ವಿಂಬಲ್ಡನ್ ಗ್ರ್ಯಾಂಡ್‌ಸ್ಲ್ಯಾಮ್‌ಗೆ ರಷ್ಯಾ ಆಟಗಾರರಿಗೆ ನಿಷೇಧ: 'ಇದು ಹುಚ್ಚುತನ' ಎಂದ ಜೊಕೊವಿಕ್

ಮುಂಬರುವ ವಿಂಬಲ್ಡನ್ ಗ್ರ್ಯಾಂಡ್‌ಸ್ಲ್ಯಾಮ್‌ ಟೆನಿಸ್ ಟೂರ್ನಿಯಲ್ಲಿ ರಷ್ಯಾ ಟೆನಿಸ್ ಆಟಗಾರರನ್ನ ನಿಷೇಧಿಸಿದಕ್ಕಾಗಿ ವಿಶ್ವದ ನಂಬರ್ ಒನ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಕ್ ಖಂಡನೆ ವ್ಯಕ್ತಪಡಿಸಿದ್ದಾರೆ.

ವಿಶ್ವದ ಅತ್ಯಂತ ಹಳೆಯ ಟೆನಿಸ್ ಟೂರ್ನಮೆಂಟ್‌ಗಳಲ್ಲಿ ಒಂದಾದ ವಿಂಬಲ್ಡನ್‌, ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಖಂಡಿಸಿ ರಷ್ಯಾ ಹಾಗೂ ಬೆಲಾರೂಸಿಯನ್ ಆಟಗಾರರಿಗೆ ನಿಷೇಧ ಹೇರಿದೆ. ಇದ್ರ ಬೆನ್ನಲ್ಲೇ ಜೊಕೊವಿಕ್ ಗುರುವಾರ ಸಮಿತಿಯ ನಿರ್ಧಾರವನ್ನ ಹುಚ್ಚುತನ ಎಂದು ಟೀಕಿಸಿದ್ದಾರೆ.

ವಿಂಬಲ್ಡನ್ ನಿರ್ಧಾರ ಕುರಿತು ಮಾತನಾಡಿರುವ ಜೊಕೊವಿಕ್ '' ವಿಂಬಲ್ಡನ್ ನಿರ್ಧಾರವನ್ನು ಬೆಂಬಲಿಸಲು ಸಾಧ್ಯವಿಲ್ಲ. ಇದು ಹುಚ್ಚುತನ ಎಂದು ನಾನು ಭಾವಿಸುತ್ತೇನೆ. ರಾಜಕೀಯವು ಕ್ರೀಡೆಗೆ ಅಡ್ಡಿಪಡಿಸಿದಾಗ, ಫಲಿತಾಂಶವು ಉತ್ತಮವಾಗಿರುವುದಿಲ್ಲ'' ಎಂದು ಹೇಳಿದ್ದಾರೆ.

ಜೊಕೊವಿಕ್ ತನ್ನ ಮಾತನ್ನ ಮುಂದುವರಿಸುತ್ತ ''ನಾನು ಎಂದಿಗೂ ಯುದ್ಧವನ್ನು ಬೆಂಬಲಿಸುವುದಿಲ್ಲ, ನಾನು ಯುದ್ಧದ ಮಗುವಾಗಿದ್ದೇನೆ, ಅದು ಎಷ್ಟು ಭಾವನಾತ್ಮಕ ಆಘಾತವನ್ನು ನೀಡುತ್ತದೆ ಎಂದು ನನಗೆ ತಿಳಿದಿದೆ. ಸೆರ್ಬಿಯಾದಲ್ಲಿ, 1999 ರಲ್ಲಿ ಏನಾಯಿತು ಎಂಬುದು ನಮಗೆಲ್ಲರಿಗೂ ತಿಳಿದಿದೆ'' ಎಂದು ಸರ್ಬಿಯಾ ಟೆನಿಸ್ ಸ್ಟಾರ್ ಹೇಳಿದ್ದಾರೆ.

ವಿಂಬಲ್ಡನ್ ಯುನೈಟೈಡ್ ಕಿಂಗ್‌ಡಮ್‌ನ ಮೊದಲ ಪ್ರತ್ಯೇಕ ಟೆನಿಸ್ ಚಾಂಪಿಯನ್‌ಶಿಪ್ ಆಗಿದ್ದು, ನೂರಾರು ವರ್ಷಗಳ ಇತಿಹಾಸವನ್ನ ಹೊಂದಿದೆ. ಪಂದ್ಯಾವಳಿಯನ್ನು ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಕ್ಲಬ್ AELTC ಆಯೋಜಿಸುತ್ತದೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ಪ್ರತಿಭಟಿಸಿ, ರಷ್ಯಾದಲ್ಲಿ ತನ್ನ ಪ್ರಭಾವವನ್ನು ಮಿತಿಗೊಳಿಸುವ ಸಲುವಾಗಿ ರಷ್ಯಾದ ಮತ್ತು ಬೆಲಾರೂಸಿಯನ್ ಆಟಗಾರರ ಮೇಲೆ ನಿರ್ಬಂಧಗಳನ್ನು ವಿಧಿಸಲು ನಿರ್ಧರಿಸಿದೆ ಎಂದು AELTC ಇತ್ತೀಚೆಗಷ್ಟೇ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಅನ್ಯಾಯದ ಮಿಲಿಟರಿ ಆಕ್ರಮಣದ ಅಡಿಯಲ್ಲಿ ರಷ್ಯಾ ಅಥವಾ ಬೆಲರೂಸಿಯನ್ ಆಟಗಾರರಿಂದ ರಷ್ಯಾ ಉತ್ತಮ ಹೆಸರನ್ನು ಪಡೆಯುವುದು ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದರು.

ಉಕ್ರೇನ್ ವಿರುದ್ಧ ರಷ್ಯಾ ಸೇನಾ ಕಾರ್ಯಾಚರಣೆ ಆರಂಭಿಸಿ ಸುಮಾರು ಎರಡು ತಿಂಗಳಾಗಿದೆ. ಆದರೂ ರಷ್ಯಾ ಉಕ್ರೇನ್ ಮೇಲೆ ತನ್ನ ದಾಳಿಯನ್ನು ಮುಂದುವರೆಸಿದೆ. ನ್ಯಾಟೋಗೆ ಉಕ್ರೇನ್ ಪ್ರವೇಶವನ್ನು ರಷ್ಯಾ ಬಲವಾಗಿ ವಿರೋಧಿಸುತ್ತದೆ, ಉಕ್ರೇನ್ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತದೆ. ಉಕ್ರೇನ್ ರಷ್ಯಾದ ಪ್ರಸ್ತಾಪಗಳನ್ನು ತಿರಸ್ಕರಿಸಿದ ನಂತರ ರಷ್ಯಾ ಉಲ್ಟಾ ಹೊಡೆದಿದೆ.

ಫೆಬ್ರವರಿ 20 ರಂದು ರಷ್ಯಾ ಉಕ್ರೇನ್ ಮೇಲೆ ಥಟ್ಟನೆ ಯುದ್ಧ ಘೋಷಿಸಿತು. ಅಮೆರಿಕ, ಬ್ರಿಟನ್ ಸೇರಿದಂತೆ ಹಲವು ಐರೋಪ್ಯ ರಾಷ್ಟ್ರಗಳು ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಿವೆ. ಈ ಕ್ರಮದಲ್ಲಿ ಅಮೆರಿಕ ಸೇರಿದಂತೆ ಐರೋಪ್ಯ ರಾಷ್ಟ್ರಗಳು ರಷ್ಯಾದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರುತ್ತಲೇ ಇದ್ದವು. ರಷ್ಯಾ ಈಗಾಗಲೇ ಹಲವಾರು ವ್ಯಾಪಾರ, ಕ್ರೀಡೆ ಮತ್ತು ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ. ಇತ್ತೀಚಿನ ವಿಂಬಲ್ಡನ್ 2022 ಪಂದ್ಯಾವಳಿಯಿಂದ ರಷ್ಯಾ ಮತ್ತು ಬೆಲಾರೂಸಿಯನ್ ಆಟಗಾರರನ್ನು ನಿಷೇಧಿಸಲಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, April 21, 2022, 20:09 [IST]
Other articles published on Apr 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X