For Quick Alerts
ALLOW NOTIFICATIONS  
For Daily Alerts

ವಿಂಬಲ್ಡನ್: ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ ಹಾಲಿ ಚಾಂಪಿಯನ್ ಜೊಕೋವಿಕ್

Wimbledon: defending champion Djokovic fights back to defeat Jack Draper in first round

ಲಂಡನ್, ಜೂನ್ 28: ಕೊರೊನಾವೈರಸ್‌ನಿಂದಾಗಿ ಒಂದು ವರ್ಷಗಳ ವಿರಾಮದ ಬಳಿಕ ಮತ್ತೆ ಟೆನ್ನಿಸ್ ಲೋಕದ ಪ್ರತಿಷ್ಟಿತ ಟೂರ್ನಿಯಾದ ವಿಂಬಲ್ಡನ್ ಆರಂಭವಾಗಿದೆ. ಮೊದಲ ಸುತ್ತಿನಲ್ಲಿ ವಿಶ್ವದ ನಂಬರ್ 1 ನೊವಾಕ್ ಜೊಕೋವಿಕ್ ಎದುರಾಳಿ ಜಾಕ್ ಡ್ರಾಪರ್ ವಿರುದ್ಧ ಆರಂಭಿಕ ಹಿನ್ನಡೆಯ ಹೊರತಾಗಿಯೂ ಗೆಲುವು ಸಾಧಿಸಿದ್ದಾರೆ.

ಬ್ರಿಟಿಷ್ ವೈಲ್ಡ್ ಕಾರ್ಡ್ ಆಟಗಾರ ಜಾಕ್ ಡ್ರಾಪರ್ ವಿರುದ್ಧ ಜೊಕೋವಿಕ್ 4-6, 6-1, 6-2, 6-2 ಅಂತರದಿಂದ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಲಗ್ಗಯಿಟ್ಟಿದ್ದಾರೆ. ಮೊದಲ ಸುತ್ತನ್ನು ಜೊಕೋವಿಕ್ ಕಳೆದುಕೊಂಡರಾದರೂ ಎರಡನೇ ಸುತ್ತಿನಲ್ಲಿ ತಿರುಗಿ ಬೀಳುವಲ್ಲಿ ಯಶಸ್ವಿಯಾದರು. ಬಳಿಕ ಎದುರಾಳಿಗೆ ಸಣ್ಣ ಅವಕಾಶವನ್ನೂ ಜೊಕೋವಿಕ್ ನೀಡಲಿಲ್ಲ. ಅದರಲ್ಲೂ ನಾಲ್ಕನೇ ಸುತ್ತು ಮೂರನೇ ಸುತ್ತಿನ ಅಕ್ಷರಶಃ ಪುನರಾವರ್ತನೆಯಂತಿತ್ತು.

ಈ ಮೂಲಕ ಮತ್ತೊಂದು ಗ್ರ್ಯಾಂಡ್ ಸ್ಲಾಮ್‌ ಮೇಲೆ ಜೊಕೋವಿಕ್ ಚಿತ್ತ ನೆಟ್ಟಿರುವುದು ಸ್ಪಷ್ಟವಾಗಿದೆ. 2019ರ ವಿಂಬಲ್ಡನ್‌ ಟ್ರೋಫಿಗೆ ಮುತ್ತಿಕ್ಕಿರುವ ಜಾಕೊವಿಕ್ ಮತ್ತೊಮ್ಮೆ ಆ ಸಾಧನೆಯನ್ನು ಮಾಡುವ ಉತ್ಸಾಹದಲ್ಲಿದ್ದಾರೆ.

ಈ ಸಾಧನೆಯನ್ನು ಜೊಕೋವಿಕ್‌ಗೆ ಮಾಡಲು ಸಾಧ್ಯವಾದರೆ ಅದು ಅವರ 20ನೇ ಗ್ರ್ಯಾಂಡ್‌ಸ್ಲ್ಯಾಮ್ ಆಗಿರಲಿದೆ. ಈ ಮೂಲಕ ಅತಿ ಹೆಚ್ಚು ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದಿರುವ ರೋಜರ್ ಫಡರರ್ ಹಾಗೂ ರಾಫೆಲ್ ನಡಾಲ್ ಸಾಧನೆಯನ್ನು ಸರಿಗಟ್ಟಿದಂತಾಗುತ್ತದೆ. ಫೆಡರರ್ ಹಾಗೂ ನಡಾಲ್ ತಲಾ 20 ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಗೆದ್ದು ದಾಖಲೆ ಬರೆದಿದ್ದಾರೆ.

ಇನ್ನು ಮತ್ತೊಂದೆಡೆ ಈ ಬಾರಿಯ ವಿಂಬಲ್ಡನ್ ಆರಂಭವಾಗಿರುವುದಕ್ಕೆ ಪ್ರೇಕ್ಷಕರು ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ. 2020ರ ವಿಂಬಲ್ಡನ್ ಕೊರೊನಾವೈರಸ್‌ನ ಕಾರಣದಿಂದಾಗಿ ರದ್ದಾಗಿತ್ತು. ಈ ಮೂಲಕ ಎರಡನೇ ಮಹಾಯುದ್ಧದ ನಂತರ ಮೊದಲ ಬಾರಿಗೆ ವಿಂಬಲ್ಡನ್ ರದ್ದುಗೊಂಡಿತ್ತು. ಈ ಬಾರಿ ಆರಂಭದಲ್ಲಿ ಪ್ರೇಕ್ಷಕರ ಸಂಖ್ಯೆಯಲ್ಲಿ ಕಡಿಮೆಗೊಳಿಸಲಾಗಿದೆ. ಆದರೆ ಫೈನಲ್‌ನಲ್ಲಿ ಪೂರ್ಣ ಪ್ರಮಾಣದ ಪ್ರೇಕ್ಷಕರಿಗೆ ಅವಕಾಶ ನೀಡಲು ಯೋಜನೆ ರೂಪಿಸಲಾಗುತ್ತಿದೆ.

Story first published: Monday, June 28, 2021, 22:13 [IST]
Other articles published on Jun 28, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+