ಅಂಡರ್ ಟೇಕರ್ ಮೇಲೆ ಗೆಲ್ಲುತ್ತಾನಂತೆ ರೋಮನ್ ರೈನ್ಸ್ !

Posted By: ರಾಜ

ಬೆಂಗಳೂರು, ಮಾರ್ಚ್ 17: 'ಡೆಡ್ ಮ್ಯಾನ್' ಅಂಡರ್ ಟೇಕರ್ ಮೇಲೆ ಗೆಲ್ಲುತ್ತೀನಿ ಎಂದು ಯಾವ ಧೈರ್ಯ ಮೇಲೆ ಹೇಳಿದ ಅಂತಾ ಇನ್ನೂ WWE ಆಯೋಜಕರೇ ತಲೆಕೆಡಿಸಿಕೊಂಡಿದ್ದಾರೆ.

ಆದರೆ, ರೋಮನ್ ರೈನ್ಸ್ ಆತ್ಮ ವಿಶ್ವಾಸ ಕಂಡು ಅಭಿಮಾನಿಗಳಿಗೂ ಭಾರಿ ಕುತೂಹಲ ಉಂಟಾಗಿದೆ. The Big Dog ನಲ್ಲಿ ಯಾವುದೇ ಹೆಚ್ಚಿನ ಬಲ ಕಂಡು ಬಂದಿಲ್ಲ.

WWE: Prediction on how Undertaker-Roman Reigns match would end

ಹೆಚ್ಚೆಚ್ಚು ಅವಕಾಶಗಳು ಸಿಕ್ಕರೂ ಒದೆ ತಿಂದು ಮೂಲೆಗುಂಪಾಗುತ್ತಿರುವ ರೈನ್ಸ್ ಗೆ ಇದು ಭರ್ಜರಿ ಅವಕಾಶ. ಡೆಡ್ ಮ್ಯಾನ್ ಯುಗಾಂತ್ಯಕ್ಕೆ ನಾಂದಿ ಹಾಡಲು ಒಳ್ಳೆ ಅವಕಾಶ ಎಂದು ವಿಶ್ಲೇಷಣೆ ಕೇಳಿ ಬಂದಿದೆ.

ಅಂಡರ್ ಟೇಕರ್ ವಿರುದ್ಧದ ರೆಸ್ಲ್ ಮೇನಿಯಾ ಪಂದ್ಯದಲ್ಲಿ ರೋಮನ್ ರೈನ್ಸ್ ಗೆಲ್ಲಲಿ, ಸೋಲಲಿ WWE ಗೆ ಎರಡು ರೀತಿಯಲ್ಲೂ ಲಾಭ. ಪಂದ್ಯ ಹೇಗೆ ಕೊನೆಗೊಳ್ಳಲಿದೆ.ರೈನ್ಸ್ ಏನಾದರೂ ಬ್ರಾಕ್ ಲೆಸ್ನರ್ ನೆರವು ಸಿಗಲಿದೆಯೆ? ಎಂಬ ಕುತೂಹಲ ಕೂಡಾ ಹುಟ್ಟಿದೆ.

ಎರಡು ವರ್ಷಗಳ ಹಿಂದೆ ಬ್ರಾಕ್ ಲೆಸ್ನರ್ ಸೋಲಿಸಿ ರೆಸ್ಲ್ ಮೇನಿಯಾದ ಹೊಸ ತಾರೆಯಾಗಿ ರೋಮನ್ ರೈನ್ಸ್ ನನ್ನು ಮುಂದಕ್ಕೆ ತರಲು WWE ಯತ್ನಿಸಿತ್ತು. ಆದರೆ, ಈ ವಿಷಯ ಸೋರಿಕೆಯಾಗಿ ಅಭಿಮಾನಿಗಳ ವಿರೋಧ ಕಟ್ಟಿಕೊಳ್ಳಬೇಕಾಯಿತು.

ಈಗ ಅದೇ ಪರಿಸ್ಥಿತಿ ಮತ್ತೊಮ್ಮೆ ಎದುರಾಗಿದೆ. ಅಂಡರ್ ಟೇಕರ್ ಸೋಲುವುದು ಅಭಿಮಾನಿಗಳಿಗೆ ಬೇಕಿಲ್ಲ. ಆದರೆ, ಅಯೋಜಕರ ಕೃಪಾಪೋಷಿತ ರೈನ್ಸ್ ಸುಲಭ ಸೋಲು ಕೂಡಾ ಮುಂದಿನ ಪಂದ್ಯಗಳಿಗೆ ನೆಗಟಿವ್ ಆಗಿ ಪರಿಣಮಿಸಲಿದೆ. ಒಟ್ಟಾರೆ, ಈ ಪಂದ್ಯಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

Story first published: Friday, March 17, 2017, 23:51 [IST]
Other articles published on Mar 17, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ