ಒಡೆಯರ್ ಕೆಪಿಎಲ್ ಹರಾಜು ಅಪ್ಡೇಟ್ಸ್

Posted By:

ಬೆಂಗಳೂರು, ಆ.7: ಒಡೆಯರ್‌ ಕರ್ನಾಟಕ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಗುರುವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಂಡಿದೆ. ಆರ್‌.ವಿನಯ್‌ ಕುಮಾರ್‌ (ಬೆಳಗಾವಿ ಪ್ಯಾಂಥರ್ಸ್‌). ಕರುಣ್‌ ನಾಯರ್‌ (ಮಂಗಳೂರು ಯುನೈಟೆಡ್‌) ಹಳೆ ತಂಡದಲ್ಲೇ ಉಳಿದುಕೊಂಡಿದ್ದಾರೆ.

ಕಾರ್ಬನ್ ಮೊಬೈಲ್ಸ್ ಟೈಟಲ್ ಪ್ರಯೋಜಕತ್ವ ಪಡೆದುಕೊಂಡಿದೆ. ಹಿಂದಿನ ಆವೃತ್ತಿಯಲ್ಲಿ ಎರಡನೇ ಅತಿ ಹೆಚ್ಚು ಬೆಲೆಗೆ ಬಿಕರಿಯಾಗಿದ್ದ ಸ್ಟುವರ್ಟ್‌ ಬಿನ್ನಿ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವುದರಿಂದ ಅವರನ್ನು ಹರಾಜಿನಿಂದ ಕೈ ಬಿಡಲಾಗಿದೆ.

Manish Pandey

* ಎಂಸಿ ಅಯ್ಯಪ್ಪ 1.50 ಲಕ್ಷ ರುಗೆ ಬೆಳಗಾವಿ ಪ್ಯಾಂಥರ್ಸ್ ಪಾಲು
* ಜೆ ಸುಜೀತ್ ಮೈಸೂರ್ ವಾರಿಯರ್ಸ್ ಪಾಲು(90 ಸಾವಿರ ರು)
* ಮನೀಶ್ ಪಾಂಡೆ 3.10 ಲಕ್ಷಕ್ಕೆ ಖರೀದಿಸಿದ ಮೈಸೂರ್ ವಾರಿಯರ್ಸ್
* ಕೆಎಲ್ ರಾಹುಲ್ 2 ಲಕ್ಷಕ್ಕೆ ಹುಬ್ಳಿ ಟೈಗರ್ಸ್ ಪಾಲು
* ಮಾಯಾಂಕ್ ಅಗರ್ ವಾಲ್ ಬಳ್ಳಾರಿ ಟಸ್ಕರ್ 3.80 ಲಕ್ಷ ಗೆ ಮಾರಾಟ
* ಗಣೇಶ್ ಸತೀಶ್ ಮಂಗಳೂರ್ ಯುನೈಟೆಡ್ ಗೆ 1.3 ಲಕ್ಷ ರುಗೆ
* ಕೆ ಗೌತಮ್ ಬೆಳಗಾವಿ ಪ್ಯಾಂಥರ್ಸ್ ಗೆ 1.4 ಲಕ್ಷ ರುಗೆ ಮಾರಾಟ
* ಸಾದಿಕ್ ಕಿರ್ಮಾನಿ 80 ಸಾವಿರಕ್ಕೆಮೈಸೂರ್ ವಾರಿಯರ್ಸ್ ಪಾಲು
* ಎಸ್ ಅರವಿಂದ್ ಅವರು 3 ಲಕ್ಷ ರು.ಗೆ ಹುಬ್ಳಿ ಟೈಗರ್ಸ್ ಗೆ ಮಾರಾಟ

Robin Uthappa

* ಎಸ್ ಅರವಿಂದ್ ಅವರು ಹುಬ್ಳಿ ಟೈಗರ್ಸ್ ಗೆ ಮಾರಾಟ
* ಉದಿತ್ ಪಟೇಲ್ 2.9 ಲಕ್ಷ ರುಗೆ ಮಂಗಳೂರು ಯುನೈಟೆಡ್ ಪಾಲು
* ವಿಕೆಟ್ ಕೀಪರ್ ಅವಿನಾಶ್ ಕೆಸಿ 60 ಸಾವಿರ ರು.ಗೆ ಬಿಜಾಪುರ ಬುಲ್ಸ್ ಪಾಲು
* ವಿಕೆಟ್ ಕೀಪರ್ ಅವಿನಾಶ್ ಕೆಸಿ 60 ಸಾವಿರ ರು.ಗೆ ಬಿಜಾಪುರ ಬುಲ್ಸ್ ಪಾಲು
* ಮೈಸೂರು ವಾರಿಯರ್ಸ್ ತಂಡಕ್ಕೆ ಸೇರಿದ ಯರೇಗೌಡ 60 ಸಾವಿರ ರು.
* ಎ. ಖಾಜಿ ಬಳ್ಳಾರಿ ಟಸ್ಕರ್ಸ್ ಪಾಲು 2 ಲಕ್ಷ ರು ಗೆ ಮಾರಾಟ
* ಎಸ್ ಎಲ್ ಅಕ್ಷಯ್ ಮಂಗಳೂರು ಯುನೈಟೆಡ್ ಪಾಲು(1.3 ಲಕ್ಷ ರುಗೆ)
* ಬಿ.ಅಖಿಲ್ ಹುಬ್ಳಿ ಟೈಗರ್ಸ್ ಗೆ 3.1 ಲಕ್ಷಕ್ಕೆ ಮಾರಾಟ.
* ಭರತ್ ಚಿಪ್ಳಿ ಬೆಳಗಾವಿ ಪ್ಯಾಂಥರ್ಸ್ ಗೆ 4 ಲಕ್ಷಕ್ಕೆ ಮಾರಾಟ
* ಅಮಿತ್ ವರ್ಮಾ ಮೈಸೂರು ವಾರಿಯರ್ಸ್ ಪಾಲು(1.50 ಲಕ್ಷ ರು)
* ಸ್ಪಿನ್ನರ್ ಕೆಪಿ ಅಪ್ಪಣ್ಣ ಖರೀದಿಸಿದ ಬಿಜಾಪುರ ಬುಲ್ಸ್ (1.70 ಲಕ್ಷ ರು)
* ರಾಬಿನ್ ಉತ್ತಪ್ಪ ಬಳ್ಳಾರಿ ಟಸ್ಕರ್ ಪಾಲು 5.30 ಲಕ್ಷಕ್ಕೆ ಖರೀದಿ
* ವೇಗಿ ಅಭಿಮನ್ಯು ಮಿಥುನ್ ಬಿಜಾಪುರಬುಲ್ಸ್ ಗೆ 5 ಲಕ್ಷಕ್ಕೆ ಮಾರಾಟ
* ಬ್ಯಾಟ್ಸ್ ಮನ್ ಆರ್ ಸಮರ್ಥ್ ಬಿಜಾಪುರ ಬುಲ್ಸ್ ಗೆ 1.3 ಲಕ್ಷಕ್ಕೆ ಮಾರಾಟ.
* ವಿ ಚೆಲುವರಾಜು ಖರೀದಿಸಿದ 60 ಸಾವಿರ ರುಗೆ ಹುಬ್ಳಿ ಟೈಗರ್ಸ್ ಪಾಲು
Wadiyar KPL Cup 2014 Players Auction Updates

ಕೆಪಿಎಲ್ 2014 ಹರಾಜಿನ ಮುಖ್ಯಾಂಶಗಳು:
* ಹರಾಜಿನಲ್ಲಿ ಪಾಲ್ಗೊಳ್ಳಲಿರುವ ತಂಡಗಳು 6.
* ಮಂಗಳೂರು ಯುನೈಟೆಡ್, ಬೆಳಗಾವಿ ಪ್ಯಾಂಥರ್ಸ್, ಬಿಜಾಪುರ ಬುಲ್ಸ್, ಟೀಂ ಮೈಸೂರು, ಹುಬ್ಳಿ ಟೈಗರ್ಸ್,ಬಳ್ಳಾರಿ ಟಸ್ಕರ್ಸ್:
*'ಎ' ಗುಂಪಿನಲ್ಲಿ 30 ಮತ್ತು 'ಬಿ' ಗುಂಪಿನಲ್ಲಿ 200 ಆಟಗಾರರಿದ್ದಾರೆ.
*ತಂಡವೊಂದು 1.8 ಕೋಟಿ ರು ಹಣ ವ್ಯಯ ಮಾಡಬಹುದು
* ತಂಡದಲ್ಲಿ ಉಳಿದುಕೊಂಡ ಆಟಗಾರರು. ಆರ್‌.ವಿನಯ್‌ ಕುಮಾರ್‌ (ಬೆಳಗಾವಿ ಪ್ಯಾಂಥರ್ಸ್‌). ಕರುಣ್‌ ನಾಯರ್‌ (ಮಂಗಳೂರು ಯುನೈಟೆಡ್‌).
*'ಎ'ಗುಂಪಿನಲ್ಲಿರುವ ಆಟಗಾರರ ಮೂಲ ಬೆಲೆ 50 ಸಾವಿರ ರು
*'ಬಿ'ಗುಂಪಿನಲ್ಲಿರುವ ಆಟಗಾರರ ಮೂಲ ಬೆಲೆ 10 ಸಾವಿರ ರು
* ವೇಗಿ ಎಚ್‌.ಎಸ್‌.ಶರತ್‌ ಮತ್ತು ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಹರಾಜಿಗೆ ಅಲಭ್ಯರಾಗಿದ್ದಾರೆ.
* ಹಿರಿಯ ಆಟಗಾರರಾದ ಆನಂದ್‌ ಕಟ್ಟಿ, ಯರೇಗೌಡ ಮತ್ತು ಬಿ.ಅಖಿಲ್‌ ಅವರ ಹೆಸರು ಹರಾಜು ಪಟ್ಟಿಯಲ್ಲಿದೆ.

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ. Subscribe to Kannada MyKhel.

Story first published: Thursday, August 7, 2014, 16:20 [IST]
Other articles published on Aug 7, 2014

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ