ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

2020ರಲ್ಲಿ ಭಾರತೀಯ ಬ್ಯಾಡ್ಮಿಂಟನ್‌ನಲ್ಲಿನ ಏಳು-ಬೀಳುಗಳು

Flashback 2020: Forgettable year for Indian shuttlers in a COVID-19-marred 2020

ನವದೆಹಲಿ: 2020ರಲ್ಲಿ ಕೊರೊನಾ ವೈರಸ್ ಭೀತಿಗೆ ಸಮಸ್ಯೆಗೀಡಾದ ಕ್ರೀಡಾ ಸ್ಪರ್ಧೆಗಳಲ್ಲಿ ಬ್ಯಾಡ್ಮಿಂಟನ್ ಕೂಡ ಒಂದು. ಮಾರಕ ಸೋಂಕಿನ ಭೀತಿಗೆ 2020ರ ಬಹುತೇಕ ಬ್ಯಾಡ್ಮಿಂಟನ್ ಟೂರ್ನಿಗಳನ್ನು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ರದ್ದು ಮಾಡಿತ್ತು. ನಡೆದ ಕೆಲ ಟೂರ್ನಿಗಳಲ್ಲಿ ಪ್ರಮುಖ ಕ್ರೀಡಾಪಟುಗಳೇ ಪಾಲ್ಗೊಳ್ಳಲಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ 2020ರಲ್ಲಿ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟ ಕೂಡ 2021ಕ್ಕೆ ಮುಂದೂಡಲ್ಪಟ್ಟಿತ್ತು.

ಭಾರತದಿಂದಲೇ ಆಡಿ, 520 ಮಿ ಡಾಲರ್ ಪವರ್‌ಬಾಲ್ ಜಾಕ್‌ಪಾಟ್‌ ಗೆಲ್ಲಿಭಾರತದಿಂದಲೇ ಆಡಿ, 520 ಮಿ ಡಾಲರ್ ಪವರ್‌ಬಾಲ್ ಜಾಕ್‌ಪಾಟ್‌ ಗೆಲ್ಲಿ

ಇತ್ತ ಭಾರತೀಯ ಬ್ಯಾಡ್ಮಿಂಟನ್ ಆಟಗಾರರು ಕೂಡ ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದೆ ನಿರಾಶೆ ಮೂಡಿಸಿದರು. 2020ರಲ್ಲಿ ಬ್ಯಾಡ್ಮಿಂಟನ್ ಕ್ಲೇತ್ರದಲ್ಲಿನ ಏಳು-ಬೀಳುಗಳ ಇಣುಕು ನೋಟ ಇಲ್ಲಿದೆ ನೋಡಿ.

ಉತ್ತಮ ಆರಂಭ ಸಿಗಲೇಯಿಲ್ಲ

ಉತ್ತಮ ಆರಂಭ ಸಿಗಲೇಯಿಲ್ಲ

2020ರಲ್ಲಿ ನಡೆದ ಮೊದಲ ಬ್ಯಾಡ್ಮಿಂಟನ್ ಪ್ರಮುಖ ಟೂರ್ನಿಯೆಂದರೆ ಮಲೇಷ್ಯಾ ಓಪನ್. ಇದರಲ್ಲಿ ಭಾರತೀಯ ಪುರುಷ ಆಟಗಾರರಲ್ಲಿ ಯಾವುದೇ ಆಟಗಾರ ದ್ವಿತೀಯ ಸುತ್ತಿಗೂ ಪ್ರವೇಶಿಸಲಿಲ್ಲ. ಇತ್ತ ಮಹಿಳಾ ಸಿಂಗಲ್ಸ್‌ನಲ್ಲಿ ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್ ಪಿವಿ ಸಿಂಧು ಕೂಡ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವ ನಂ.1 ಆಟಗಾರ್ತಿ ಥೈ ಸು ಯಿಂಗ್ ವಿರುದ್ಧ ಸೋತು ನಿರ್ಗಮಿಸಿದ್ದರು.

ಇಂಡೋನೇಶ್ಯಾದಲ್ಲೂ ಕಳಪೆ ಪ್ರದರ್ಶನ

ಇಂಡೋನೇಶ್ಯಾದಲ್ಲೂ ಕಳಪೆ ಪ್ರದರ್ಶನ

ಮಲೇಷ್ಯಾ ಓಪನ್‌ ಬಳಿಕ ನಡೆದ ಇಂಡೋನೇಶ್ಯಾ ಮತ್ತು ಥೈಲ್ಯಾಂಡ್ ಓಪನ್ ಟೂರ್ನಿಯಲ್ಲೂ ಭಾರತೀಯರ ಕಳಪೆ ಪ್ರದರ್ಶನ ಮುಂದುವರೆದಿತ್ತು. ಸೈನಾ ನೆಹ್ವಾಲ್ ಮೊದಲನೇ ಸುತ್ತಿನಲ್ಲೇ ಹೊರ ಬಿದ್ದರೆ, ಪಿವಿ ಸಿಂಧು ದ್ವಿತೀಯ ಸುತ್ತಿನಲ್ಲಿ ಹೊರ ಬಿದ್ದಿದ್ದರು. ಅದಾಗಿ ಬಾರ್ಸಿಲೋನಾ ಸ್ಪೇನ್ ಮಾಸ್ಟರ್ಸ್‌ ಟೂರ್ನಿಯಲ್ಲಿ ಭಾರತದ ಅಜಯ್ ಜಯರಾಮ್ ಸೆಮಿಫೈನಲ್‌ವರೆಗೆ ಪ್ರವೇಶಿಸಿದ್ದೇ ದೊಡ್ಡದು.

ರ್‍ಯಾಂಕಿಂಗ್‌ನಲ್ಲೂ ಹಿನ್ನಡೆ

ರ್‍ಯಾಂಕಿಂಗ್‌ನಲ್ಲೂ ಹಿನ್ನಡೆ

ಭಾರತೀಯ ಬ್ಯಾಡ್ಮಿಂಟನ್ ಆಟಗಾರರು 2020ರಲ್ಲಿ ರ್‍ಯಾಂಕಿಂಗ್‌ನಲ್ಲೂ ಹಿನ್ನಡೆ ಕಂಡಿದ್ದರು. ಬಿ ಸಾಯ್ ಪ್ರಣೀತ್, ಕಿದಂಬಿ ಶ್ರೀಕಾಂತ್, ಪಾರುಪಳ್ಳಿ ಕಶ್ಯಪ್ ಇವರಲ್ಲ 10 ಸ್ಥಾನಕ್ಕಿಂತಲೂ ಕೆಳ ಕುಸಿದಿದ್ದರು. ಪಿವಿ ಸಿಂಧು ಕೂಡ 7ನೇ ಶ್ರೇಯಾಂಕಕ್ಕೆ ಕುಸಿದಿದ್ದರು. ಇನ್ನು ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯ್‌ರಾಜ್ ಮತ್ತು ಚಿರಾಜ್‌ ಜೋಡಿ ಡಬಲ್ಸ್‌ನಲ್ಲಿ 10ನೇ ರ್‍ಯಾಂಕ್‌ಗೆ ಬಂದಿದ್ದೇ ದೊಡ್ಡ ಸಾಧನೆ.

Story first published: Saturday, December 12, 2020, 20:12 [IST]
Other articles published on Dec 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X