ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಇಂಡೊನೇಷ್ಯಾದ ಪ್ರೆಸಿಡೆಂಟ್‌ ಕಪ್‌ನಲ್ಲಿ ಮೇರಿ ಕೋಮ್‌ ಗೋಲ್ಡನ್‌ ಪಂಚ್‌

 Mary Kom wins gold

ಹೊಸದಿಲ್ಲಿ, ಜುಲೈ 28: ಆರು ಬಾರಿಯ ವಿಶ್ವ ಚಾಂಪಿಯನ್‌ ಎಂ.ಸಿ ಮೇರಿ ಕೋಮ್‌, ಇಂಡೊನೇಷ್ಯಾದ ಲಬುವಾನ್‌ ಬಾಜೊದಲ್ಲಿ ನಡೆದ 23ನೇ ಪ್ರೆಸಿಡೆಂಟ್‌ ಕಪ್‌ ಬಾಕ್ಸಿಂಗ್‌ ಟೂರ್ನಿಯ 51 ಕೆಜಿ ವಿಭಾಗದಲ್ಲಿ ನಿರಾಯಾಸವಾಗಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಏಕಮುಖವಾಗಿ ಸಾಗಿದ ಫೈನಲ್‌ ಪಂದ್ಯದಲ್ಲಿ ಭಾರತದ ಅಗ್ರಮಾನ್ಯ ಬಾಕ್ಸರ್‌ 5-0 ಅಂಕಗಳಿಂದ ಆಸ್ಟ್ರೇಲಿಯಾದ ಬಾಕ್ಸರ್‌ ಏಪ್ರಿಲ್‌ ಫ್ರಾಂಕ್ಸ್‌ ಅವರನ್ನು ಸುಲಭವಾಗಿ ಹೊಡೆದುರುಳಿಸಿದರು. ಈ ಮೂಲಕ ಮುಂಬರುವ ವಿಶ್ವ ಚಾಂಪಿಯನ್‌ಷಿಪ್‌ ಮತ್ತು 2020ರ ಟೋಕಿಯೋ ಒಲಿಂಪಿಕ್ಸ್‌ ಕಡೆಗೆ ಕೋಮ್‌ ಭರ್ಜರಿ ಸಿದ್ಧತೆ ನಡೆಸಿದ್ದಾರೆ.

ವಿಂಡೀಸ್‌ ವಿರುದ್ಧದ ಟಿ20 ಸರಣಿಗೆ ಟೀಮ್‌ ಇಂಡಿಯಾದ ಸಂಭಾವ್ಯ 11ವಿಂಡೀಸ್‌ ವಿರುದ್ಧದ ಟಿ20 ಸರಣಿಗೆ ಟೀಮ್‌ ಇಂಡಿಯಾದ ಸಂಭಾವ್ಯ 11

"ನನಗೆ ಮತ್ತು ನನ್ನ ದೇಶಕ್ಕೆ ಇಂಡೊನೇಷ್ಯಾದ ಪ್ರೆಸಿಡೆಂಟ್‌ ಕಪ್‌ ಟೂರ್ನಿಯಲ್ಲಿ ಚಿನ್ನದ ಪದ. ಗೆಲುವೆಂದರೆ ಇನ್ನು ಸಾಗಬೇಕಾಗಿರುವ ದಾರಿ ಬಹಳ ಇದೆ ಎಂದರ್ಥ. ಕಠಿಣ ಪರಿಶ್ರಮದಿಂದವೇ ಇದು ಸಾಧ್ಯ," ಎಂದು ಮೇರಿ ಕೋಮ್‌ ಟ್ವೀಟ್‌ ಮಾಡುವ ಮೂಲಕ ಚಿನ್ನ ಗೆದ್ದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಇದೇ ವೇಳೆ ತಮ್ಮ ಈ ಸಾಧನೆಯ ಹಿಂದಿರುವ ಕೈಗಳಿಗೂ ಕೋಮ್‌ ಧನ್ಯವಾದ ತಿಳಿಸಿದ್ದಾರೆ. "ನನ್ನೆಲ್ಲಾ ತರಬೇತಿ ಸಿಬ್ಬಂದಿ ಮತ್ತು ಕೋಚ್‌ಗಳಿಗೆ ಧನ್ಯವಾದ. ಬಾಕ್ಇಸಂಗ್‌ ಫೆಡರೇಷನ್‌ ಆಫ್‌ ಇಂಡಿಯಾ ಮತ್ತು ಭಾರತೀ ಕ್ರೀಡಾ ಇಲಾಖೆ ಮತ್ತು ಕ್ರೀಡಾ ಸಚಿವ ಕಿರನ್‌ ರಿಜಿಜು ಅವರಿಗೂ ಧನ್ಯವಾದಗಳು," ಎಂದು ಕೋಮ್‌ ತಮ್ಮ ಟ್ವೀಟ್‌ನಲ್ಲಿ ವಿವರಿಸಿದ್ದಾರೆ.

ಎರಡು ತಿಂಗಳ ಹಿಂದಷ್ಟೇ ನಡೆದ ಇಂಡಿಯಾ ಓಪನ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಚಿನ್ನ ಗೆದಿದ್ದ ಕೋಮ್‌ ಇದೀಗ ಸತತ 2ನೇ ಸ್ವರ್ಣ ಮುಡಿಗೇರಿಸಿಕೊಂಡಿದ್ದಾರೆ. ಇದೀಗ ಸೆಪ್ಟೆಂಬರ್‌ 7ರಿಂದ 21ರವರೆಗೆ ರಷ್ಯಾದ ಯೆಕಟ್ರಿನ್ಬರ್ಗ್‌ನಲ್ಲಿ ನಡೆಯಲಿರುವ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಇದೇ ಸ್ಥಿರತೆ ಕಾಯ್ದುಕೊಳ್ಳುವ ಮೂಲಕ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದನ್ನು ಕೋಮ್‌ ಎದುರು ನೋಡುತ್ತಿದ್ದಾರೆ.

ಕಳೆದ ವರ್ಷ ಹೊಸದಿಲ್ಲಿಯಲ್ಲಿ ನಡೆದ ಬಾಕ್ಸಿಂಗ್‌ ವಿಶ್ವ ಚಾಂಪಿಷನ್‌ಷಿಪ್‌ನಲ್ಲಿ ಮೇರಿ ಕೋಮ್‌ ವಿಶ್ವ ದಾಖಲೆಯ 6ನೇ ಚಿನ್ನದ ಬದಲ ಗೆದ್ದು ನೂತನ ಇತಿಹಾಸ ಬರೆದಿದ್ದರು. ಇದೀಗ ಈ ದಾಖಲೆಯನ್ನು ಮತ್ತಷ್ಟು ವಿಸ್ತರಿಸುವ ಗುರಿ ಹೊಂದಿದ್ದಾರೆ.

Story first published: Sunday, July 28, 2019, 20:13 [IST]
Other articles published on Jul 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X