ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2022: ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೈನಾ ನೆಹ್ವಾಲ್‌ಗೆ ಸೋಲು

Saina nehwal

ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್‌ ಟೋಕಿಯೋದಲ್ಲಿ ನಡೆಯುತ್ತಿರುವ ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಿಂದ ಹೊರಬಿದ್ದಿದ್ದರೆ. ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್‌ನ ಎದುರಾಳಿ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ವಿರುದ್ಧ ಸೋತು ವಿಶ್ವ ಚಾಂಪಿಯನ್‌ಶಿಪ್‌ನಿಂದ ಹೊರಬಿದ್ದರು.

32 ವರ್ಷ ವಯಸ್ಸಿನ ಸೈನಾ 17-21, 21-16, 13-21 ಗೇಮ್‌ಗಳಿಂದ ಸೋಲನ್ನಪ್ಪುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಈ ಮೂಲಕ ಥಾಯ್ ಆಟಗಾರ್ತಿ ಸೈನಾ ವಿರುದ್ಧ ಹೆಡ್ ಟು ಹೆಡ್ ರೆಕಾರ್ಡ್‌ನಲ್ಲಿ 5-3ರ ಅಂತರ ಕಾಯ್ದುಕೊಂಡಿದ್ದಾರೆ.

ಆದ್ರೆ ಎರಡು ಭಾರತೀಯ ಪುರುಷರ ಡಬಲ್ಸ್ ಜೋಡಿಯಾದ ಧ್ರುವ್ ಕಪಿಲಾ ಮತ್ತು ಎಂಆರ್ ಅರ್ಜುನ್ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ.

ಆರಂಭದಲ್ಲೇ ಒತ್ತಡಕ್ಕೆ ಒಳಗಾದ ಸೈನಾ ನೆಹ್ವಾಲ್

ಆರಂಭದಲ್ಲೇ ಒತ್ತಡಕ್ಕೆ ಒಳಗಾದ ಸೈನಾ ನೆಹ್ವಾಲ್

ಆರಂಭಿಕ ಗೇಮ್‌ನಲ್ಲಿ 11-3 ರಲ್ಲಿ ಅಂತರ ಕಾಯ್ದುಕೊಂಡ ಓಂಗ್‌ಬಮ್ರುಂಗ್‌ಫಾನ್ ವಿರುದ್ಧ ಸೈನಾ ತಕ್ಷಣವೇ ಒತ್ತಡಕ್ಕೆ ಒಳಗಾದರು. ಬುಸಾನನ್ ವಿರುದ್ಧ 17-21, 21-16, 13-21 ಅಂಕಗಳಿಂದ ಸೋತರು. ಮೊದಲ ಸೆಟ್ ಬಿಟ್ಟುಕೊಟ್ಟ ಅವರು ಎರಡನೇ ಸೆಟ್‌ನಲ್ಲಿ ಭರವಸೆಯೊಂದಿಗೆ ಮರಳಿದರು, ಆದರೆ ಮೂರನೇ ಸೆಟ್‌ನಲ್ಲಿ ಮತ್ತೆ ಸೋತು ಹೊರಬಿದ್ದರು. ಗಾಯಾಳು ಪಿವಿ ಸಿಂಧು ಅನುಪಸ್ಥಿತಿಯಲ್ಲಿ ಭಾರತ ಸೈನಾ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿತ್ತು, ಆದರೆ ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು.

Eng vs SA 2nd Test: ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ, ಪ್ಲೇಯಿಂಗ್ 11, LIVE SCORE

ಲಕ್ಷ್ಯ ಸೇನ್ ಅನ್ನು ಸೋಲಿಸಿದ ಎಚ್‌ಎಸ್ ಪ್ರಣಯ್

ಲಕ್ಷ್ಯ ಸೇನ್ ಅನ್ನು ಸೋಲಿಸಿದ ಎಚ್‌ಎಸ್ ಪ್ರಣಯ್

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಎಚ್‌ಎಸ್ ಪ್ರಣಯ್. ಪ್ರಿ ಕ್ವಾರ್ಟರ್ ನಲ್ಲಿ ಪ್ರಣಯ್ 17-21, 21-16, 21-17 ಅಂಕಗಳಿಂದ ಭಾರತದವರೇ ಆದ ಲಕ್ಷ್ಯ ಸೇನ್ ಅವರನ್ನು ಸೋಲಿಸಿ ಕ್ವಾರ್ಟರ್ ಪ್ರವೇಶಿಸಿದರು. ಮೊದಲ ಸೆಟ್ ಅನ್ನು ಕೈಬಿಟ್ಟ ನಂತರ, ಪ್ರಣಯ್ ಬಲವಾದ ಕಂಬ್ಯಾಕ್ ಮಾಡಿದರು. ಭಾರತದ ಉಳಿದೆಲ್ಲ ದೊಡ್ಡ ಆಟಗಾರರು ನಿರಾಸೆ ಮೂಡಿಸಿರುವ ಸಮಯದಲ್ಲಿ ಈಗ ಪ್ರಣಯ್ ಮೂಲಕ ಭರವಸೆ ಮೂಡಿದೆ ಎನ್ನಬಹುದು.

2010ರಲ್ಲಿ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದ ಪ್ರಣಯ್, 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಿಶ್ರ ವಿಭಾಗದಲ್ಲಿ ಚಿನ್ನ ಗೆದ್ದ ಭಾರತ ತಂಡದ ಭಾಗವಾಗಿದ್ದರು.

2016ರ ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿ ಹೇಗಿತ್ತು? ಒಂದು ಸಿಕ್ಸರ್ ಸಿಡಿಸದೆ ಭಾರತ ಪಂದ್ಯ ಗೆದ್ದಿದ್ದೇಗೆ?

ನಿರಾಸೆ ಮೂಡಿಸಿದ ಕಿಡಂಬಿ ಶ್ರೀಕಾಂತ್

ನಿರಾಸೆ ಮೂಡಿಸಿದ ಕಿಡಂಬಿ ಶ್ರೀಕಾಂತ್

ಕಳೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಸಿಂಗಲ್ಸ್ ಬೆಳ್ಳಿ ಪದಕ ಗೆದ್ದಿದ್ದ ಕಿಡಂಬಿ ಶ್ರೀಕಾಂತ್ ಕೂಡ ಈ ಬಾರಿ ನಿರಾಸೆಯಿಂದ ಮರಳಬೇಕಾಯಿತು. ಶ್ರೀಕಾಂತ್ 32ನೇ ಶ್ರೇಯಾಂಕದ ಸೊ ಜುನ್ ಪೆಂಗ್ ವಿರುದ್ಧ 18-21, 17-21 ನೇರ ಸ್ಕೋರ್‌ನಿಂದ ಸೋತರು. ಅದೇ ಸಮಯದಲ್ಲಿ, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಡೆನ್ಮಾರ್ಕ್ ಅನ್ನು ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದರು.

Story first published: Thursday, August 25, 2022, 17:08 [IST]
Other articles published on Aug 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X