ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧವನ್, ವಿರಾಟ್ ಕೊಹ್ಲಿ ಶತಕ ಭಾರಿ ಮುನ್ನಡೆಯತ್ತ ಭಾರತ

By Mahesh

ಗಾಲೆ (ಶ್ರೀಲಂಕಾ), ಆಗಸ್ಟ್ 13: ಅತಿಥೇಯ ಶ್ರೀಲಂಕಾ ತಂಡದ ವಿರುದ್ಧ ಪ್ರವಾಸಿ ಭಾರತ ತಂಡ ತನ್ನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರಿ ಮುನ್ನಡೆ ಗಳಿಸುವ ಕುರುಹು ತೋರಿದೆ. ಎರಡನೇ ದಿನವಾದ ಗುರುವಾರ ನಾಯಕ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಅವರು ಭರ್ಜರಿ ಶತಕ ಬಾರಿಸಿ ಭಾರತಕ್ಕೆ ಭರ್ಜರಿ ಮುನ್ನಡೆ ಗಳಿಸಿಕೊಟ್ಟಿದ್ದಾರೆ.

ಎರಡನೇ ದಿನದ ಅಂತ್ಯಕೆಕ್ ಟೀಂ ಇಂಡಿಯಾಕ್ಕೆ 192 ರನ್ ಗಳ ಲೀಡ್ ಸಿಕ್ಕಿದೆ. ದಿನದ ಅಂತ್ಯಕ್ಕೆ ಶ್ರೀಲಂಕಾ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 5 ರನ್ನಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟ ಪರಿಸ್ಥಿತಿಯಲ್ಲಿದೆ.

ಮೊದಲ ದಿನದ ವರದಿಮೊದಲ ದಿನದ ವರದಿ

ಎರಡನೇ ದಿನದ ಅಂತ್ಯಕೆಕ್ ಟೀಂ ಇಂಡಿಯಾಕ್ಕೆ 192 ರನ್ ಗಳ ಲೀಡ್ ಸಿಕ್ಕಿದೆ. ದಿನದ ಅಂತ್ಯಕ್ಕೆ ಶ್ರೀಲಂಕಾ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 5 ರನ್ನಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟ ಪರಿಸ್ಥಿತಿಯಲ್ಲಿದೆ. ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 117.4 ಓವರ್ ನಲ್ಲಿ 375 ರನ್ ಗಳಿಸಿತು. ಕೊಹ್ಲಿ 103 ಹಾಗೂ ಧವನ್ 134 ರನ್ ಅಲ್ಲದೆ ವೃದ್ಧಿಮಾನ್ ಸಹಾ 60 ರನ್ ಗಳಿಸಿದ್ದು ಇನ್ನಿಂಗ್ಸ್ ಮುಖ್ಯಾಂಶ.

183 ರನ್ ಗಳ ಮೊತ್ತಕ್ಕೆ ಶ್ರೀಲಂಕಾ ಆಲೌಟ್ ಆದ ನಂತರ ಇನ್ನಿಂಗ್ಸ್ ಆರಂಭಿಸಿದ ಭಾರತ ದಿನದ ಅಂತ್ಯಕ್ಕೆ 128//2 ಸ್ಕೋರ್ ಮಾಡಿದೆ. ಶಿಖರ್ ಧವನ್ 53ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ನಾಯಕ ವಿರಾಟ್ ಕೊಹ್ಲಿ 45ರನ್ ಗಳಿಸಿದ್ದರು.

ಎರಡನೇ ದಿನದ ಭೋಜನ ವಿರಾಮದ ವೇಳೆಗೆ ಶಿಖರ್ ಧವನ್ 110 ರನ್ (198 ಎಸೆತ, 11 ಬೌಂಡರಿ) ಗಳಿಸಿ ಆಡುತ್ತಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಅವರು 86 ರನ್ (156 ಎಸೆತ, 9 ಬೌಂಡರಿ) ಗಳಿಸಿ ಕ್ರೀಸ್ ನಲ್ಲಿದ್ದರು. ನಂತರ ವಿರಾಟ್ ಕೊಹ್ಲಿ ಅವರು ಕೂಡಾ ನೂರು ರನ್ ಗಡಿ ದಾಟಿದರು. ಇದು ಅವರ 11ನೇ ಶತಕವಾಗಿದೆ.[ಎಡಚರ ದಿನದಂದೇ ಶತಕ ಬಾರಿಸಿದ ಧವನ್]

Dhawan hits century

191 ಎಸೆತಗಳಲ್ಲಿ 11 ಬೌಂಡರಿಯಿದ್ದ 103ರನ್ ಗಳಿಸಿ ಕೊಹ್ಲಿ ಅವರು ಕೌಶಲ್ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು. ನಂತರ ಬಂದ ಅಜಿಂಕ್ಯ ರಹಾನೆ ಅವರು ಶೂನ್ಯ ಸುತ್ತಿ ಪೆವಿಲಿಯನ್ ಗೆ ಮರಳಿದರು. ಶ್ರೀಲಂಕಾ ಪರ ಕೌಶಲ್ ಸತತ ಎರಡು ವಿಕೆಟ್ ಕಿತ್ತರೆ, ಮ್ಯಾಥ್ಯೂಸ್ ಹಾಗೂ ಪ್ರಸಾದ್ ತಲಾ 1 ವಿಕೆಟ್ ಪಡೆದುಕೊಂಡಿದ್ದಾರೆ.

ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನವಾದ ಗುರುವಾರದಂದು ಶಿಖರ್ ಧವನ್ ಅವರು ತಮ್ಮ ವೃತ್ತಿ ಬದುಕಿನ 4ನೇ ಶತಕ ದಾಖಲಿಸಿ ಆಡುತ್ತಿದ್ದಾರೆ.

ಶ್ರೀಲಂಕಾ ವಿರುದ್ಧ 1993ರಿಂದ ಇಲ್ಲಿ ತನಕ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. 2010ರಲ್ಲಿ ಲಂಕಾ ಪ್ರವಾಸ ಕೈಗೊಂಡಿದ್ದ ಎಂಎಸ್ ಧೋನಿ ಅವರ ತಂಡ ಸರಣಿಯನ್ನು 1-1 ರಲ್ಲಿ ಸಮನಾಗಿಸಿಕೊಂಡಿತ್ತು. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X