ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಸೆರೆನಾ ಕನಸು ನುಚ್ಚುನೂರು, ಸಿಮೋನಾ ಚೊಚ್ಚಲ ವಿಂಬಲ್ಡನ್ ಚಾಂಪಿಯನ್!

Simona Halep stuns Serena Williams to lift maiden Wimbledon title

ಲಂಡನ್, ಜುಲೈ 14: ಶನಿವಾರ (ಜುಲೈ 13) ನಡೆದ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಏಳು ಬಾರಿಯ ಚಾಂಪಿಯನ್ ಸೆರೆನಾ ವಿಲಿಯಮ್ಸ್ ದಂಗುಬಡಿಸಿದ ಸಿಮೋನಾ ಹಾಲೆಪ್, ವೃತ್ತಿ ಜೀವನದ ಚೊಚ್ಚಲ ವಿಂಬಲ್ಡನ್ ಟ್ರೋಫಿಗೆ ಮುತ್ತಿಕ್ಕಿದ್ದಾರೆ.

ವಿಶ್ವಕಪ್ ಕುತೂಹಲಕಾರಿ ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಪ್ರಶಸ್ತಿ ಸುತ್ತಿನಲ್ಲಿ ರೊಮೇನಿಯಾ ಸ್ಟಾರ್ ಆಟಗಾರ್ತಿ ಹಾಲೆಪ್, ಅಮೆರಿಕಾ ಬಲಿಷ್ಠೆ ಸೆರೆನಾ ವಿಲಿಯಮ್ಸ್ ಅವರನ್ನು 6-2, 6-2ರ ನೇರ ಸೆಟ್‌ನಿಂದ ಮಣಿಸಿದರು. 2018ರ ಫ್ರೆಂಚ್ ಓಪನ್ ಜಯಿಸಿದ ಬಳಿಕ ಸಿಮೋನಾ ಗೆದ್ದ ಎರಡನೇ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಯಿದು.

ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಟೆನಿಸ್ ದಂತಕತೆ ಮಾರ್ಗರೆಟ್ ಕೋರ್ಟ್ ಅವರ ಅತ್ಯಧಿಕ ಗ್ರ್ಯಾಂಡ್‌ಸ್ಲ್ಯಾಮ್ ವಿಶ್ವದಾಖಲೆ ಸರಿದೂಗಿಸಲು ಸೆರೆನಾಗೆ ಅವಕಾಶವಿತ್ತು. ಸೆರೆನಾ ಈ ಪಂದ್ಯ ಗೆದ್ದಿದ್ದರೆ ಮಾರ್ಗರೆಟ್ ಅವರ 24 ಗ್ರ್ಯಾಂಡ್‌ಸ್ಲ್ಯಾಮ್ ದಾಖಲೆ ಸರಿದೂಗಲಿತ್ತು. ಆದರೆ ರೋಮನ್ ಆಟಗಾರ್ತಿ ಸಿಮೋನಾ ಇದಕ್ಕೆ ಅವಕಾಶ ನೀಡಲಿಲ್ಲ.

ಎಂಎಸ್ ಧೋನಿ ನಿವೃತ್ತಿ ಘೋಷಿಸಿದರೆ ಮುಂದಿನ ಐಪಿಎಲ್‌ನಲ್ಲಿ ಆಡ್ತಾರ?!ಎಂಎಸ್ ಧೋನಿ ನಿವೃತ್ತಿ ಘೋಷಿಸಿದರೆ ಮುಂದಿನ ಐಪಿಎಲ್‌ನಲ್ಲಿ ಆಡ್ತಾರ?!

ಪಂದ್ಯದ ಬಳಿಕ ಮಾತನಾಡಿದ ಹಾಲೆಪ್, 'ನಾನು 10 ವರ್ಷದವಳಾಗಿದ್ದಾಗ ನನ್ನ ತಾಯಿ ನನ್ನಲ್ಲಿ, ನೀನು ಟೆನಿಸ್‌ನಲ್ಲಿ ಏನಾದರೂ ಸಾಧಿಸಬೇಕು. ಮುಂದೊಂದು ದಿನ ವಿಂಬಲ್ಡನ್ ಫೈನಲ್‌ನಲ್ಲಿ ಆಡಬೇಕು ಎಂದಿದ್ದಳು. ಪಂದ್ಯದ ವೇಳೆ ಮುಜುಗರ, ಒತ್ತಡವನ್ನ ಅನುಭವಿಸಿದೆ. ಆದರೆ ನನ್ನ ಪ್ರೇರಣೆ ಗೆಲುವಿನೆಡೆಗಿತ್ತು' ಎಂದಿದ್ದಾರೆ.

Story first published: Sunday, July 14, 2019, 13:38 [IST]
Other articles published on Jul 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X