CWG 2018 : ಬಾಡ್ಮಿಂಟನ್ : ಸೈನಾಗೆ ಚಿನ್ನ, ಸಿಂಧುಗೆ ಬೆಳ್ಳಿ

Posted By:
CWG 2018: Badminton: Its Gold for Saina and Silver for Sindhu in womens final

ಗೋಲ್ಡ್ ಕೋಸ್ಟ್ , ಏಪ್ರಿಲ್ 15 : ಕಾಮನ್ ವೆಲ್ತ್ ಕ್ರೀಡಾಕೂಟ 2018ರ ಬಾಡ್ಮಿಂಟನ್ ನಲ್ಲಿ ಭಾರತದ ಕೀರ್ತಿ ಪತಾಕೆ ಎತ್ತರಕ್ಕೆ ಹಾರಿದೆ. ಬಾಡ್ಮಿಂಟನ್ ತಾರೆ, ಹೈದರಾಬಾದಿನ ಅನರ್ಘ್ಯ ಕ್ರೀಡಾರತ್ನಗಳಾದ ಸೈನಾ ನೆಹ್ವಾಲ್ ಹಾಗೂ ಪಿವಿ ಸಿಂಧು ಅವರು ಕಾಮನ್ ವೆಲ್ತ್ ಗೇಮ್ಸ್ ನ ಬಾಡ್ಮಿಂಟನ್ ಮಹಿಳಾ ಬಾಡ್ಮಿಂಟನ್ ನಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ತಂದುಕೊಟ್ಟಿದ್ದಾರೆ.

ಸೈನಾ ಹಾಗೂ ಸಿಂಧು ನಡುವಿನ ಅಂತಿಮ ಹಣಾಹಣಿಯನ್ನು ಕಂಡು ಕ್ರೀಡಾಭಿಮಾನಿಗಳು ಹರ್ಷೋದ್ಘಾರ ಮಾಡಿ,ಸಂತಸ ಪಟ್ಟಿದ್ದಾರೆ. ಭಾನುವಾರ ಮುಂಜಾನೆ ನಡೆದ ಫೈನಲ್ ಪಂದ್ಯದಲ್ಲಿ ಸೈನಾ ಅವರು 21-18, 23-21ರಲ್ಲಿ ಪಿವಿ ಸಿಂಧು ಅವರನ್ನು ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಇದು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಸೈನಾ ಅವರಿಗೆ ವೈಯಕ್ತಿಕವಾಗಿ ಎರಡನೇ ಪದಕವಾಗಿದೆ.

Story first published: Sunday, April 15, 2018, 7:31 [IST]
Other articles published on Apr 15, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ