ಅಂಡರ್ ಟೇಕರ್ ವಿರುದ್ಧ ಪಂದ್ಯದ ಬಗ್ಗೆ ಜಾನ್ ಸೀನಾ ಸುಳಿವು

Posted By:

ಬೆಂಗಳೂರು, ಜನವರಿ 03: WWE ರೆಸ್ಲಲ್ಮೇನಿಯಾದ ಮೆಗಾ ಪಂದ್ಯದ ಬಗ್ಗೆ ಚಾಂಪಿಯನ್ ಆಟಗಾರ ಜಾನ್ ಸೀನಾ ಸುಳಿವು ನೀಡಿದ್ದಾರೆ. ಈ ಬಾರಿ ದಿ ಅಂಡರ್ ಟೇಕರ್ ಹಾಗೂ ಆಂಡ್ರೆ ದಿ ಜೈಂಟ್ ವಿರುದ್ಧ ಸೆಣಸುವುದಾಗಿ ಹೇಳಿಕೊಂಡಿದ್ದಾರೆ.

WWE ಸೂಪರ್ ಸ್ಟಾರ್ ಸೀನಾ ಮತ್ತೊಮ್ಮೆ ರಿಂಗ್ ಗೆ ಇಳಿದರೆ ಯಾರನ್ನು ಎದುರು ಹಾಕಿಕೊಳ್ಳಬಹುದು ಎಂಬ ಕುತೂಹಲಕ್ಕೆ ಈ ಮೂಲಕ ತೆರೆ ಬಿದ್ದಿದೆ. ಅಂಡರ್ ಟೇಕರ್, ಆಂಡ್ರೆ ದಿ ಜೈಂಟ್ ಅವರ ವಿರುದ್ಧ ಸೆಣೆಸಲು ಸಿದ್ಧನಾಗಿದ್ದೇನೆ.

WWE: John Cena gave update on his match against The Undertaker

16 ಬಾರಿ ವಿಶ್ವ ಚಾಂಪಿಯನ್ ಆಗಲು ಹೊರಟ್ಟಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸೀನಾ, ನಾನು ರಿಕ್ ಫ್ಲೇರ್ ಅವರ ದಾಖಲೆ ಹಿಂದೆ ಬಿದ್ದಿಲ್ಲ. ಈ ವರ್ಷ ಹೊಸ ಅವಕಾಶ, ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ.

ಸಟರ್ಡೇ ನೈಟ್ ಲೈವ್, ಅಮೆರಿಕನ್ ಗ್ರಿಟ್, ಇಎಸ್ ಪಿವೈ ಮುಂತಾದ ಕಾರ್ಯಕ್ರಮಗಳನ್ನು ನಿರೂಪಿಸಿ ಯಶಸ್ವಿಯಾಗಿದ್ದು, ವಿಶ್ವದೆಲ್ಲೆಡೆ ಜನಪ್ರಿಯತೆ ಗಳಿಸಿದ್ದಾರೆ.


ಸ್ಮಾಕ್ ಡೌನ್ ಬ್ರ್ಯಾಂಡ್ ಬಗ್ಗೆ ಮಾತನಾಡಿದ ಸೀನಾ, ಇದು ಒನ್ ಮ್ಯಾನ್ ಶೋ ಆಗಿದ್ದರ ಬಗ್ಗೆ ವಿವರಿಸಿದರು. ಪೀಪಲ್ ಚಾಂಪಿಯನ್ ದಿ ರಾಕ್ ಅವರನ್ನು ಪಾರ್ಟ್ ಟೈಮರ್ ಎಂದು 2012ರಲ್ಲಿ ಕರೆದಿದ್ದರ ಬಗ್ಗೆ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.
(ಒನ್ಇಂಡಿಯಾ ಸುದ್ದಿ)
Story first published: Tuesday, January 3, 2017, 19:05 [IST]
Other articles published on Jan 3, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ