ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಜೊಕೋವಿಕ್ ಮುಡಿಗೆ 6ನೇ ವಿಂಬಲ್ಡನ್ ಕಿರೀಟ: 20ನೇ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದು ದಾಖಲೆ

Wimbledon: Novak Djokovic wins his 6th Wimbledon title defeating Matteo Berrettini

ಟೆನ್ನಿಸ್ ಲೋಕದ ಸ್ಟಾರ್ ಆಟಗಾರ ನೊವಾಕ್ ಜೊಕೋವಿಕ್ ಮತ್ತೊಂದು ವಿಂಬಲ್ಡನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಆರನೇ ವಿಂಬಲ್ಡನ್ ಹಾಗೂ 20ನೇ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಯನ್ನು ತನ್ನದಾಗಿಸಿದ್ದಾರೆ. ಈ ಮೂಲಕ ಟೆನ್ನಿಸ್ ಲೋಕದ ದಿಗ್ಗಜ ಆಟಗಾರರಾದ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಸಾಧನೆಯನ್ನು ಸರಿಗಟ್ಟಿದ್ದಾರೆ.

ಇಟೆಲಿಯ ಮ್ಯಾಟಿಯೊ ಬೆರೆಟ್ಟಿನಿ ವಿರುದ್ಧ ನಡೆದ ಫೈನಲ್ ಹಣಾಹಣಿಯಲ್ಲಿ ನೊವಾಕ್ ಜೊಕೋವಿಕ್ ತೀವ್ರ ಪೈಪೋಟಿಯನ್ನು ಎದುರಿಸಿದರು. ಆದರೆ ನೊವಾಕ್ ಜೊಕೋವಿಕ್ ಅನುಭವದ ಮುಂದೆ ಮ್ಯಾಟಿಯೊ ಬೆರೆಟ್ಟಿನಿ ಸೋಲನ್ನು ಒಪ್ಪಿಕೊಳ್ಳಬೇಬೇಕಾಗಿತ್ತು. ಈ ಮೂಲಕ ನೊವಾಕ್ ಜೊಕೋವಿಕ್ ಟೆನ್ನಿಸ್ ಲೋಕದಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದ್ದಾರೆ.

ವಿಶ್ವ ನಂಬರ್ 1 ಟೆನ್ನಿಸ್ ಆಟಗಾರನಾಗಿರುವ ಸರ್ಬಿಯಾದ ನೊವಾಕ್ ಜೊಕೋವಿಕ್ 6-7(4), 6-4, 6-4, 6-4 ಅಂತರದಿಂದ ಇಟೆಲಿಯ ಮ್ಯಾಟಿಯೊ ಬೆರೆಟ್ಟಿನಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಜಿದ್ದಾಜಿದ್ದಿನ ಕಾದಾಟ 3 ಗಂಟೆ 23 ನಿಮಿಷಗಳ ಕಾಲ ಸಾಗಿತ್ತು.

ಈ ಗ್ರ್ಯಾಂಡ್ ಸ್ಲ್ಯಾಮ್ ಗೆಲುವಿನ ಮೂಲಕ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಅವರ 20 ಗ್ರ್ಯಾಂಡ್‌ಸ್ಲ್ಯಾಮ್ ದಾಖಲೆಯನ್ನು ನೊವಾಕ್ ಜೊಕೋವಿಕ್ ಸರಿಗಟ್ಟಿದ್ದಾರೆ. ಈಗ ಒಂದು ಸೀಸನ್‌ನ ಎಲ್ಲಾ ನಾಲ್ಕು ಗ್ರ್ಯಾಂಡ್‌ಸ್ಲ್ಯಾಮ್‌ಗಳನ್ನು ಗೆಲ್ಲುವ ಅವಕಾಶ ಜೊಕೋವಿಕ್ ಮುಂದಿದೆ. ಇದು ಸಾಧ್ಯವಾದರೆ ಈ ಸಾಧನೆ ಮಾಡಿದ ಟೆನ್ನಿಸ್‌ನ ಕೇವಲ ಮೂರನೇ ಆಟಗಾರ ಎನಿಸಲಿದ್ದಾರೆ ಜೊಕೋವಿಕ್. ಇದಕ್ಕೂ ಮುನ್ನ ಡಾನ್ ಬಡ್ಜ್ (1938) ಮತ್ತು ರಾಡ್ ಲಾವರ್ (1962 ಮತ್ತು 1969) ಈ ಸಾಧನೆಯನ್ನು ಮಾಡಿದ್ದರು.

ಇನ್ನು ಮ್ಯಾಟಿಯೊ ಬೆರೆಟ್ಟಿನಿ ವಿರುದ್ಧದ ಫೈನಲ್ ಪಂದ್ಯದ ಗೆಲುವಿನ ಮೂಲಕ ನೊವಾಕ್ ಜೊಕೋವಿಕ್ ವಿಂಬಲ್ಡನ್‌ನಲ್ಲಿ ತನ್ನ ಸತತ ಗೆಲುವಿನ ಓಟವನ್ನು 21ನೇ ಪಂದ್ಯಕ್ಕೆ ವಿಸ್ತರಿಸಿದ್ದಾರೆ. ಇದಕ್ಕೂ ಮುನ್ನ 2018 ಹಾಗೂ 2019ರ ವಿಂಬಲ್ಡನ್ ಕೂಡ ಗೆದ್ದು ಬೀಗಿದ್ದರು. ಕೊರೊನಾವೈರಸ್‌ನ ಕಾರಣದಿಂದಾಗಿ 2020ರ ವಿಂಬಲ್ಡನ್ ಟೂರ್ನಿ ನಡೆದಿರಲಿಲ್ಲ.

Story first published: Sunday, July 11, 2021, 22:54 [IST]
Other articles published on Jul 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X