ನಿಷೇಧದ ನಂತರದ ಮೊದಲ ಗ್ರ್ಯಾಂಡ್ ಸ್ಲಾಂನಲ್ಲಿ ಶರಪೋವಾ ಶುಭಾರಂಭ

Posted By:

ನ್ಯೂಯಾರ್ಕ್, ಆಗಸ್ಟ್ 29: ವಿಶ್ವವಿಖ್ಯಾತ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ ಅವರು, ಯುಎಸ್ ಓಪನ್ ನ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ 2ನೇ ಶ್ರೇಯಾಂಕಿತ ಆಟಗಾರ್ತಿಯಾದ ರೊಮೇನಿಯಾದ ಸಿಮೊನಾ ಹ್ಯಾಲೆಪ್ ವಿರುದ್ಧ ಜಯ ಸಾಧಿಸಿದ್ದಾರೆ.

ಅರ್ತರ್ ಆ್ಯಶೆ ಕೋರ್ಟ್ ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಅವರು, ಹ್ಯಾಲೆಪ್ ವಿರುದ್ಧ 6-4, 4-6 ಹಾಗೂ 6-3 ಸೆಟ್ ಗಳ ಅಂತರದಲ್ಲಿ ಜಯ ಸಾಧಿಸಿದರು.

ಯುಎಸ್ ಓಪನ್ : ಮರಿಯಾ ಶರಪೋವಾಗೆ ಸಿಕ್ತು ವೈಲ್ಡ್ ಕಾರ್ಡ್

ಈ ಜಯ ಮರಿಯಾ ಶರಪೋವಾ ಅವರಿಗೆ ವಿಶೇಷ ಎನಿಸಿದೆ. ಏಕೆಂದರೆ, ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ಎರಡು ವರ್ಷಗಳ ಕಾಲ ನಿಷೇಧ ಅನುಭವಿಸಿದ ನಂತರ, ಅವರು ಆಡುತ್ತಿರುವ ಮೊದಲ ಗ್ರ್ಯಾಂಡ್ ಸ್ಲಾಂ ಟೂರ್ನಿಯಿದು.

ವಿಂಬಲ್ಡನ್ ಟೂರ್ನಿಯಿಂದ ಮರಿಯಾ ಶರಪೋವಾ ಔಟ್!

ಇದೇ ವರ್ಷ ಅವರು ಟೆನಿಸ್ ವೃತ್ತಿಜೀವನಕ್ಕೆ ಮರಳಿದ್ದರು. ಆರಂಭದಲ್ಲಿ ಡಬ್ಲ್ಯೂಟಿಎ ಟೂರ್ನಿಗಳಾದ ಸ್ಟುಟ್ ಗರ್ಟ್ ಓಪನ್, ಮ್ಯಾಡ್ರಿಡ್ ಓಪನ್ ಹಾಗೂ ಇಟಾಲಿಯನ್ ಓಪನ್ ಟೂರ್ನಿಗಳಲ್ಲಿ ಆಡಿದ್ದರು. ಇದೀಗ, ನಿಷೇಧದ ಶಿಕ್ಷೆ ಅನುಭವಿಸಿದ ನಂತರ ಗ್ರ್ಯಾಂಡ್ ಸ್ಲಾಂ ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಆತ್ಮವಿಶ್ವಾಸದಲ್ಲಿ ಮರಿಯಾ

ಆತ್ಮವಿಶ್ವಾಸದಲ್ಲಿ ಮರಿಯಾ

ಮಂಗಳವಾರ ನಡೆದ ಯುಎಸ್ ಓಪನ್ ಪಂದ್ಯದಲ್ಲಿ ಮರಿಯಾ, ಆತ್ಮವಿಶ್ವಾಸದಿಂದಲೇ ಕಣಕ್ಕಿಳಿದಂತೆ ಕಂಡುಬಂತು. ಅತ್ತ, ಸಿಮೊನಾ ಹ್ಯಾಲೆಪ್ ಅವರಲ್ಲೂ ಆತ್ಮವಿಶ್ವಾಸ ಇತ್ತಾದರೂ, ದಿಗ್ಗಜ ಕ್ರೀಡಾಳುವನ್ನು ಎದುರುಗೊಳ್ಳುತ್ತಿರುವ ಆತಂಕವೂ ಅವರಲ್ಲಿ ಕಾಣುತ್ತಿತ್ತು.

ಮೊದಲ ಸೆಟ್ ನಲ್ಲಿ ಗೆಲುವು

ಮೊದಲ ಸೆಟ್ ನಲ್ಲಿ ಗೆಲುವು

ಮೊದಲ ಸೆಟ್ ನಲ್ಲಿ ಇಬ್ಬರಿಂದ ತೀವ್ರ ಪೈಪೋಟಿ ಬಂದರೂ, ಮಿಂಚಿನ ಆಟ ಪ್ರದರ್ಶಿಸಿದ ಮರಿಯಾ, ಈ ಸೆಟ್ ಅನ್ನು 6-4 ಅಂತರದಲ್ಲಿ ಗೆದ್ದುಕೊಂಡರು.

ಎರಡನೇ ಸೆಟ್ ನಲ್ಲಿ ಸೋಲು

ಎರಡನೇ ಸೆಟ್ ನಲ್ಲಿ ಸೋಲು

ಇನ್ನು, ಎರಡನೇ ಸೆಟ್ ನಲ್ಲಿ ಚೇತರಿಸಿಕೊಂಡ ಹ್ಯಾಲೆಪ್, ಮೊದಲ ಸೆಟ್ ನಲ್ಲಿ ಆಡುವಾಗ ಒತ್ತಡದಲ್ಲಿ ಮಾಡಿಕೊಂಡಿದ್ದ ಕೆಲವಾರು ಎಡವಟ್ಟುಗಳನ್ನು ಮೆಟ್ಟಿ ನಿಂತರು. ಇದರಿಂದಾಗಿ, ಮೊದಲ ಸೆಟ್ ನ ಅಂಕಗಳು ಇಲ್ಲಿ ತಿರುಗುಮುರುಗು ಆಗಿ, ಮರಿಯಾ ಶರಪೋವಾ 4-6 ಅಂತರದಲ್ಲಿ ಈ ಸೆಟ್ ಸೋಲಬೇಕಾಯಿತು.

ಗೆಲುವಿಗೆ ನೆರವಾದ ಏಸ್ ಹಾಗೂ ಭರ್ಜರಿ ಆಟ

ಗೆಲುವಿಗೆ ನೆರವಾದ ಏಸ್ ಹಾಗೂ ಭರ್ಜರಿ ಆಟ

ಇನ್ನು, ಇಬ್ಬರ ಪಾಲಿಗೆ ನಿರ್ಣಾಯಕ ಎನಿಸಿದ ಮೂರನೇ ಸೆಟ್ ನಲ್ಲಿ (ಮಹಿಳೆಯರಿಗೆ ಮೂರು ಸೆಟ್ ಗಳ ಪಂದ್ಯಗಳಿರುತ್ತವೆ) ಮತ್ತೆ ಮೇಲುಗೈ ಸಾಧಿಸಿದ ಶರಪೋವಾ, ದಣಿವರಿಯದ ಹೋರಾಟ ನೀಡಿದರು. ಕೆಲವಾರು ಏಸ್ ಗಳು ಶರಪೋವಾ ಅವರ ಗೆಲುವಿಗೆ ಸೋಪಾನವಾಗಿ ಬದಲಾದವು. ಭರ್ಜರಿ ಎದುರುತ್ತರ ನೀಡುತ್ತಲೇ ಸಾಗಿದ ಶರಪೋವಾ ಕೊನೆಗೂ ಈ ಸೆಟ್ ಅನ್ನು 6-3 ಅಂತರದಲ್ಲಿ ಗೆದ್ದು ಆ ಮೂಲಕ ಪಂದ್ಯದಲ್ಲೂ ಜಯ ಗಳಿಸಿದರು.

Story first published: Tuesday, August 29, 2017, 9:40 [IST]
Other articles published on Aug 29, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ