ಯುಎಸ್ ಓಪನ್‌ನಲ್ಲಿ ಆಡುವುದನ್ನು ಖಚಿತಪಡಿಸಿದ ನೊವಾಕ್ ಜೊಕೋವಿಕ್

ಕೊರೊನಾ ಭೀತಿಯ ಮಧ್ಯೆಯೇ ಆಯೋಜನೆಯಾಗಿರುವ ಯುಎಸ್ ಓಪನ್ ಟೆನ್ನಿಸ್‌ನಲ್ಲಿ ಪಾಲ್ಗೊಳ್ಳುವುದನ್ನು ನಂಬರ್ 1 ಟೆನ್ನಿಸ್ ಆಟಗಾರ ನೋವಾಕ್ ಜೊಕೋವಿಕ್‌ ಖಚಿತಪಡಿಸಿದ್ದಾರೆ. ಗುರುವಾರ ಈ ಬಗ್ಗೆ ಪ್ರಕಟಣೆಯನ್ನು ಜೊಕೋವಿಕ್‌ ಹೊರಡಿಸಿದ್ದಾರೆ.

ಆಗಸ್ಟ್ 31 ರಿಂದ ಯುಎಸ್ ಓಪನ್ ಆರಂಭವಾಗುತ್ತಿದ್ದು ಪ್ರೇಕ್ಷರಿಲ್ಲದೆ ಆಯೋಜನೆ ಮಾಡುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕೊರೊನಾ ವೈರಸ್ ಪ್ರಕರಣ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಕೆಲ ಆಟಗಾರರು ಈ ಬಾರಿಯ ಟೂರ್ನಿಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದ್ದಾರೆ.

ಯುಎಸ್‌ ಓಪನ್ 2020: ಸ್ಪರ್ಧೆಯಿಂದ ಹಿಂದಕ್ಕೆ ಸರಿದ ರಾಫೆಲ್ ನಡಾಲ್

ಸ್ವತಃ ಜೊಕೋವಿಕ್‌ ಕೂಡ ಆರಂಭದಲ್ಲಿ ಈ ಟೂರ್ನಿಯಲ್ಲಿ ಪಾಲ್ಗೊಳ್ಳದಿರುವ ನಿರ್ಧಾರವನ್ನು ಮಾಡಿರುವುದಾಗಿ ಹೇಳಿಕೊಂಡಿದ್ದರು. ಆದರೆ ಈಗ ತಮ್ಮ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿದ್ದಾರೆ. ಜೊಕೋವಿಕ್‌ ಇತ್ತೀಚೆಗೆ ಕೊರೊನಾ ವೈರಸ್‌ಗೂ ತುತ್ತಾಗಿ ಚೇತರಿಸಿಕೊಂಡಿದ್ದರು.

ಈ ಬಾರಿಯ ಯುಎಸ್ ಓಪನ್‌ಗೆ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಪಾಲ್ಗೊಳ್ಳುತ್ತಿಲ್ಲ. ಶಸ್ತ್ರ ಚಿಕಿತ್ಸೆಯ ಕಾರಣದಿಂದಾಗಿ ಈ ವರ್ಷದ ಎಲ್ಲಾ ಟೂರ್ನಿಗಳಿಂದ ಹಿಂದಕ್ಕೆ ಸರಿಯುವ ನಿರ್ಧಾರವನ್ನು ಫಡರರ್ ಈ ಹಿಂದೆಯೇ ತಿಳಿಸಿದ್ದರು. ಮತ್ತೊಂದೆಡೆ ರಾಫೆಲ್ ನಡಾಲ್ ಕೊರೊನಾ ವೈರಸ್‌ನ ಕಾರಣದಿಂದಾಗಿ ಪ್ರಯಾಣ ಮಾಡದಿರಲು ನಿರ್ಧರಿಸಿ ಯುಎಸ್ ಓಪನ್‌ನಿಂದ ಹಿಂದಕ್ಕೆ ಸರಿಯುವುದನ್ನು ಇತ್ತೀಚೆಗೆ ಖಚಿತಪಡಿಸಿದ್ದರು.

ನನ್ನನ್ನು ದೂಷಿಸಿ, ಜೊಕೋವಿಕ್‌ನಲ್ಲ: ಪ್ಲೇಯರ್ ಬೆನ್ನಿಗೆ ನಿಂತ ಸರ್ಬಿಯಾ ಪ್ರಧಾನಿ

ನೊವಾಕ್ ಜೊಕೋವಿಕ್‌ ಈವರೆಗೆ 17 ಯುಎಸ್ ಓಪನ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದು ಅದರಲ್ಲಿ 3 ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಐದು ಬಾರಿ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಬಾರಿಯ ಯುಎಸ್ ಓಪನ್‌ನಲ್ಲಿ ಪಾಲ್ಗೊಳ್ಳುವ ಮೂಲಕ ತಮಗಿಂತ ಮುಂದಿರುವ ರೊಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಅವರ ಮತ್ತಷ್ಟು ಸನಿಹಕ್ಕೆ ತಲುಪುವ ಅವಕಾಶ ಜೊಕೋವಿಕ್‌ ಮುಂದಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, August 13, 2020, 21:41 [IST]
Other articles published on Aug 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X