ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್ ಆತಿಥ್ಯದಿಂದ ವಿಯೆಟ್ನಾಂ ಹಿಂದೆ ಸರಿದಿದ್ದು ಯಾಕ್ ಗೊತ್ತಾ?!

Why did Vietnam refuse to be host of Asian Games 2018?

ನವದೆಹಲಿ, ಆಗಸ್ಟ್ 16: ಈ ಬಾರಿಯ ಏಷ್ಯನ್ ಗೇಮ್ಸ್ ಆತಿಥ್ಯವನ್ನು ಅಸಲಿಗೆ ವಹಿಸಿಕೊಳ್ಳಬೇಕಿದ್ದುದು ವಿಯೆಟ್ನಾಂ. ಆದರೆ ಕಡೇಗಳಿಗೆಯಲ್ಲಿ ವಿಯೆಟ್ನಾಂ ಕ್ರೀಡಾಕೂಟದ ಆತಿಥ್ಯ ವಹಿಸಿಕೊಳ್ಳುವುದರಿಂದ ಹಿಂದೆ ಸರಿದಿತ್ತು. ಆಮೇಲೆ ಆತಿಥ್ಯದ ಜವಾಬ್ದಾರಿ ಇಂಡೋನೇಷ್ಯಾ ವಹಿಸಿಕೊಂಡಿತ್ತು.

ಏಷ್ಯನ್ ಗೇಮ್ಸ್ 2018: ಭಾರತದ ಪದಕ ಭರವಸೆಯ ಟಾಸ್ ಸ್ಪರ್ಧಿಗಳಿವರುಏಷ್ಯನ್ ಗೇಮ್ಸ್ 2018: ಭಾರತದ ಪದಕ ಭರವಸೆಯ ಟಾಸ್ ಸ್ಪರ್ಧಿಗಳಿವರು

ಒಲಿಂಪಿಕ್ಸ್, ವಿಶ್ವಕಪ್, ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ ನಂತ ಪ್ರತಿಷ್ಠಿತ ಗೇಮ್ಸ್ ಗಳ ಆತಿಥ್ಯ ವಹಿಸಲು ಕೆಲ ರಾಷ್ಟ್ರಗಳು ದುಂಬಾಲು ಬೀಳುತ್ತವೆ. ಯಾಕೆಂದರೆ ಅಂಥ ದೊಡ್ಡ ಕ್ರೀಡಾಕೂಟ-ಟೂರ್ನಮೆಂಟ್ ಗಳನ್ನು ಆಯೋಜಿಸೋದೇ ಒಂದು ಪ್ರತಿಷ್ಠೆ. ಆದರೆ ಈ ಬಾರಿಯ ಏಷ್ಯನ್ ಗೇಮ್ಸ್ ಆತಿಥ್ಯದಿಂದ ವಿಯೆಟ್ನಾಂ ಹಿಂಜರಿಯಲು ಕಾರಣ ಅಲ್ಲಿನ ಅಪರಾಧ ಕೃತ್ಯಗಳು, ವಾಹನ ದಟ್ಟಣೆ ಮತ್ತು ದುಬಾರಿ ವೆಚ್ಚಗಳು ಎಂದು ಹೇಳಲಾಗುತ್ತಿದೆ.

ವಿಯೆಟ್ನಾಂ ಸ್ಥಳೀಯ ಲೇಖಕ ಗ್ಯಾರಿ ವಿನ್ ಹೇಳುವಂತೆ, ಏಷ್ಯನ್ ಗೇಮ್ಸ್ ನಂತ ಕ್ರೀಡಾಕೂಟಗಳು ವಿಯೆಟ್ನಾಂನಲ್ಲಿ ನಡೆಯಬೇಕಾದರೆ ಮೊದಲು ಅಲ್ಲಿನ ದುಬಾರಿ ಖರ್ಚುಗಳಿಗೆ ಕಡಿವಾಣ ಹಾಕಬೇಕು. ಹೊಟೇಲ್, ಲಾಡ್ಜ್ ಗಳನ್ನು ಸ್ಪಚ್ಛಗೊಳಿಸಬೇಕು. ಪ್ರವಾಸಿಗರಿಗೆ ರಕ್ಷಣೆ ಒದಗಿಸಲು ಸೂಕ್ತ ವ್ಯವಸ್ಥೆ ಆಗಬೇಕಿದೆ.

ಗ್ಯಾರಿಯ ಪ್ರಕಾರ ಅಲ್ಲಿನ ಹೊಟೇಲ್ ಗಳು ಪ್ರವಾಸಿಗರಿಗೆ ಬಹಳ ದುಬಾರಿಯಂತೆ. ಸಾಲದ್ದಕ್ಕೆ ಹೊಟೇಲ್ ಗಳಲ್ಲಿ ಪ್ರೈವೆಸಿಗೆ ಅವಕಾಶವಿಲ್ಲ. ಇನ್ನು ಅಲ್ಲಿನ ವಾಹನದಟ್ಟಣೆಯ ಕತೆ ಕೇಳುವಂತಿಲ್ಲವಂತೆ. ಅಲ್ಲಿನ ಜನ ಟ್ರಾಫಿಕ್ ನಿಯಮ ಪಾಲಿಸೋದಿಲ್ಲ. ಅವರಿಗೆ ಅವರದ್ದೇ ಟ್ರಾಫಿಕ್ ರೂಲ್ಸ್ ಎಂಬಂತಿರುತ್ತಾರೆ.

ವಿಯೆಟ್ನಾಂನಲ್ಲಿ ಹೆಚ್ಚಿನ ಪೊಲೀಸರು ರಕ್ಷಣೆ ನೀಡುವುದರ ಬದಲು ಅವರೇ ತಲೆಕಟುಕರಂತೆ ವರ್ತಿಸುತ್ತಾರೆ ಎನ್ನುವ ಎಚ್ಚರಿಕೆಯನ್ನು ವಿನ್ ನೀಡುತ್ತಾರೆ. ನೀವೆಂಥದ್ದೇ ಪರಿಸ್ಥಿತಿಯಲ್ಲಿರಿ ಅಲ್ಲಿನ ಪೊಲೀಸರು ನಿಮಗೆ ಸಹಾಯ ಮಾಡುವ ಮೊದಲು ನಿಮ್ಮಿಂದ ಹಣ ಪೀಕುತ್ತಾರೆ. ಹೀಗಾಗಿ ಇವಕ್ಕೆಲ್ಲ ಸಣ್ಣದಾದರೂ ಪರಿಹಾರ ಕಂಡುಕೊಂಡ ಮೇಲಷ್ಟೆ ವಿಯೆಟ್ನಾಂ ಪ್ರತಿಷ್ಠಿತ ಕ್ರೀಡಾಕೂಟ ನಡೆಸಬೇಕಿದೆ. ಇದೇ ಕಾರಣಕ್ಕೆ ವಿಯೆಟ್ನಾಂ ಈ ಬಾರಿಯ 2018ರ ಏಷ್ಯಾನ್ ಗೇಮ್ಸ್ ಆತಿಥ್ಯದಿಂದ ಹಿಂಸರಿದಿದೆ ಎನ್ನುತ್ತಾರೆ ಗ್ಯಾರಿ.

Story first published: Friday, August 17, 2018, 12:33 [IST]
Other articles published on Aug 17, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X