ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬಾರ್ಸಿಲೋನಾ ಓಪನ್‌: ರಾಫೆಲ್‌ ನಡಾಲ್‌ ಶುಭಾರಂಭ

Nadal labors past Mayer in Barcelona Open

ಬಾರ್ಸಿಲೋನಾ, ಏಪ್ರಿಲ್‌ 25: ಸ್ಪೇನ್‌ನ ದಿಗ್ಗಜ ಆಟಗಾರ ರಾಫೆಲ್‌ ನಡಾಲ್‌ ಇಲ್ಲಿ ನಡೆಯುತ್ತಿರುವ ಬಾರ್ಸಿಲೋನಾ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

 ಕ್ಲೇ ಕಿಂಗ್‌ ನಡಾಲ್‌ಗೆ ಶಾಕ್‌ ನೀಡಿದ ಫಾಬಿಯೊ ಕ್ಲೇ ಕಿಂಗ್‌ ನಡಾಲ್‌ಗೆ ಶಾಕ್‌ ನೀಡಿದ ಫಾಬಿಯೊ

ಕ್ಲೇ ಕೋರ್ಟ್‌ನಲ್ಲಿ ನಡೆಯುವ ಏಕಮಾತ್ರ ಗ್ರ್ಯಾನ್‌ ಸ್ಲ್ಯಾಮ್‌ ಟೂರ್ನಿ ಫ್ರೆಂಚ್‌ ಓಪನ್‌ನಲ್ಲಿ ತಮ್ಮ ಪ್ರಶಸ್ತಿ ಗಳಿಕೆಯನ್ನು 12ಕ್ಕೆ ವಿಸ್ತರಿಸಲು ಪೂರ್ವ ಸಿದ್ಧತೆಯಲ್ಲಿರುವ ವಿಶ್ವದ 2ನೇ ಶ್ರೇಯಾಂಕದ ಆಟಗಾರ ನಡಾಲ್‌, ಬಾರ್ಸಿಲೋನಾ ಅಂಗಣದಲ್ಲಿ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದರು. ಬಳಿಕ ನಡೆದ ಅಂತಿಮ 32ರ ಘಟ್ಟದ ಪಂದ್ಯದಲ್ಲಿ 6-7 (7/9), 6-4, 6-2 ಅಂತರದ ಸೆಟ್‌ಗಳಿಂದ ಅರ್ಜೆಂಟೀನಾದ ಆಟಗಾರ ಲಿಯೊನಾರ್ಡೊ ಮೇಯರ್‌ ವಿರುದ್ಧ ಗೆದ್ದು ಪ್ರಿ ಕ್ವಾರ್ಟರ್‌ ಹಂತಕ್ಕೆ ಕಾಲಿಟ್ಟಿದ್ದಾರೆ.

ಬಾರ್ಸಿಲೋನಾ ಅಂಗಣದಲ್ಲೂ 11 ಬಾರಿ ಪ್ರಶಸ್ತಿ ಗೆದ್ದಿರುವ ಹಾಲಿ ಚಾಂಪಿಯನ್‌ 32 ವರ್ಷದ ನಡಾಲ್‌, ಇದೀಗ ಕ್ವಾರ್ಟರ್‌ ಫೈನಲ್ಸ್‌ ಅರ್ಹತೆಗಾಗಿ ತಮ್ಮದೇ ದೇಶದ ಅನುಭವಿ ಆಟಗಾರ ಡೇವಿಡ್‌ ಫೆರರ್‌ ಅವರ ಕಠಿಣ ಸವಾಲು ಪಡೆದಿದ್ದಾರೆ. ನಿವೃತ್ತಿ ಅಂಚಿನಲ್ಲಿರುವ 37 ವರ್ಷದ ಆಟಗಾರ ಫೆರರ್, 32ರ ಘಟ್ಟದ ಪಂದ್ಯದಲ್ಲಿ 15ನೇ ಶ್ರೇಯಾಂಕಿತ ಆಟಗಾರ ಫ್ರಾನ್ಸ್‌ನ ಲೂಕಾಸ್‌ ಪೌಲಿ ಅವರನ್ನು 6-3, 6-1ರ ನೇರ ಸೆಟ್‌ಗಳಿಂದ ಮಣಿಸಿದ್ದಾರೆ.

 ಫಾಬಿಯೊ ಫಾಗ್ನಿನಿ ಮುಡಿಗೆ ಮಾಂಟೆ ಕಾರ್ಲೊ ಮಾಸ್ಟರ್ಸ್‌ ಗರಿ ಫಾಬಿಯೊ ಫಾಗ್ನಿನಿ ಮುಡಿಗೆ ಮಾಂಟೆ ಕಾರ್ಲೊ ಮಾಸ್ಟರ್ಸ್‌ ಗರಿ

"ನಿಜವಾಗಿಯೂ ಅಂದುಕೊಂಡಂತೆ ಉತ್ತಮ ಆರಂಭವೇನು ಸಿಕ್ಕಿಲ್ಲ. ಮಧ್ಯಾಹ್ನ ಆಟವಾಡುವುದು ಬಹಳ ಕಷ್ಟವಾಗಿತ್ತು. ಆದರೂ ಎದುರಾಳಿ ವಿರುದ್ಧ ಗೆಲುವು ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾದೆ,'' ಎಂದು ಪಂದ್ಯದ ಬಳಿಕ ಮಾತನಾಡಿದ ನಡಾಲ್‌ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಅಂತ್ಯಗೊಂಡ ಮಾಂಟೆ ಕಾರ್ಲೊ ಮಾಸ್ಟರ್ಸ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ನಡಾಲ್‌ ಇಟಲಿಯ ಆಟಗಾರ ಫಾಬಿಯೊ ಫಾಗ್ನಿನಿ ಎದುರು ನೇರ ಸೆಟ್‌ಗಳಿಂದ ಅಚ್ಚರಿಯ ಸೋಲುಂಡಿದ್ದರು. ಪ್ರಸಕ್ತ ಸಾಲಿನ ಫ್ರೆಂಚ್‌ ಓಪನ್‌ ಟೂರ್ನಿ ಮೇ.26ರಿಂದ ಜೂನ್‌ 9ರವರೆಗೆ ನಡೆಯಲಿದೆ.

Story first published: Thursday, April 25, 2019, 16:30 [IST]
Other articles published on Apr 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X