ಅಪ್ಪನ ವಿಷಯಕ್ಕೆ ಸೈನಾ ನೆಹ್ವಾಲ್ ಫುಲ್ ಗರಂ

Posted By:
Saina Nehwal angry tweets on Commonwealth organizers

ಕಾಮನ್‌ವೆಲ್ತ್‌ಗೆ ತೆರಳುತ್ತಿರುವ ಭಾರತೀಯರ ಪಟ್ಟಿಯಿಂದ ಸೈನಾ ನೆಹ್ವಾಲ್ ಅವರ ತಂದೆಯ ಹೆಸರನ್ನು ಕೈಬಿಟ್ಟಿರುವುದು ಬ್ಯಾಡ್‌ಮಿಂಟನ್ ಆಟಗಾರ್ತಿ ಸೈನಾ ಅವರನ್ನು ಕೆರಳಿಸಿದೆ. ಈ ಬಗ್ಗೆ ಅವರು ಟ್ವಿಟ್ಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೈನಾ ನೆಹ್ವಾಲ್ ಅವರು ತಮ್ಮ ತಂದೆ ಹರ್ವೀರ್‌ ಅವರನ್ನು ತಮ್ಮೊಂದಿಗೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಗೇಮ್‌ಗೆ ಕರೆದುಕೊಂಡು ಹೋಗಿದ್ದರು. ಭಾರತದ ಅಧಿಕಾರಿಗಳ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಾಗಿತ್ತು, ಆದರೆ ಕ್ರೀಡಾ ಗ್ರಾಮಕ್ಕೆ ತೆರಳಿದಾಗ ಅವರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು.

ಇದಕ್ಕೆ ಭಾರಿ ಆಕ್ರೋಶ ವ್ಯಕ್ತಪಡಿಸಿರುವ ಸೈನಾ ನೆಹ್ವಾಲ್ ಅವರು 'ನನ್ನ ತಂದೆಯ ಬೆಂಬಲ ನನಗೆ ಅತ್ಯಂತ ಅವಶ್ಯಕ ಹಾಗಾಗಿ ನಾನು ಅವರನ್ನು ನನ್ನ ಎಲ್ಲಾ ಪಂದ್ಯಗಳಿಗೆ ಜೊತೆಗೆ ಕರೆದೊಯ್ಯುತ್ತೇನೆ, ಈಗ ಇಂತಹಾ ಪ್ರಮುಖ ಪಂದ್ಯದ ವೇಳೆ ಅವರು ನನ್ನೊಂದಿಗೆ ಇರಲು ಸಾಧ್ಯವಿಲ್ಲ, ನನ್ನನ್ನು ಭೇಟಿ ಸಹ ಆಗಲಾರದ ಸ್ಥಿತಿ ಉಂಟಾಗಿದೆ' ಎಂದು ಟ್ವಿಟರ್‌ನಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸೈನಾ ನೆಹ್ವಾಲ್ ಹಾಗೂ ಪಿವಿ ಸಿಂಧು ಅವರು ತಮ್ಮ ಪೋಷಕರನ್ನು ತಮ್ಮ ಎಲ್ಲಾ ಪಂದ್ಯಗಳಿಗೂ ಜೊತೆಗೆ ಕರೆದೊಯ್ಯುವ ಪರಿಪಾಠ ಇಟ್ಟುಕೊಂಡಿದ್ದಾರೆ. ಇದರ ಸಂಪೂರ್ಣ ವೆಚ್ಚವನ್ನು ಆಟಗಾರ್ತಿಯರೇ ಭರಿಸುತ್ತಾರೆ.

Story first published: Tuesday, April 3, 2018, 17:54 [IST]
Other articles published on Apr 3, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ