ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್ ತೆಂಡೂಲ್ಕರ್ 30 ವರ್ಷಗಳ ದಾಖಲೆ ಮುರಿದ 15ರ ಹರೆಯದ ಶೆಫಾಲಿ!

15-year-old Shafali Verma breaks Sachin Tendulkar’s 30-year-old record

ಸೇಂಟ್ ಲೂಸಿಯಾ, ನವೆಂಬರ್ 10: ಸೇಂಟ್ ಲೂಸಿಯಾದ ಡ್ಯಾರೆನ್ ಸ್ಯಮಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತದ ಮಹಿಳೆಯರು ಮತ್ತು ವೆಸ್ಟ್ ಇಂಡೀಸ್ ಮಹಿಳೆಯರ ನಡುವಿನ ಮೊದಲನೇ ಟಿ20 ಪಂದ್ಯದಲ್ಲಿ ಭಾರತದ ಆಟಗಾರ್ತಿ ಶೆಫಾಲಿ ವರ್ಮಾ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

ಮಿಂಚು ಹರಿಸಿದ ಚಹಾರ್, ಬಾಂಗ್ಲಾ ಟೈಗರ್ಸ್ ಬೇಟೆಯಾಡಿದ ಬ್ಲೂ ಬಾಯ್ಸ್!ಮಿಂಚು ಹರಿಸಿದ ಚಹಾರ್, ಬಾಂಗ್ಲಾ ಟೈಗರ್ಸ್ ಬೇಟೆಯಾಡಿದ ಬ್ಲೂ ಬಾಯ್ಸ್!

ಆರಂಭಿಕರಾಗಿ ಇಳಿದು ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ ಶೆಫಾಲಿ, ಭಾರತದ ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ 30 ವರ್ಷಗಳ ಹಿಂದಿನ ದಾಖಲೆಯೊಂದನ್ನು ಮುರಿದಿದ್ದಾರೆ.

ಅಫ್ಘಾನಿಸ್ತಾನ ಸೋಲಿಸಿ 5 ವರ್ಷಗಳ ಕೆಟ್ಟ ದಾಖಲೆ ಕೊನೆಗೊಳಿಸಿದ ವಿಂಡೀಸ್!ಅಫ್ಘಾನಿಸ್ತಾನ ಸೋಲಿಸಿ 5 ವರ್ಷಗಳ ಕೆಟ್ಟ ದಾಖಲೆ ಕೊನೆಗೊಳಿಸಿದ ವಿಂಡೀಸ್!

ಶೆಫಾಲಿ ಬ್ಯಾಟಿಂಗ್ ನೆರವಿನಿಂದ ಭಾರತದ ಮಹಿಳಾ ತಂಡ ಈ ಪಂದ್ಯದಲ್ಲಿ 84 ರನ್ ಗೆಲುವನ್ನಾಚರಿಸಿದೆ.

ವಿಶೇಷ ದಾಖಲೆ

ವಿಶೇಷ ದಾಖಲೆ

ಸೇಂಟ್‌ ಲೂಸಿಯಾ ಪಂದ್ಯದಲ್ಲಿ ಶೆಫಾಲಿ ವರ್ಮಾ 49 ಎಸೆತಗಳಿಗೆ 73 ರನ್ ಸಿಡಿಸಿದರು. ಅಂತಾರಾಷ್ಟ್ರೀಯ ಸ್ಫೋಟಕ ಅರ್ಧ ಶತಕ ಬಾರಿಸಿರುವ ಶೆಫಾಲಿಗೀಗ 15 ವರ್ಷ, 285 ದಿನ ವಯಸ್ಸು. ಹೀಗಾಗಿ ಭಾರತ ಪರ ಅಂತಾರಾಷ್ಟ್ರೀಯ ಅರ್ಧ ಶತಕ ಬಾರಿಸಿದ ಅತೀ ಕಿರಿಯ ಆಟಗಾರ್ತಿಯಾಗಿ ಶೆಫಾಲಿ ದಾಖಲೆ ನಿರ್ಮಿಸಿದ್ದಾರೆ.

ಭಾರತ ಭರ್ಜರಿ ರನ್

ಭಾರತ ಭರ್ಜರಿ ರನ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದ ವನಿತಾ ತಂಡ, ಶೆಫಾಲಿ 73, ಸ್ಮೃತಿ ಮಂಧಾನ 67 (46), ಹರ್ಮನ್‌ಪ್ರೀತ್‌ ಕೌರ್ 21, ವೇದಾ ಕೃಷ್ಣಮೂರ್ತಿ 15 ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 185 ರನ್ ಮಾಡಿತು.

30 ವರ್ಷಗಳ ದಾಖಲೆ ಪತನ

30 ವರ್ಷಗಳ ದಾಖಲೆ ಪತನ

ಭಾರತ ಪರ ಅಂತಾರಾಷ್ಟ್ರೀಯ ಅರ್ಧ ಶತಕ ಬಾರಿಸಿದ ಅತೀ ಕಿರಿಯ ಆಟಗಾರ ಎಂಬ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ತೆಂಡೂಲ್ಕರ್, 1989ರಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅರ್ಧ ಶತಕ ಬಾರಿಸಿದ್ದರು. ಅವರಿಗಾಗ 16 ವರ್ಷ, 214 ದಿನ ವಯಸ್ಸಾಗಿತ್ತು.

ಶೆಫಾಲಿ ಪಂದ್ಯಶ್ರೇಷ್ಠೆ

ಶೆಫಾಲಿ ಪಂದ್ಯಶ್ರೇಷ್ಠೆ

ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ವನಿತಾ ತಂಡ, ಹೇಲಿ ಮ್ಯಾಥ್ಯೂಸ್ 13, ಶೆಮೈನ್ ಕ್ಯಾಂಪ್ಬೆಲ್ಲೆ 33, ಚೆಡಿಯನ್ ನೇಷನ್ 10, ಕಿಶೋನಾ ನೈಟ್ 12, ಸ್ಟೇಸಿ-ಆನ್ ಕಿಂಗ್ 13 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 101 ರನ್ ಪೇರಿಸಲಷ್ಟೇ ಶಕ್ತವಾಯ್ತು. ಶೆಫಾಲಿ ಪಂದ್ಯಶ್ರೇಷ್ಠೆ ಎನಿಸಿದರು.

Story first published: Sunday, November 10, 2019, 23:32 [IST]
Other articles published on Nov 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X