ವೈರಲ್ ಫೋಟೋ: MI vs DC ಪಂದ್ಯದ ವೇಳೆ ಪ್ರೇಕ್ಷಕರ ಗಮನ ಸೆಳೆದ ಈ ಮಿಸ್ಟರಿ ಗರ್ಲ್ಸ್ ಯಾರು?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ಅಭಿಯಾನ ಅಂತ್ಯದತ್ತ ಸಾಗುತ್ತಿದೆ. ಈಗಾಗಲೇ ಪ್ಲೇಆಫ್ ಪಂದ್ಯಗಳಿಗೆ ಲಭ್ಯವಿರುವ ನಾಲ್ಕು ತಂಡಗಳ ಮೂರು ಪಂದ್ಯಗಳನ್ನು ಈಗಾಗಲೇ ಕಾಯ್ದಿರಿಸಲಾಗಿದೆ. ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿತು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇಆಫ್ ಕನಸು ಈಡೇರಲಿಲ್ಲ.

ರಿಷಭ್ ಪಂತ್ ಅವರ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್‌ಗೆ ಪ್ರವೇಶಿಸುವುದನ್ನು ಖಚಿತಪಡಿಸಿಕೊಳ್ಳಲು ಮುಂಬೈ ಇಂಡಿಯನ್ಸ್ ವಿರುದ್ಧ ಜಯಗಳಿಸಬೇಕಾಗಿತ್ತು. ಆದರೆ ಮುಂಬೈ ವಿರುದ್ಧ ಸೋತಿದ್ದರಿಂದ ಮುಂದಿನ ಹಂತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅರ್ಹತೆ ಪಡೆಯಿತು.

ಈ ಎಲ್ಲಾ ಬೆಳವಣಿಗೆಯ ನಡುವೆ ಮುಂಬೈನ ವಾಂಖೆಡೆ ಕ್ರೀಡಾಂಗಣದ ಪ್ರೇಕ್ಷಕರ ಸ್ಟ್ಯಾಂಡ್‌ನಲ್ಲಿದ್ದ ಇಬ್ಬರು ಹುಡುಗಿಯರು (ಮಿಸ್ಟರಿ ಗರ್ಲ್ಸ್) ಕಾಣಿಸಿಕೊಂಡಿದ್ದು, ಕ್ರಿಕೆಟ್ ಅಭಿಮಾನಿಗಳ ಕಣ್ಣನ್ನು ಸೆಳೆದರು.

ಇಬ್ಬರು ಹುಡುಗಿಯರನ್ನು ಕ್ಯಾಮೆರಾದಲ್ಲಿ ಗುರುತಿಸಿದ ತಕ್ಷಣ, ನೆಟಿಜನ್ಸ್ 'ಮಿಸ್ಟರಿ ಹುಡುಗಿಯರನ್ನು' ಸೆರೆಹಿಡಿದ ಕ್ಯಾಮೆರಾಮೆನ್‌ಗಳ ಕೈ ಚಳಕವನ್ನು ಶ್ಲಾಘಿಸಿದ್ದಾರೆ. ಈ ಹುಡುಗಿಯರು ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳಾಗಿದ್ದು, ಈ ಹುಡುಗಿಯರನ್ನು ತೋರಿಸಿದಾಗಲೆಲ್ಲ ಪ್ರೇಕ್ಷಕರು ಹಚ್ಚೆದ್ದು ಕುಣಿಯುತ್ತಿದ್ದರು.

ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ಕುರಿತು ಮಾತನಾಡುವುದಾದರೆ, ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿದರು, ನಂತರ ಮುಂಬೈ ಬೌಲರ್‌ಗಳು ಡೆಲ್ಲಿಯ ಮೂರು ತ್ವರಿತ ವಿಕೆಟ್‌ಗಳನ್ನು ಉರುಳಿಸಿ ದಾಳಿಯನ್ನು ಮುನ್ನಡೆಸಿದರು.

ಆದಾಗ್ಯೂ, ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಷಭ್ ಪಂತ್ ಮತ್ತು ರೋವ್‌ಮನ್ ಪೊವೆಲ್ ಪ್ರತಿದಾಳಿ ಮಾಡಲು ಪ್ರಯತ್ನಿಸಿದರು. ಆದರೆ ಈ ಇಬ್ಬರು ಔಟಾದ ನಂತರ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಮೇಲುಗೈ ಸಾಧಿಸಿತು.

ಕೊನೆಯಲ್ಲಿ ಅಕ್ಷರ್ ಪಟೇಲ್ ಅವರ ಬಿರುಸಿನ ಬ್ಯಾಟಿಂಗ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ ಒಟ್ಟು 158/7 ತಲುಪಲು ಸಹಾಯ ಮಾಡಿತು. ನಂತರ ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ ಅವರ 48 ಮತ್ತು ಟಿಮ್ ಡೇವಿಡ್ ಅವರ ಅದ್ಭುತ 11 ಎಸೆತಗಳಲ್ಲಿ 34 ರನ್ ಚಚ್ಚಿದ ನಂತರ ಮುಂಬೈ ಇಂಡಿಯನ್ಸ್ ರೋಚಕವಾಗಿ ಗೆಲ್ಲಲು ನೆರವಾಯಿತು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, May 22, 2022, 12:26 [IST]
Other articles published on May 22, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X