ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಯೂಎಸ್ ಓಪನ್ 2018: ಡೈರೆಕ್ಟ್ ಎಂಟ್ರಿ ಕೈ ತಪ್ಪಿಸಿಕೊಂಡ ವಿಕ್ಟೋರಿಯಾ

Victoria Azarenka, 2-time US Open finalist, misses direct entry for Grand Slam

ವಾಷಿಂಗ್ಟನ್, ಜುಲೈ 19: ಯೂಎಸ್ ಓಪನ್ ನಲ್ಲಿ ಎರಡುಬಾರಿ ಫೈನಲ್ ಪ್ರವೇಶಿಸಿದ್ದ ವಿಕ್ಟೋರಿಯಾ ಅಜರೆಂಕಾಗೆ ಈ ವರ್ಷ ನಡೆಯುವ ಕೊನೆಯ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಮೆಂಟ್ ಆದ ಯೂಎಸ್ ಓಪನ್ 2018ಕ್ಕೆ ಡೈರೆಕ್ಟ್ ಎಂಟ್ರಿ ಕೈ ತಪ್ಪಿದೆ. ಈ ಟೂರ್ನಿಗಾಗಿ ಸ್ಟಾನ್ ವಾಂವ್ರಿಕಾ ಅವರಿಗೂ ನೇರ ಪ್ರವೇಶ ದೊರೆತಿಲ್ಲ.

ಅಂಪೈರ್‌ನಿಂದ ಚೆಂಡು ಪಡೆದು ನಿವೃತ್ತಿಯ ಸುಳಿವು ಕೊಟ್ಟರೇ ಧೋನಿ?ಅಂಪೈರ್‌ನಿಂದ ಚೆಂಡು ಪಡೆದು ನಿವೃತ್ತಿಯ ಸುಳಿವು ಕೊಟ್ಟರೇ ಧೋನಿ?

ಮಾಜಿ ನಂ. 1 ಆಟಗಾರ್ತಿಯಾಗಿರುವ ಅಜರೆಂಕಾ ಎರಡುಬಾರಿ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಆಗಿಯೂ ಮಿಂಚಿದ್ದರು. ಸದ್ಯ ವಿಶ್ವ ನಂ. 108ರಲ್ಲಿರುವ ವಿಕ್ಟೋರಿಯಾ ಇತ್ತೀಚೆಗೆ ಫಾರ್ಮ್ ಕಳೆದುಕೊಂಡಿದ್ದರು. ಆಡಿದ ಪ್ರಮುಖ ಪಂದ್ಯಾಟಗಳಲ್ಲೂ ವಿಕ್ಟೋರಿಯಾಗೆ ಹಿನ್ನಡೆಯಾಗಿತ್ತು.

ಯೂಎಸ್ ಓಪನ್ ಟೆನಿಸ್ ಅಸೋಸಿಯೇಷನ್ ಪ್ರತಿಷ್ಠಿತ ಟೂರ್ನಿಗಾಗಿ ಅರ್ಹತೆ ಗಿಟ್ಟಿಸಿರುವ ಪುರುಷರ ಸಿಂಗಲ್ಸ್ ವಿಭಾಗದ ಆರು ಆಟಗಾರರ ಹೆಸರನ್ನು ಬುಧವಾರ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ವಿಶ್ವ ನಂ. 1 ಆಟಗಾರ ರಾಫೆಲ್ ನಡಾಲ್, ರೋಜರ್ ಫೆಡರರ್, ನೊವಾಕ್ ಜೊಕೊವಿಕ್, ಆ್ಯಂಡಿ ಮರ್ರೆ, ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಮತ್ತು ಮರಿನ್ ಕ್ಲಿನಿಕ್ ಇದ್ದಾರೆ.

ಈ ಹಿಂದೆ ಟೆನಿಸ್ ಅಂಗಳದಲ್ಲಿ ಮುಂಚಿದ್ದ ಸ್ಟಾರ್ ಆಟಗಾರ ಸ್ಟಾನ್ ವಾಂವ್ರಿಕಾ ಅವರಿಗೂ ಯೂಎಸ್ ಓಪನ್ ಗೆ ಡೈರೆಕ್ಟ್ ಎಂಟ್ರಿ ದೊರೆತಿಲ್ಲ. ವಾಂವ್ರಿಕಾ ಕೂಡ ಇತ್ತೀಚೆಗೆ ಆಟದ ತೀಕ್ಷ್ಣತೆ ಕಳೆದುಕೊಂಡಿದ್ದು, ಸದ್ಯ ರ್ಯಾಂಕಿಂಗ್ ನಲ್ಲಿ 199ನೇ ಸ್ಥಾನದಲ್ಲಿದ್ದಾರೆ.

ವನಿತಾ ವಿಭಾಗದ ಇತ್ತೀಚಿನ ರ್ಯಾಂಕಿಂಗ್ ಗೆ ಅನುಗುಣವಾಗಿ ಆರು ಬಾರಿಯ ಯೂಎಸ್ ಓಪನ್ ಚಾಂಪಿಯನ್ ಸೆರೆನಾ ವಿಲಿಯಮ್ಸ್, ಎರಡು ಬಾರಿಯ ವಿಜೇತೆ ವೀನಸ್ ವಿಲಿಯಮ್ಸ್, ಹಾಲಿ ಚಾಂಪಿಯನ್ ಸ್ಲೋನೆ ಸ್ಟೀಫನ್ಸ್, ಮರಿಯಾ ಶರಪೋವಾ ಮತ್ತು ಸಮಂತಾ ಸ್ಟೋಸರ್ ಅವರಿಗೆ ಈ ಟೂರ್ನಿಗೆ ಡೈರೆಕ್ಟ್ ಎಂಟ್ರಿ ಸಿಕ್ಕಿದೆ.

Story first published: Thursday, July 19, 2018, 12:28 [IST]
Other articles published on Jul 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X