ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

Tokyo Paralympics 2021: ಭಾರತದ ಧ್ವಜ ಹಿಡಿಯಲಿದ್ದ ಮರಿಯಪ್ಪನ್ ಕ್ವಾರಂಟೈನ್!

Tokyo Paralympics 2021: India’s flag-bearer Mariyappan Thangavelu in quarantine

ಟೋಕಿಯೋ: ಟೋಕಿಯೋ ಪ್ಯಾರಾಲಿಂಪಿಕ್ಸ್ ಆರಂಭವಾಗುತ್ತಲೇ ಭಾರತಕ್ಕೆ ಭೀತಿಯ ಸಂಗತಿಯೊಂದು ಎದುರಾಗಿದೆ. ಜಾಗತಿಕ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾರತದ ತ್ರಿವರ್ಣ ಧ್ವಜ ಹಿಡಿಯಲಿದ್ದ ಮರಿಯಪ್ಪನ್ ತಾಂಗವೇಲು ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ವಿಮಾನ ಯಾನದ ವೇಳೆ ತಾಂಗವೇಲು ಅವರಿಗೆ ಕೋವಿಡ್-19 ಸೋಂಕು ತಗುಲಿರುವ ಶಂಕೆಯಿರುವುದರಿಂದ ಅವರನ್ನು ಪ್ರತ್ಯೇಕವಾಗಿ ಐಸೊಲೇಶನ್‌ನಲ್ಲಿಡಲಾಗಿದೆ.

ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ಭಾರತೀಯ ಅಥ್ಲೀಟ್‌ಗಳ ಪಟ್ಟಿಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ಭಾರತೀಯ ಅಥ್ಲೀಟ್‌ಗಳ ಪಟ್ಟಿ

ಟೋಕಿಯೋ ಪ್ಯಾರಾಲಂಪಿಕ್ಸ್ ಕ್ರೀಡಾಕೂಟ ಆಗಸ್ಟ್ 24ರಂದು ಆರಂಭೋತ್ಸವ ಮೂಲಕ ಜಪಾನ್‌ನ ಟೋಕಿಯೋದಲ್ಲಿ ಚಾಲನೆಗೊಳ್ಳುತ್ತಿದೆ. ಭಾರತದ ಒಟ್ಟು 54 ಮಂದಿ ಅಥ್ಲೀಟ್‌ಗಳು ಕ್ರೀಡಾಕೂಟಕ್ಕೆ ತೆರಳಿದ್ದು, ವಿವಧ ಒಂಭತ್ತು ಸ್ಪರ್ಧೆಗಳಲ್ಲಿ ಭಾರತ ಪ್ರತಿನಿಧಿಸಲಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಟೆಕ್‌ಚಂದ್ ಕೈಗೆ ಭಾರತದ ಧ್ವಜ
ಆಗಸ್ಟ್ 24ರಂದು ನಡೆಯುವ ಉದ್ಘಾಟನಾ ಸಮಾರಂಭದ ವೇಳೆ ಮರಿಯಪ್ಪನ್ ತಾಂಗವೇಲು ಭಾರತದ ಧ್ವಜ ಹಿಡಿದು ಪಥ ಸಂಚಲನದಲ್ಲಿ ಸಾಗುವುದರಲ್ಲಿದ್ದರು. ಆದರೆ ತಾಂಗವೇಲು ಕ್ವಾರಂಟೈನ್ ನಲ್ಲಿರುವುದರಿಂದ ಅವರ ಜಾಗಕ್ಕೆ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಟೆಕ್‌ಚಂದ್ ಭಾರತದ ಧ್ವಜ ಹಿಡಿಯಲಿದ್ದಾರೆ. "ಟೋಕಿಯೋ ಒಲಿಂಪಿಕ್ಸ್‌ಗೆ ಹೋಗುವಾಗ ವಿಮಾನ ಯಾನದ ವೇಳೆ ಮರಿಯಪ್ಪನ್ ಅವರು ಕೋವಿಡ್-19 ಸೋಂಕಿತ ವಿದೇಶಿ ಪ್ರಯಾಣಿಕನನ್ನು ಹತ್ತಿರದಲ್ಲಿ ಸಂಪರ್ಕಿಸಿದ್ದರು. ಆದರೂ ಸ್ಪೋರ್ಟ್ಸ್ ವಿಲ್ಲೇಜ್‌ಗೆ ತಲುಪಿದ ಬಳಿಕ ಸತತ 6 ದಿನಗಳ ಕಾಲ ಅವರು ಪರೀಕ್ಷೆಗೆ ಒಳಗಾಗಿದ್ದರು. ಅವರ ಫಲಿತಾಂಶ ನೆಗೆಟಿವ್ ಬಂದಿತ್ತು. ಆದರೆ ಒಲಿಂಪಿಕ್ಸ್ ತಲಹಾ ಸಮಿತಿ ಪ್ಯಾರಾಲಂಪಿಕ್ಸ್ ಆರಂಭೋತ್ಸವದಲ್ಲಿ ಪಾಲ್ಗೊಳ್ಳಲು ಬಿಡದಂತೆ ಸಲಹೆ ನೀಡಿದೆ. ಹೀಗಾಗಿ ಮರಿಯಪ್ಪನ್ ಆರಂಭೋತ್ಸವದ ವೇಳೆ ರಾಷ್ಟ್ರದ ಧ್ವಜ ಹಿಡಿಯುತ್ತಿಲ್ಲ," ಎಂದು ಭಾರತೀಯ ಪ್ಯಾರಾಲಿಂಪಿಕ್ಸ್ ಕಮಿತಿ ಮಾಹಿತಿ ನೀಡಿದೆ.

ಐಪಿಎಲ್ 2021: ಅಪಾರವಾದ ಒತ್ತಡದಲ್ಲಿರುವ ಟಾಪ್ 3 ನಾಯಕರುಐಪಿಎಲ್ 2021: ಅಪಾರವಾದ ಒತ್ತಡದಲ್ಲಿರುವ ಟಾಪ್ 3 ನಾಯಕರು

ಇನ್ನೂ ಕೆಲ ಭಾರತೀಯ ಅಥ್ಲೀಟ್‌ಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ
2020ರ ಟೋಕಿಯೋ ಬೇಸಿಗೆ ಪ್ಯಾರಾಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಆರು ಅಧಿಕಾರಿಗಳು, ಐವರು ಪ್ಯಾರಾ ಅಥ್ಲೀಟ್‌ಗಳು ಮತ್ತು ಆರು ಅಧಿಕಾರಿಗಳಿಗೆ ಅನುಮತಿ ನೀಡಲಾಗಿದೆ ಎಂದು ಈ ಮೊದಲು ಈ ಮೊದಲು ಹೇಳಲಾಗಿತ್ತು. ಆದರೆ ಮರಿಯಪ್ಪನ್ ಜೊತೆಗೆ, ಜಪಾನಿನ ಆರೋಗ್ಯ ಅಧಿಕಾರಿಗಳು ಕೋವಿಡ್-19 ಸೋಂಕಿತನಿಗೆ ಹತ್ತಿರ ಸಂಪರ್ಕದಲ್ಲಿದ್ದರು ಎಂದು ಗುರುತಿಸಲ್ಪಟ್ಟ ಇತರ ಭಾರತೀಯ ಕ್ರೀಡಾಪಟುಗಳಾದ - ಲಾವಣ್ಯ ಸ್ವಸ್ತಿಕ್ ಸಿರ್ಸಿಕರ್, ಸೋಂಬೀರ್ ಸಿಂಗ್, ವಿನೋದ್ ಕುಮಾರ್, ಅಭಿಷೇಕ್ ಸಂಜೀವ್ ವಾಘ್ ಮತ್ತು ಮೊಹಮ್ಮದ್ ಡ್ಯಾನಿಶ್ ಕೂಡ ಆರಂಭೋತ್ಸವದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ತಿಳಿದು ಬಂದಿದೆ.

ಮರಿಯಪ್ಪನ್ ತಾಂಗವೇಲು ಅವರ ಸ್ಪರ್ಧೆ ಯಾವುದು?
ಮರಿಯಪ್ಪನ್ ಅವರು ಭಾರತದ ಪ್ರತಿಭಾನ್ವಿತ ಹೈ ಜಂಪ್‌ ಸ್ಪರ್ಧಿ. ಪುರುಷರ ಹೈ ಜಂಪ್ ಎಫ್ 42 ಸ್ಪರ್ಧೆಯಲ್ಲಿ ಮರಿಯಪ್ಪನ್ ಸ್ಪರ್ಧಿಸಲಿದ್ದಾರೆ. ಅವರಿಗೆ ತರಬೇತಿಗೆ ಅವಕಾಶವಿದೆ ಆದರೆ ನಿರ್ದಿಷ್ಟ ಸಮಯದ ಬಳಿಕ ಅವರಿಗೆ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗುತ್ತದೆ. ಅವರ ಸ್ಪರ್ಧೆಯ ವೇಳೆಯೂ ಎಚ್ಚರಿಕೆ ವಹಿಸಲಾಗುತ್ತದೆ. F42 ವರ್ಗವು ಕ್ರೀಡಾಪಟುಗಳಿಗೆ ಕಾಲಿನ ಕೊರತೆ, ಕಾಲಿನ ಉದ್ದ ವ್ಯತ್ಯಾಸ, ದುರ್ಬಲಗೊಂಡ ಸ್ನಾಯು ಶಕ್ತಿ ಅಥವಾ ಕಾಲುಗಳಲ್ಲಿನ ನಿಷ್ಕ್ರಿಯವಾದ ಚಲನೆಯ ದುರ್ಬಲತೆ ಹೊಂದಿರುವ ಅಥ್ಲೀಟ್‌ಗಳಿಗೆ ಮೀಸಲಾದ ಸ್ಪರ್ಧೆಯಾಗಿದೆ. ಪ್ಯಾರಾ ಆರ್ಚರಿ, ಪ್ಯಾರಾ ಅಥ್ಲೆಟಿಕ್ಸ್, ಪ್ಯಾರಾ ಬ್ಯಾಡ್ಮಿಂಟನ್, ಪ್ಯಾರಾ ಕ್ಯಾನೋಯಿಂಗ್, ಪ್ಯಾರಾ ಕ್ರೀಡೆ, ಪ್ಯಾರಾ ಈಜು, ಪ್ಯಾರಾ ಪವರ್ ಲಿಫ್ಟಿಂಗ್, ಪ್ಯಾರಾ ಟೇಬಲ್ ಟೆನಿಸ್ ಮತ್ತು ಪ್ಯಾರಾ ಟೇಕ್ವಾಂಡೋ ಸ್ಪರ್ಧೆಗಳಲ್ಲಿ ಭಾರತ ಸ್ಪರ್ಧಿಸುತ್ತಿದೆ. ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಐದು ಬಂಗಾರದ ಪದಕಗಳು ಸೇರಿ ಒಟ್ಟಿಗೆ 15ರಷ್ಟು ಪದಕಗಳ ನಿರೀಕ್ಷೆಯಿದೆ. ಪ್ಯಾರಾ ಅಥ್ಲೆಟಿಕ್ಸ್, ಪ್ಯಾರಾ ಬ್ಯಾಡ್ಮಿಂಟನ್, ಪ್ಯಾರಾ ಶೂಟಿಂಗ್, ಪ್ಯಾರಾ ಆರ್ಚರಿ ಸ್ಪರ್ಧೆಗಳಲ್ಲಿ ಭಾರತಕ್ಕೆ ಹೆಚ್ಚಿನ ಪದಕಗಳ ಭರವಸೆಯಿದೆ.

Story first published: Tuesday, August 24, 2021, 12:56 [IST]
Other articles published on Aug 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X