ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಯುಎಸ್ ಓಪನ್‌‌ನಿಂದ ಹಿಂದೆ ಸರಿದ ರೋಜರ್ ಫೆಡರರ್!

Roger Federer Announces Knee Surgery and US Open Withdrawal

ಟೆನಿಸ್ ದಿಗ್ಗಜ ರೋಜರ್ ಫೆಡರರ್ ಮುಂಬರಲಿರುವ ಯುಎಸ್ ಓಪನ್ ಪಂದ್ಯಾವಳಿಗೆ ಅಲಭ್ಯರಾಗುವ ಕುರಿತು ಆಗಸ್ಟ್ 15ರ ಭಾನುವಾರದಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡುವುದರ ಮೂಲಕ ಮಾಹಿತಿ ನೀಡಿದ್ದಾರೆ. ಮಂಡಿರಜ್ಜು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ರೋಜರ್ ಫೆಡರರ್‌ ಈ ದೃಢ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ದ್ವಿತೀಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‌ ಟ್ರೋಫಿ: ಭಾರತ ತಂಡದ ಸಂಪೂರ್ಣ ವೇಳಾಪಟ್ಟಿ ಪ್ರಕಟದ್ವಿತೀಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‌ ಟ್ರೋಫಿ: ಭಾರತ ತಂಡದ ಸಂಪೂರ್ಣ ವೇಳಾಪಟ್ಟಿ ಪ್ರಕಟ

ಇತ್ತೀಚೆಗಷ್ಟೇ ರೋಜರ್ ಫೆಡರರ್ 2 ಸುತ್ತಿನ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗೆ ಶಸ್ತ್ರಚಿಕಿತ್ಸೆ ನಡೆದು 2 ವರ್ಷಗಳ ವಿಶ್ರಾಂತಿಯನ್ನು ತೆಗೆದುಕೊಂಡು ರೋಜರ್ ಫೆಡರರ್ ಮತ್ತೆ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಹೌದು ಫ್ರೆಂಚ್ ಓಪನ್ 2021 ಟೆನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ರೋಜರ್ ಫೆಡರರ್ ಅರ್ಧಕ್ಕೆ ಹಿಂದೆ ಸರಿದಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರೋಜರ್ ಫೆಡರರ್ ಈ ಬಾರಿಯ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಮೂರನೇ ಸುತ್ತನ್ನು ಯಶಸ್ವಿಯಾಗಿ ಗೆದ್ದು ನಾಲ್ಕನೇ ಸುತ್ತಿಗೆ ಪ್ರವೇಶವನ್ನು ಪಡೆದುಕೊಂಡಿದ್ದರು. ಆದರೆ ತೀವ್ರವಾದ ಮಂಡಿ ಗಾಯದ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರೋಜರ್ ಫೆಡರರ್ ವಿಶ್ರಾಂತಿ ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆಯಿಂದ ಫ್ರೆಂಚ್ ಓಪನ್ 2021 ಟೆನಿಸ್ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದರು.

ಹೀಗೆ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದ ರೋಜರ್ ಫೆಡರರ್ ಚೇತರಿಸಿಕೊಳ್ಳುವುದರ ಮೂಲಕ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಮತ್ತೆ ತಮ್ಮ ಕಾಲಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಕಾರಣ ಈ ಬಾರಿಯ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಿಂದಲೂ ರೋಜರ್ ಫೆಡರರ್ ಹಿಂದೆ ಸರಿದಿದ್ದಾರೆ. ಈ ಮೂಲಕ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ತಮ್ಮ ನೆಚ್ಚಿನ ಆಟಗಾರ ರೋಜರ್ ಫೆಡರರ್ ಆಟವನ್ನು ಕಣ್ತುಂಬಿಕೊಳ್ಳಬಹುದೆಂದು ಕಾಯುತ್ತಿದ್ದ ಅವರ ಅಭಿಮಾನಿಗಳಿಗೆ ಬೇಸರ ಉಂಟಾಗಿದೆ.

ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾ ಸೇರಿದ ಇಬ್ಬರು ಹೊಸ ಆಟಗಾರರುಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾ ಸೇರಿದ ಇಬ್ಬರು ಹೊಸ ಆಟಗಾರರು

'ನನ್ನ ಕಾಲಿನ ಸಮಸ್ಯೆಯ ಕುರಿತು ನಾನು ಆಗಾಗ ವೈದ್ಯರ ಬಳಿ ಸಲಹೆಗಳನ್ನು ಪಡೆದುಕೊಳ್ಳುತ್ತಿದೆ. ಆಟದಲ್ಲಿ ಭಾಗವಹಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದೆ. ಆದರೆ ವೈದ್ಯರು ಸಲಹೆ ನೀಡಿರುವ ಪ್ರಕಾರ ದೀರ್ಘಕಾಲದ ವಿಶ್ರಾಂತಿಯ ಅಗತ್ಯ ಇದೆ ಮತ್ತು ದೀರ್ಘಕಾಲದ ಚಿಕಿತ್ಸೆಯ ಅಗತ್ಯವೂ ಸಹ ಇದೆ. ಹಾಗೂ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲೇಬೇಕು ಎಂದು ಹೇಳಿರುವ ಕಾರಣ ನಾನೀಗ ಶಸ್ತ್ರಚಿಕಿತ್ಸೆಗೆ ಒಳಗಾಗಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ನಾನು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕೆಂದು ತೀರ್ಮಾನಿಸಿದ್ದೇನೆ. ಇಂಥಾ ವಯಸ್ಸಿನಲ್ಲಿಯೂ ಪುನಃ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಎಷ್ಟು ಕಷ್ಟ ಎಂಬುದು ನನಗೆ ಅರಿತಿದೆ. ಶಸ್ತ್ರಚಿಕಿತ್ಸೆಯ ನಂತರ ಹಾಸಿಗೆಯ ಮೇಲೆಯೇ ತುಂಬಾ ತಿಂಗಳುಗಳನ್ನು ಕಳೆಯಬೇಕಾಗುತ್ತದೆ ಮತ್ತು ಕೆಲ ತಿಂಗಳುಗಳ ಕಾಲ ಆಟದಿಂದಲೂ ಸಹ ದೂರವಿರಬೇಕಾಗುತ್ತದೆ' ಎಂದು ರೋಜರ್ ಫೆಡರರ್ ಹೇಳಿದ್ದಾರೆ.

ಇನ್ನೂ ಮುಂದುವರಿದು ಮಾತನಾಡಿದ 20 ಬಾರಿ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಆಗಿರುವ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ 'ನಾನು ಆರೋಗ್ಯದಿಂದ ಇರಬೇಕು, ಮತ್ತೆ ಮೈದಾನದ ತುಂಬಾ ಓಡಾಡುವ ಹಾಗೆ ಆಗಬೇಕು, ನನ್ನಲ್ಲೇ ನಾನು ವಿಶ್ವಾಸ ತುಂಬುವ ಅಗತ್ಯವಿದೆ. ಹಾಗೂ ಮತ್ತೆ ಆಟದಲ್ಲಿ ಪಾಲ್ಗೊಳ್ಳುವ ಆಸೆ ನನ್ನಲ್ಲಿದೆ' ಎಂದು ಹೇಳಿಕೆ ನೀಡಿದ್ದಾರೆ. ಸದ್ಯ ರೋಜರ್ ಫೆಡರರ್ ತೆಗೆದುಕೊಂಡಿರುವ ಈ ದಿಢೀರ್ ನಿರ್ಧಾರದಿಂದ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನ ಆಟವನ್ನು ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ನೋಡಲಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ, ಹಾಗೂ ರೋಜರ್ ಫೆಡರರ್ ತೆಗೆದುಕೊಂಡಿರುವ ನಿರ್ಣಯ ಸರಿಯಾಗಿದೆ ಮೊದಲು ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುತ್ತಿರುವ ಅವರ ಆಯ್ಕೆ ಸರಿಯಾದದ್ದು ಎಂದು ಕೆಲ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ರೋಜರ್ ಫೆಡರರ್ ಹಾಕಿರುವ ಪೋಸ್ಟ್ ಕುರಿತು ಕಾಮೆಂಟ್ ಮಾಡುತ್ತಿರುವ ಕ್ರೀಡಾಭಿಮಾನಿಗಳು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮುಗಿದು ಆದಷ್ಟು ಬೇಗ ರೋಜರ್ ಫೆಡರರ್ ಮೈದಾನಕ್ಕಿಳಿದು ಆಟವಾಡಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.

Story first published: Monday, August 16, 2021, 10:45 [IST]
Other articles published on Aug 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X