ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

Flashback 2022: ಟೆನಿಸ್‌ಗೆ ರೋಜರ್ ಫೆಡರರ್ ವಿದಾಯ: ಪ್ರತಿಸ್ಪರ್ಧಿಗಳ ಬಾಂಧವ್ಯಕ್ಕೆ ಸಾಕ್ಷಿಯಾದ ಜಗತ್ತು!

Flashback 2022: Roger Federer retired from Tennis in September with 20 Grand Slam titles

2022ರಲ್ಲಿ ಕ್ರೀಡಾ ಲೋಕದಲ್ಲಿ ಸಾಕಷ್ಟು ಬೆಳವಣಿಗೆಳು ಆಗಿದೆ. ಕಾಮನ್‌ವೆಲ್ತ್ ಗೇಮ್ಸ್, ಟಿ20 ಕ್ರಿಕೆಟ್ ವಿಶ್ವಕಪ್, ಫುಟ್ಬಾಲ್ ವಿಶ್ವಕಪ್‌ನಂತಾ ಪ್ರಮುಖ ಟೂರ್ನಿಗಳು ಈ ವರ್ಷ ನಡೆದಿದ್ದು ಕ್ರೀಡಾಭಿಮಾನಿಗಳು ಈ ಕ್ಷಣಗಳನ್ನು ಕಣ್ತುಂಬಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕೆಲ ಭಾವನಾತ್ಮಕ ಸನ್ನಿವೇಶಗಳು ಕೂಡ ಕ್ರೀಡಾ ಲೋಕದಲ್ಲಿ ನಡೆದಿದೆ. ಇದರಲ್ಲಿ ಒಂದು ಟೆನಿಸ್ ಲೋಕದ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆನಿಸಿದ ರೋಚರ್ ಫೆಡರರ್ ಅವರ ವಿದಾಯ ಕೂಡ ಒಂದು.

ಸುದೀರ್ಘ 24 ವರ್ಷಗಳ ಕಾಲ ಟೆನಿಸ್ ಅಂಗಳದಲ್ಲಿ ಮೆರೆದ ರೋಜರ್ ಫೆಡರರ್ ಅನೇಖ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಸ್ವಿಜರ್ಲೆಂಡ್‌ನ ಈ ಶ್ರೇಷ್ಠ ತಾರೆ ಸೆಪ್ಟೆಂಬರ್ ತಿಂಗಳಿನಲ್ಲಿ ಟೆನಿಸ್ ವೃತ್ತಿ ಜೀವನಕ್ಕೆ ವಿದಾಯ ಘೋಷಣೆ ಮಾಡಿದ್ದಾರೆ. ಲಂಡನ್‌ನಲ್ಲಿ ನಡೆದ ಲೇವರ್ ಕಪ್ ಟೂರ್ನಿಯಲ್ಲಿ ಕೊನೆಯ ಬಾರಿ ಮೈದಾನದಲ್ಲಿ ಕಾಣಿಸಿಕೊಂಡು ಭಾವನಾತ್ಮಕವಾಗಿ ನಿವೃತ್ತರಾದರು.

2003ರ ವಿಂಬಲ್ಡನ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರುವ ಮೂಲಕ ಗ್ರ್ಯಾನ್‌ಸ್ಲ್ಯಾಮ್ ಬೇಟೆ ಆರಂಭಿಸಿದ ಫೆಡರರ್ ನಂತರ ಟೆನಿಸ್ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ತಮ್ಮ ವೃತ್ತಿಜೀವನದುದ್ದಕ್ಕೂ 6 ಆಸ್ಟ್ರೇಲಿಯನ್ ಓಪನ್, 8 ವಿಂಬಲ್ಡನ್, 5 ಯುಎಸ್ ಓಪನ್ ಪ್ರಶಸ್ತಿಗಳು ಮತ್ತು ಒಂದು ಫ್ರೆಂಚ್ ಓಪನ್ ಗೆದ್ದುಕೊಂಡಿದ್ದಾರೆ ಸ್ವಿಜರ್ಲ್ಯಾಂಡ್‌ನ ಈ ದಿಗ್ಗಜ ಆಟಗಾರ. ಅಲ್ಲದೆ ಪುರುಷರ ಸಿಂಗಲ್ಸ್‌ನಲ್ಲಿ 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರಾಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಕ್ ನಂತರ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಆಟಗಾರ ಎನಿಸಿಕೊಂಡಿದ್ದಾರೆ ಫೆಡರರ್.

ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದ ಟೆನಿಸ್ ಅಂಗಳ: ಇನ್ನು ಲೆವರ್ ಕಪ್‌ನಲ್ಲಿ ಯೂರೋಪ್ ತಂಡವನ್ನು ಪ್ರತಿನಿಧಿಸುವ ಮೂಲಕ ಅಂತಿಮ ಪಂದ್ಯವನ್ನಾಡಿದರು. ಈ ಪಂದ್ಯದಲ್ಲಿ ಅವರು ಟೆನಿಸ್ ಅಂಗಳದಲ್ಲಿ ಸುದೀರ್ಘ ಕಾಲದ ಪ್ರತಿಸ್ಪರ್ಧಿ ರಾಫೆಲ್ ನಡಾಲ್ ಜೊತೆಗೆ ಕಣಕ್ಕಿಳಿದಿದ್ದು ವಿಶೇಷವಾಗಿತ್ತು. ಆದರೆ ಈ ಜೋಡಿ ಸೋಲಿನಿಂದಿಗೆ ತಮ್ಮ ಹೋರಾಟವನ್ನು ಅಂತ್ಯಗೊಳಿಸಬೇಕಾಯಿತು. ಪಂದ್ಯದ ಮುಕ್ತಾಯದ ಬಳಿಕ ರೋಜರ್ ಫೆಡರರ್ ಜೊತೆಗೆ ರಾಫೆಲ್ ನಡಾಲ್ ಕೂಡ ಭಾವುಕರಾಗಿ ಕಣ್ಣೀರಿಟ್ಟ ದೃಶ್ಯಗಳು ಕೋಟ್ಯಂತರ ಅಭಿಮಾನಿಗಳನ್ನು ಕೂಡ ಭಾವುಕರನ್ನಾಗಿಸಿತ್ತು.

Story first published: Wednesday, December 21, 2022, 17:52 [IST]
Other articles published on Dec 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X