio Perez and Force India

ರಷ್ಯನ್ ಗ್ರಾನ್ ಪೀ ರೇಸ್​ನ ಆರಂಭದಿಂದಲೂ ಪೆರೆಜ್ 3ನೇ ಸ್ಥಾನ ಕಾಯ್ದುಕೊಂಡಿದ್ದರು. ವಲ್ಟೇರಿ ಬೊಟ್ಟಾಸ್ ಮತ್ತು ಕಿಮಿ ರೈಕೊನೆನ್ ಪ್ರಬಲ ಪೈಪೋಟಿ ಎದುರಿಸಿದರು.

ಮರ್ಸಿಡೀಸ್​ನ ಲೂಯಿಸ್ ಹ್ಯಾಮಿಲ್ಟನ್, ಫೆರಾರಿಯ ಸೆಬಾಸ್ಟಿನ್ ವೆಟ್ಟೆಲ್​ರನ್ನು ಹಿಂದಿಕ್ಕಿ ಪ್ರಥಮ ಸ್ಥಾನಗಳಿಸಿದರು.


15 ಅಂಕ ಸಂಪಾದಿಸಿದ ಪೋರ್ಸ್ ಇಂಡಿಯಾ, ಚಾಂಪಿಯನ್​ಷಿಪ್ ಅಂಕಪಟ್ಟಿಯಲ್ಲಿ 5ನೇ ಸ್ಥಾನ ಸಂಪಾದಿಸಿದೆ.

ಈ ಮುಂಚೆ ಮೆಕ್ ಲೆರನ್ ನಲ್ಲಿದ್ದ ಪೆರೆಜ್ ಗೆ ಅಡ್ಡಾದಿಡ್ಡಿ ಕಾರು ಚಲಾಯಿಸುವ ಆರೋಪ ಹೊರೆಸಲಾಗಿತ್ತ್ತು. ಅದರೆ, ಸೋಚಿಯ ಈ ರೇಸ್ ನಿಂದಾಗಿ ಎಲ್ಲರೂ ಪೆರೆಜ್ ಗೆ ತಿರುಗಿ ನೋಡುವಂತಾಗಿದೆ.ಮೂರನೇ ಸ್ಥಾನ ಗಳಿಸಿದ ಪೆರೆಜ್ ಪ್ರತಿಕ್ರಿಯೆ ಈ ವಿಡಿಯೋದಲ್ಲಿದೆ:

Story first published: Monday, October 12, 2015, 16:34 [IST]
Other articles published on Oct 12, 2015

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ