ವಿಶ್ವ ವೇಟ್ ಲಿಫ್ಟಿಂಗ್: ಚಿನ್ನಕ್ಕೆ ಮುತ್ತಿಕ್ಕಿದ ಭಾರತದ ಮೀರಾಬಾಯಿ

Posted By:

ನವದೆಹಲಿ, ನವೆಂಬರ್ 30: ಅಮೆರಿಕದ ಅನಹೀಮ್ ನಲ್ಲಿ ನಡೆಯುತ್ತಿರುವ ವಿಶ್ವ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಗುರುವಾರ ಭಾರತದ ಮೀರಾಬಾಯಿ ಚಾನು ಚಿನ್ನ ಪದಕ ಮುಡಿಗೇರಿಸಿಕೊಂಡಿದ್ದಾರೆ.

48 ಕೆಜಿ ತೂಕದ ಮಹಿಳಾ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಚಾನು 194 ಕೆಜಿ ತೂಕದ ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಥಾಯ್ಲೆಂಡ್ ನ ಸುಕ್ರೋರೋನ್ ಥುನ್ಯಾ 193 ಕೆಜಿ ತೂಕದ ಭಾರ ಎತ್ತುವ ಮೂಲಕ ಬೆಳ್ಳಿ ಪಕದ ಪಡೆದರು. ಇನ್ನು ಸೆಗುರಾ ಅನಾ ಐರಿಸ್ 182 ಕೆ.ಜಿ ತೂಕ ಎತ್ತಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

World Weightlifting Championship: Mirabai Chanu wins gold

ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಭಾರತದ ಕರ್ಣಂ ಮಲ್ಲೇಶ್ವರಿ, 1994 ಮತ್ತು 1995ರ ವಿಶ್ವ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಎರಡು ಬಾರಿ ಚಿನ್ನ ಗೆದ್ದ ಸಾಧನೆ ಮಾಡಿದ್ದರು. ಇದೀಗ ಈ ಸಾಧನೆಯನ್ನು ಮೀರಾಬಾಯಿ ಮಾಡಿದ್ದಾರೆ.

ಭಾರತೀಯ ರೈಲ್ವೆ ಇಲಾಖೆಯಲ್ಲಿ ಉದ್ಯೋಗದಲ್ಲಿರುವ ಮೀರಾಬಾಯಿ ಚಾನು ಅವರ ಈ ಸಾಧನೆಗೆ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.

Story first published: Thursday, November 30, 2017, 15:10 [IST]
Other articles published on Nov 30, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ