ಕಾಲಿನ ಗಾಯದೊಂದಿಗೆ 2021ರ ಸೀಸನ್ ಕೊನೆಗೊಳಿಸಿದ ರಾಫೆಲ್ ನಡಾಲ್

ಮ್ಯಾಡ್ರಿಡ್: ಸ್ಪೇನ್‌ನ ಸೂಪರ್ ಸ್ಟಾರ್ ಟೆನಿಸ್ ಆಟಗಾರ, ದಂತಕತೆ ರಾಫೆಲ್ ನಡಾಲ್ ಕಾಲುನೋವಿನೊಂದಿಗೆ 2021ರ ಸೀಸನ್‌ ಕೊನೆಗೊಳಿಸಿದ್ದಾರೆ. ಕಳೆದ ಒಂದು ವರ್ಷದಿಂದ ಕಾಡುತ್ತಿದ್ದ ಬಲ ಕಾಲಿನ ನೋವು ಮತ್ತೆ ಬಾಧಿಸತೊಡಗಿದ್ದರಿಂದ ಶುಕ್ರವಾರ (ಆಗಸ್ಟ್ 20) ತಾನು ಈ ಬಾರಿಯ ಸೀಸನ್‌ನಿಂದ ಹೊರ ಬೀಳುತ್ತಿರುವುದಾಗಿ ನಡಾಲ್ ತಿಳಿಸಿದ್ದಾರೆ.

ಟಿ ಟ್ವೆಂಟಿ ವಿಶ್ವಕಪ್: ಸೆಮಿಫೈನಲ್ ಪ್ರವೇಶಿಸಬಹುದಾದ ತಂಡಗಳನ್ನು ಹೆಸರಿಸಿದ ಗೌತಮ್ ಗಂಭೀರ್ಟಿ ಟ್ವೆಂಟಿ ವಿಶ್ವಕಪ್: ಸೆಮಿಫೈನಲ್ ಪ್ರವೇಶಿಸಬಹುದಾದ ತಂಡಗಳನ್ನು ಹೆಸರಿಸಿದ ಗೌತಮ್ ಗಂಭೀರ್

ವಿಶ್ವ ನಂ.4ನೇ ಶ್ರೇಯಾಂಕಿತರಾಗಿರುವ 'ಕಿಂಗ್ ಆಫ್ ಕ್ಲೇ' ಖ್ಯಾತಿಯ ರಾಫೆಲ್ ನಡಾಲ್, ಈ ತಿಂಗಳು ವಾಷಿಂಗ್ಟನ್‌ನಲ್ಲಿ ಸೋಲನುಭವಿಸಿದ್ದರು. ಇದರೊಂದಿಗೆ ಈ ವರ್ಷದ ಕೊನೇ ಗ್ರ್ಯಾಂಡ್‌ಸ್ಲ್ಯಾಮ್‌ನಲ್ಲಿ ನಡಾಲ್ ಹೊರ ಬಿದ್ದಿದ್ದಾರೆ. ವಾಷಿಂಗ್ಟನ್‌ ಓಪನ್‌ನಲ್ಲಿ ಕೊನೇ 16ನೇ ಸುತ್ತಿನಲ್ಲಿ ಸ್ಪರ್ಧಿಸಿದ್ದ ನಡಾಲ್ ದಕ್ಷಿಣ ಆಫ್ರಿಕಾದ ಲಾಯ್ಡ್ ಹ್ಯಾರೀಸ್ ವಿರುದ್ಧ 4-6, 6-1, 4-6ರ ಅಂತರದಲ್ಲಿ ಸೋಲನುಭವಿಸಿದ್ದರು.

IPL 2021 2ನೇ ಹಂತ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವೇಳಾಪಟ್ಟಿIPL 2021 2ನೇ ಹಂತ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವೇಳಾಪಟ್ಟಿ

ಕಳೆ ವಾರ ಟೊರೆಂಟೋದಲ್ಲಿ ನಡೆದಿದ್ದ ಮಾಸ್ಟರ್ಸ್ 1000 ಟೂರ್ನಿಯಿಂದಲೂ ನಡಾಲ್ ಹಿಂದೆ ಸರಿದಿದ್ದರು. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ನಡಾಲ್ ಮುಂಬರಲಿರುವ ಯುಎಸ್ ಓಪನ್‌ನಿಂದಲೂ ಹೊರ ಬಿದ್ದಿದ್ದಾರೆ. "ಒಂದು ವಿಚಾರ ನಾನು ನಿಮಗೆ ತಿಳಿಸಬೇಕು. ದುರದೃಷ್ಟವಶಾತ್ ನಾನು 2021ರ ಸೀಸನ್ ಕೊನೆಗೊಳಿಸುತ್ತಿದ್ದೇನೆ," ಎಂದು ಟ್ವಿಟರ್ ಮೂಲಕ ನಡಾಲ್ ತಿಳಿಸಿದ್ದಾರೆ.

ತನ್ನ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲೂ ಮಾತನಾಡಿರುವ ನಡಾಲ್, "ಎಲ್ಲರಿಗೂ ಹಲೋ, ಈ ವಿಚಾರ ಘೋಷಿಸುತ್ತಿರುವುದಕ್ಕೆ ನನ್ನನ್ನು ಕ್ಷಮಿಸಿ. ನನಗೆ 2021ರ ಸೀಸನ್‌ನಲ್ಲಿ ಆಡಲು ಸಾಧ್ಯವಾಗುತ್ತಿಲ್ಲ. ನಿಮಗೆಲ್ಲ ಗೊತ್ತಿರಬಹುದು. ನಾನು ಪಾದದ ಗಾಯದಿಂದ ಬಳಲುತ್ತಿದ್ದೇನೆ. ಇದೇ ಕಾರಣಕ್ಕೆ ನಾನು ಮುಂದಿನ ಯುಎಸ್ ಓಪನ್, ವಿಂಬಲ್ಡನ್, ಒಲಿಂಪಿಕ್ಸ್ ಇಂಥ ಅನೇಕ ಟೂರ್ನಿಗಳನ್ನು ಆಡಲಾಗಿಲ್ಲ," ಎಂದು ಭಾವುಕರಾಗಿ ಹೇಳಿದ್ದಾರೆ. 20 ಗ್ರ್ಯಾಂಡ್‌ಸ್ಲ್ಯಾಮ್‌ ಗೆದ್ದಿರುವ ವಿಶ್ವದ ಮೂವರಲ್ಲಿ ನಡಾಲ್ ಒಬ್ಬರು. ಇನ್ನಿಬ್ಬರೆಂದರೆ ನೊವಾಕ್ ಜೊಕೋವಿಕ್ ಮತ್ತು ರೋಜರ್ ಫೆಡರರ್.

For Quick Alerts
ALLOW NOTIFICATIONS
For Daily Alerts
Story first published: Friday, August 20, 2021, 17:19 [IST]
Other articles published on Aug 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X