ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್‌ನೊಂದಿಗೆ ಬಡಿದಾಡುತ್ತಿದ್ದ 'ರೋಮನ್' WWEಗೆ ಭಾವುಕ ವಿದಾಯ!

ಕ್ಯಾನ್ಸರ್‌ನಿಂದ'ರೋಮನ್ ರೇನ್ಸ್ WWEಗೆ ಭಾವುಕ ವಿದಾಯ! | Oneindia Kannada
WWEs Roman Reigns gives up title due to leukaemia

ಫ್ಲೋರಿಡಾ, ಅಕ್ಟೋಬರ್ 24: ವರ್ಲ್ಡ್ ರಸ್ಲಿಂಗ್ ಎಂಟರ್‌ಟೇನ್ಮೆಂಟ್ (WWE) 'ಪ್ರಿನ್ಸ್' ಖ್ಯಾತಿಯ ಸ್ಟಾರ್ ರಸ್ಲರ್ ಅಮೆರಿಕಾದ ರೋಮನ್ ರೇನ್ಸ್ WWEಗೆ ಸೋಮವಾರ (ಅಕ್ಟೋಬರ್ 22) ಭಾವುಕ ವಿದಾಯ ಹೇಳಿದ್ದಾರೆ. ಅವರು ಕ್ಯಾನ್ಸರ್ ನಿಂದ ಬಳಲುತ್ತಿರುವುದು ಇದಕ್ಕೆ ಕಾರಣ.

ದೇವಧರ್ ಟ್ರೋಫಿ: ದಿನೇಶ್ ಕಾರ್ತಿಕ್ ಹೋರಾಟ ವ್ಯರ್ಥ, ಭಾರತ ಬಿ ತಂಡಕ್ಕೆ ಜಯದೇವಧರ್ ಟ್ರೋಫಿ: ದಿನೇಶ್ ಕಾರ್ತಿಕ್ ಹೋರಾಟ ವ್ಯರ್ಥ, ಭಾರತ ಬಿ ತಂಡಕ್ಕೆ ಜಯ

ಅಬಾಲವೃದ್ಧರಿಂದ ಹಿಡಿದು ಎಲ್ಲರನ್ನೂ ರಂಜಿಸುತ್ತಿದ್ದ WWEಗೆ ಇನ್ನು ಪ್ರಿನ್ಸ್ ನ ಅನುಪಸ್ಥಿತಿ ಕಾಡಲಿದೆ. 25 ಮೇ 1985ರಲ್ಲಿ ಅಮೆರಿಕಾ ಫ್ಲೋರಿಡಾದ ಪೆನ್ಸಕೋಲಾದಲ್ಲಿ ಜನಿಸಿದ್ದ ರೋಮನ್ ರೇನ್ಸ್ ಗೆ ಈಗ 33 ವರ್ಷ ವಯಸ್ಸು. ರೇನ್ಸ್ ನಿಜ ಹೆಸರು ಲೆಟಿ ಜೋಸೆಫ್ ಅಯೋವಾಯಿ.

ಮಧ್ಯಮ ಕ್ರಮಾಂಕ ನನಗೆ ಹೊಸತಲ್ಲ, ಒತ್ತಡದ ಮಾತೇನಿಲ್ಲ: ರಾಯುಡುಮಧ್ಯಮ ಕ್ರಮಾಂಕ ನನಗೆ ಹೊಸತಲ್ಲ, ಒತ್ತಡದ ಮಾತೇನಿಲ್ಲ: ರಾಯುಡು

ಒಬ್ಬಂಟಿಯಾಗಿ ಬಂದರೂ, ತಂಡದ ಜೊತೆಗಿದ್ದರೂ ರೇನ್ಸ್ ರಸ್ಲಿಂಗ್ ನಲ್ಲಿ ಮಿಂಚುತ್ತಿದ್ದವರು. ತಂಡ ಸ್ಪರ್ಧೆಯಲ್ಲಿ ಹೆಚ್ಚುಸಾರಿ ಕಾಣಿಸಿಕೊಳ್ಳುತ್ತಿದ್ದ ರೋಮನ್, ಯುನಿವರ್ಸಲ್ ಚಾಂಪಿಯನ್ ಎನಿಸಿಕೊಂಡಿದ್ದವರು. ರೇನ್ಸ್ ಮಾಜಿ ಫುಟ್ಬಾಲ್ ಆಟಗಾರರೂ ಹೌದು.

11 ವರ್ಷದ ಹಿಂದೆಯೇ ಇದ್ದ ಖಾಯಿಲೆ

11 ವರ್ಷದ ಹಿಂದೆಯೇ ಇದ್ದ ಖಾಯಿಲೆ

ರೋಮನ್ ರೇನ್ಸ್ ಗೆ 11 ವರ್ಷದ ಹಿಂದೆಯೇ ಅಂದರೆ 22ರ ಹರೆಯದಲ್ಲಿದ್ದಾಗಲೇ ಕ್ಯಾನ್ಸರ್ ಆವರಿಸಿಕೊಂಡಿತ್ತು. ಅವರಿಗೆ ಲ್ಯುಕೇಮಿಯಾ (ಬಿಳಿ ರಕ್ತಕಣಗಳಿಗೆ ಸಂಬಂಧಿಸಿದ) ಕ್ಯಾನ್ಸರ್ ಇತ್ತು. ಆದರೂ ರಸ್ಲಿಂಗ್ ರಿಂಗ್ ನಲ್ಲಿ ಬಡಿದಾಡುತ್ತ, ಗೆಲ್ಲುತ್ತ ಅಭಿಮಾನಿಗಳನ್ನು ರಂಜಿಸುತ್ತಿದ್ದವರು, ಇಂದು ಕ್ಯಾನ್ಸರ್ ಎದುರು ಸೋತು ರಸ್ಲಿಂಗ್ ನಿಂದ ದೂರ ಉಳಿಯುತ್ತಿದ್ದಾರೆ.

ಕುಸಿದ ಶೀಲ್ಡ್ ಟೀಮಿನ ನಾಯಕ

ಕುಸಿದ ಶೀಲ್ಡ್ ಟೀಮಿನ ನಾಯಕ

ರೋಮನ್ ರೇನ್ಸ್ ಒಬ್ಬಟಿಂಗನಾಗಿ ಮಿಂಚಿದ್ದಕ್ಕಿಂತಲೂ ಹೆಚ್ಚು ಟ್ಯಾಗ್ಟೀಮಿನಲ್ಲಿ ಆಕರ್ಷಣೆ ಮೂಡಿಸಿದ್ದರು. 'ಶೀಲ್ಡ್ ರಸ್ಲಿಂಗ್ ಗ್ರೂಪ್'ನಲ್ಲಿ ಡೀನ್ ಆ್ಯಂಬ್ರೋಸ್ ಮತ್ತು ಸೇತ್ ರೋಲಿನ್ಸ್ ಜೊತೆ ರೇನ್ಸ್ ರಸ್ಲಿಂಗ್ ರಿಂಗ್ ಗೆ ಇಳಿದರೆಂದರೆ ಆ ಪಂದ್ಯ ಬಹುತೇಕ ಗೆದ್ದಂತೆಯೇ.

ಕನಸನ್ನು ನಿಜವಾಗಿಸಿದವರು ನೀವು

ಕನಸನ್ನು ನಿಜವಾಗಿಸಿದವರು ನೀವು

ಸೋಮವಾರ (ಅ.22) ವಿದಾಯ ಮಾತನ್ನಾಡುತ್ತ ರೇನ್ಸ್ ಅಭಿಮಾನಿಗಳನ್ನುದ್ದೇಶಿಸಿ, 'ನೀವೆಲ್ಲರೂ ನನ್ನ ಕನಸನ್ನು ನಿಜವಾಗಿಸುವಲ್ಲಿನ ಪಾಲುದಾರರು. ನಿಮ್ಮೆದುರು ನಾನು ಹೀರೋನಂತೆ ಮಿನುಗಿದ್ದೆ. ನೀವು ನನ್ನನ್ನು ಹುರಿದುಂಬಿಸಿದ್ದೀರೋ ಇಲ್ಲ ಹೀಯಾಳಿಸಿದ್ದೀರೋ ಅದು ನನಗೆ ಬೇಕಿಲ್ಲ. ಒಟ್ಟಿನಲ್ಲಿ ನನಗಾಗಿ ಪ್ರತಿಕ್ರಿಯಿಸುತ್ತಿದ್ರಿ. ನನಗಾಕ್ಷಣ ಅವಿಸ್ಮರಣೀಯ' ಎಂದರು.

'ಮತ್ತೆ ಬರಬಲ್ಲೆ' ಎಂಬ ಭಾವುಕ ನುಡಿ!

'ಮತ್ತೆ ಬರಬಲ್ಲೆ' ಎಂಬ ಭಾವುಕ ನುಡಿ!

ಮಾತು ಮುಂದುವರೆಸಿದ ರೇನ್ಸ್, 'ಈ ಖಾಯಿಲೆಯನ್ನು ನಾನು ಸೋಲಿಸಿದರೆ, ಮತ್ತೆ ಆದಷ್ಟು ಶೀಘ್ರ ನಿಮ್ಮೆದುರು ಬರಬಲ್ಲೆ' ಎಂದರು. ರೋಮನ್ ರೇನ್ಸ್ ವಿದಾಯಕ್ಕೆ ಮಿಡಿದಿರುವ ಸಾಮಾಜಿಕ ಜಾಲತಾಣ '#ThankYouRoman'ನೊಂದಿಗೆ ಪ್ರೀತಿಯ ರಸ್ಲರ್ ಗುಣವಾಗಲು ಶುಭ ಕೋರುತ್ತಿದೆ. WWE ಸ್ಟಾರ್ ಬಣವೂ ರೇನ್ಸ್ ಗೆ ತುಂಬು ಮನದ ಹಾರೈಕೆ ನೀಡಿದೆ.

ನೋಡುತ್ತಿದ್ದಂತೆ ಕಣ್ಣಂಚು ಪಸೆಯಾಡಿಸುವ ರೋಮನ್ ರೇನ್ಸ್ ಗೆ ಸಂಬಂಧಿಸಿರುವ ಕೆಲ ವಿಡಿಯೋ ಟ್ವೀಟ್ ಗಳು ಇಲ್ಲಿವೆ..

Story first published: Thursday, October 25, 2018, 22:50 [IST]
Other articles published on Oct 25, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X