ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

'ಟೋಕಿಯೋ ಒಲಿಂಪಿಕ್ಸ್‌'ಗೂ ತಾಕಿದ 'ಕೊರೊನಾ ವೈರಸ್' ಸೋಂಕು!

Tokyo 2020 organisers fight false rumours over coronavirus crisis

ಟೋಕಿಯೋ, ಫೆಬ್ರವರಿ 6: ಚೀನಾದ ವುಹಾನ್ ಸಿಟಿಯಲ್ಲಿ ಕಾಣಿಸಿಕೊಂಡು, ವಿಶ್ವದ ಇನ್ನುಳಿದ ರಾಷ್ಟ್ರಗಳನ್ನೂ ಆತಂಕಕ್ಕೀಡು ಮಾಡಿರುವ ಕೊರೊನಾ ವೈರಸ್ ಸೋಂಕು, 2020ರಲ್ಲಿ ನಡೆಸಲುದ್ದೇಶಿಸಿರುವ ಟೋಕಿಯೋ ಒಲಿಂಪಿಕ್ಸ್‌ಗೂ ತೊಂದರೆಯನ್ನುಂಟುಮಾಡಿದೆ. ಸೋಂಕಿನ ಬಗ್ಗೆ ಹಬ್ಬುತ್ತಿರುವ ಗಾಳಿಸುದ್ದಿಗಳು ಟೋಕಿಯೋ ಒಲಿಂಪಿಕ್ಸ್ ಆಯೋಜಕರಿಗೆ ತಲೆನೋವು ತಂದಿದೆ.

ಐಪಿಎಲ್ 2020ರ ಆವೃತ್ತಿಯಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಆಡಲ್ಲ!ಐಪಿಎಲ್ 2020ರ ಆವೃತ್ತಿಯಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಆಡಲ್ಲ!

ಕೊರೊನಾ ವೈರಸ್ ಹಬ್ಬಲಾರಂಭಿಸಿದಾಗಲೇ ಈ ಸೋಂಕಿನ ಬಗ್ಗೆ ಸಾಕಷ್ಟು ಗಾಳಿ ಸುದ್ದಿಗಳೂ ಹಬ್ಬತೊಡಗಿದ್ದವು. ಚೀನಾವೇ ಜೈವಿಕ ಅಸ್ತ್ರವಾಗಿ ಈ ಸೋಂಕನ್ನು ಪಸರಿಸಲಾರಂಭಿಸಿದೆ, ಉಳಿದ ರಾಷ್ಟ್ರಗಳನ್ನು ಹೆದರಿಸಲಾರಂಭಿಸಿದೆ ಎಂಬ ಮಾತುಗಳು ಕೇಳಿಬಂದಿದ್ದವು.

ಮೊದಲ ಪಂದ್ಯ ಸೋತರೂ ಈ ವಿಚಾರದಲ್ಲಿ ಟೀಮ್ ಇಂಡಿಯಾ ಗೆದ್ದಿದೆ!ಮೊದಲ ಪಂದ್ಯ ಸೋತರೂ ಈ ವಿಚಾರದಲ್ಲಿ ಟೀಮ್ ಇಂಡಿಯಾ ಗೆದ್ದಿದೆ!

ಇವಿಷ್ಟೇ ಅಲ್ಲ, ನಮ್ಮ ನಿಮ್ಮ ನಡುವಿನ ಗುಸುಗುಸುವಾಲರು ಈ ಸೋಂಕಿನ ಬಗ್ಗೆ ಇನ್ನೂ ಏನೇನೊ ಪಿಸುಗುಟ್ಟಿದ್ದರು, ಗಾಳಿಸುದ್ದಿಗಳ ಹರಿಯಬಿಟ್ಟಿದ್ದರು.

ಒಲಿಂಪಿಕ್ಸ್‌ ಆಯೋಜಕರಿಗೆ ತಲೆಬಿಸಿ

ಒಲಿಂಪಿಕ್ಸ್‌ ಆಯೋಜಕರಿಗೆ ತಲೆಬಿಸಿ

ಕೊರೊನಾ ವೈರಸ್ ಬಗ್ಗೆ ಹಬ್ಬುತ್ತಿರುವ ಗಾಳಿಸುದ್ದಿಗಳಿಂದ ಟೋಕಿಯೋ ಒಲಿಂಪಿಕ್ಸ್‌ ಆಯೋಜಕರೂ ತಲೆ ಕೆಡಿಸಿಕೊಳ್ಳುವಂತಾಗಿದೆ. ಜಪಾನ್‌ನಲ್ಲಿ ಆಯೋಜಿಸಲು ಉದ್ದೇಶಿಸಲಾಗಿರುವ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟ, ಕೊರೊನಾ ವೈರಸ್‌ನಿಂದಾಗಿ ರದ್ದಾಗಲಿದೆ ಎಂದೆಲ್ಲ ಮಾತುಗಳು ಕೇಳಿಬರುತ್ತಿರುವುದು ಇದಕ್ಕೆ ಕಾರಣ.

ಪ್ರತಿಕ್ರಮಕ್ಕೆ ಜಪಾನ್ ಸಿದ್ಧತೆ

ಪ್ರತಿಕ್ರಮಕ್ಕೆ ಜಪಾನ್ ಸಿದ್ಧತೆ

ಇವು ಬರೀ ಗಾಳಿಸುದ್ದಿಯಷ್ಟೇ, ಟೋಕಿಯೋ ಒಲಿಂಪಿಕ್ಸ್ ರದ್ದೇನಿಲ್ಲ ಎಂದು ಆಯೋಜಕರು ಹೇಳಿ ಹೇಳಿ ಸುಸ್ತಾಗುತ್ತಿದ್ದಾರೆ. 'ನಾವು ಇಂಟರ್ ನ್ಯಾಷನಲ್ ಒಲಿಂಪಿಕ್ಸ್ ಕಮಿಟಿ (ಐಒಸಿ) ಮತ್ತು ಇತರ ಸಂಬಂಧಪಟ್ಟ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಅಗತ್ಯ ಬಿದ್ದರೆ ಒಲಿಂಪಿಕ್ಸ್‌ ನಡೆಸಲು ಬೇಕಾದ ಯಾವುದೇ ಪ್ರತಿಕ್ರಮಗಳನ್ನು ಕೈಗೊಳ್ಳಲು ನಾವು ಸಿದ್ಧರಿದ್ದೇವೆ,' ಎಂದು ಟೋಕಿಯೋ ಒಲಿಂಪಿಕ್ಸ್ ಆಯೋಜಕರು ತಿಳಿಸಿದ್ದಾರೆ.

ಜಪಾನ್‌ನಲ್ಲೂ ಸೋಂಕಿನ ಪ್ರಕರಣ

ಜಪಾನ್‌ನಲ್ಲೂ ಸೋಂಕಿನ ಪ್ರಕರಣ

ಚೀನಾದಲ್ಲಿ ಬಹಳಷ್ಟು ಜನ ಕೊರೊನಾ ವೈರಸ್‌ಗೆ ತುತ್ತಾಗಿದ್ದರೆ, ಜಪಾನ್‌ನಲ್ಲೂ ಕೆಲವಷ್ಟು ಮಂದಿಗೆ ಈ ಸೋಂಕು ತಗುಲಿದ್ದು ವರದಿಯಾಗಿದೆ. ಹಾಗಂತ ಜಪಾನ್, ಈ ಸೋಂಕು ತಡೆಗೆ ಕ್ರಮ ಕೈಗೊಳ್ಳುತ್ತಿದೆ. 'ಟೋಕಿಯೋ ಒಲಿಂಪಿಕ್ಸ್‌ ರದ್ದತಿಯನ್ನು ಪರಿಗಣಿಸಿಲ್ಲ' ಎಂದು ಆಯೋಜಕರೂ ಹೇಳಿದ್ದಾರೆ. ಆದರೆ ಸುಳ್ಳು ಗಾಳಿಸುದ್ದಿಗಳು ಹಬ್ಬೋದು ಮಾತ್ರ ನಿಂತಿಲ್ಲ.

ಬಝ್ಯಾಪ್ ಕಿತಾಪತಿ

ಬಝ್ಯಾಪ್ ಕಿತಾಪತಿ

ಜಪಾನ್‌ನ ಪೋರ್ಟಲ್ ಸೈಟ್‌ 'ಬಝ್ಯಾಪ್ (Buzzap)', 'ಟೋಕಿಯೋ ಒಲಿಂಪಿಕ್ಸ್ ರದ್ದಾಗಿದೆ' ಎಂದು ಮೊದಲ ಬಾರಿ ಸುದ್ದಿ ಪ್ರಕಟಿಸಿ ಗಾಳಿಸುದ್ದಿಗೆ ನಾಂದಿ ಹಾಡಿತ್ತು. 'Tokyo Olympics Cancelled' ಅನ್ನೋ ಹ್ಯಾಷ್‌ನಡಿಯಲ್ಲಿ ಸುಮಾರು 50,000 ಟ್ವೀಟ್‌ಗಳೂ ಹರಿದಾಡಿದ್ದವು. ಟೋಕಿಯೋ ಒಲಿಂಪಿಕ್ಸ್‌ ರದ್ದನ್ನೋದು ಒಂದು ಸುಳ್ಳು ಗಾಳಿಸುದ್ದಿ ಅನ್ನೋದು ಸದ್ಯಕ್ಕಿರುವ ಮಾಹಿತಿ. ಅಂದ್ಹಾಗೆ, 2020ರ ಟೋಕಿಯೋ ಒಲಿಂಪಿಕ್ಸ್‌ ಜುಲೈ 24ರಿಂದ ಆಗಸ್ಟ್ 9ರ ವರೆಗ ನಡೆಯಲಿದೆ.

Story first published: Thursday, February 6, 2020, 19:26 [IST]
Other articles published on Feb 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X