ಟಿ20I ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ನೀಡಿದ 4 ಬೌಲರ್‌ಗಳು ಇವರು: 2ನೇ ಸ್ಥಾನದಲ್ಲಿ ಭಾರತೀಯ!

ಪ್ರಸ್ತುತ ಕ್ರಿಕೆಟ್ ಜಗತ್ತಿನಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿರುವ ಕ್ರಿಕೆಟ್ ಮಾದರಿಯೆಂದರೆ ಅದು ಟಿ20 ಕ್ರಿಕೆಟ್. ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ಹೆಚ್ಚಿನ ಪ್ರಮಾಣದ ಅಭಿಮಾನಿಗಳು ಈ ಮಾದರಿಗಿದ್ದಾರೆ. ಬ್ಯಾಟರ್‌ಗಳು ಪ್ರತಿ ಎಸೆತದಲ್ಲಿಯೂ ಸಿಕ್ಸರ್ ಬೌಂಡರಿ ಮೂಲಕ ರನ್ ಗಳಿಸುವ ಪ್ರಯತ್ನ ನಡೆಸಿದರೆ ಬ್ಯಾಟರ್‌ಗಳನ್ನು ರನ್ ಬಾರಿಸದಂತೆ ತಡೆಯವ ಸವಾಲು ಬೌಲರ್‌ಗಳದ್ದಾಗಿರುತ್ತದೆ. ಅದರಲ್ಲೂ ಸಿಕ್ಸರ್‌ಗಳನ್ನು ಹೆಚ್ಚಾಗಿ ನೀಡದ ಬೌಲರ್‌ಗಳು ಇಲ್ಲಿ ಹೆಚ್ಚಿನ ಯಶಸ್ಸು ಸಾಧಿಸುತ್ತಾರೆ.

ಟಿ20 ಕ್ರಿಕೆಟ್‌ನಲ್ಲಿ ಸಿಕ್ಸರ್‌ಗಳನ್ನು ನೀಡದಂತೆ ಬೌಲಿಂಗ್ ಮಾಡುವುದು ಬಲು ದೊಡ್ಡ ಸವಾಲು. ತಮ್ಮ ನಾಲ್ಕು ಓವರ್‌ಗಳ 24 ಎಸೆತಗಳಲ್ಲಿ ಮೊದಲ 20 ಎಸೆತಗಳಲ್ಲಿ ಸಿಕ್ಸರ್ ನೀಡದೆ ನಿಯಂತ್ರಿಸಿ ಅಂತಿಮ ನಾಲ್ಕು ಎಸೆತಗಳಲ್ಲಿ ಸಿಕ್ಸರ್ ನೀಡಿದರೂ ಪಂದ್ಯದ ಸ್ಥಿತಿ ಸಂಪೂರ್ಣ ಬದಲಾಗಿಬಿಡುತ್ತದೆ.

ಮುಂದಿನ IPL ಸೀಸನ್‌ನಲ್ಲಿ ಧೋನಿ ಬದಲು CSK ತಂಡದ ನಾಯಕರಾಗಬಲ್ಲ ಐವರು ಆಟಗಾರರುಮುಂದಿನ IPL ಸೀಸನ್‌ನಲ್ಲಿ ಧೋನಿ ಬದಲು CSK ತಂಡದ ನಾಯಕರಾಗಬಲ್ಲ ಐವರು ಆಟಗಾರರು

ಹಾಗಂತ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ಯಶಸ್ಸು ಸಾಧಿಸಿದ ಬೌಲರ್‌ಗಳು ಕೂಡ ಹೆಚ್ಚಿನ ಸಿಕ್ಸರ್ ನೀಡಿದ ಉದಾಹರಣೆಗಳು ಇದೆ. ಹೆಚ್ಚಿನ ಪಂದ್ಯಗಳನ್ನು ಆಡಿರುವುದು, ಸ್ಲಾಗ್ ಓವರ್‌ಗಳಲ್ಲಿ ಬೌಲಿಂಗ್ ಇವೆಲ್ಲಾ ಇದಕ್ಕೆ ಕಾರಣವಾಗಿದೆ. ಹಾಗಾದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ನೀಡದ ನಾಲ್ವರು ಬೌಲರ್‌ಗಳು ಯಾರು? (ಜೂನ್ 14, 2022ರ ವರೆಗಿನ ಅಂಕಿಅಂಶ)ಮುಂದೆ ಓದಿ..

ನಂ. 4. ಇಶ್ ಸೋಧಿ- 92 ಸಿಕ್ಸರ್

ನಂ. 4. ಇಶ್ ಸೋಧಿ- 92 ಸಿಕ್ಸರ್

ನ್ಯೂಜಿಲೆಂಡ್ ತಂಡದ ಸ್ಪಿನ್ನರ್ ಇಶ್ ಸೋಧಿ ಟಿ20 ಮಾದರಿಯ ಅತ್ಯಂತ ಯಶಸ್ವಿ ಬೌಲರ್‌ಗಳನ್ನು ಒಬ್ಬರೆನಿಸಿಕೊಂಡಿದ್ದಾರೆ. ಸುದೀರ್ಘ ಕಾಲ ಅವರು ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದರು. ಆದರೆ ಈಗ ಅವರ ಪ್ರದರ್ಶನ ಮೊದಲಿನಷ್ಟು ತೀಕ್ಷ್ಣವಾಗಿಲ್ಲ. ಹಾಗಿದ್ದರೂ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಭಾಗವಾಗಿದ್ದಾರೆ. ತಮ್ಮ ಸದ್ಭುತ ಬೌಲಿಂಗ್ ಕೌಶಲ್ಯದಿಂದ ಅನೇಕ ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಆದರೆ ಅತಿ ಹೆಚ್ಚು ಸಿಕ್ಸರ್ ನೀಡಿದ ಬೌಲರ್‌ಗಳ ಪಟ್ಟಿಯಲ್ಲಿ ಇಶ್ ಸೋಧಿ 4ನೇ ಸ್ಥಾನದಲ್ಲಿದ್ದಾರೆ. 66 ಪಂದ್ಯಗಳಲ್ಲಿ ಇಶ್ ಸೋಧಿ 92 ಸಿಕ್ಸರ್ ನೀಡಿದ್ದಾರೆ. ಹಾಗಿದ್ದರೂ ಇಶ್ ಸೋಧಿ ಅವರ ಎಕಾನಮಿ 8.05ರಷ್ಟಿದೆ.

ನಂ. 3. ಆದಿಲ್ ರಶೀದ್- 92 ಸಿಕ್ಸರ್

ನಂ. 3. ಆದಿಲ್ ರಶೀದ್- 92 ಸಿಕ್ಸರ್

ಇಂಗ್ಲೆಂಡ್ ಟಿ20 ತಂಡದ ಪ್ರಮುಖ ಭಾಗವಾಗಿದ್ದಾರೆ ಆದಿಲ್ ರಶೀದ್. ಇಂಗ್ಲೆಂಡ್ ತಂಡಕ್ಕೆ ಸ್ಪಿನ್ ವಿಭಾಗದಲ್ಲಿ ಹೆಚ್ಚಿನ ಯಶಸ್ಸು ಗಳಿಸಿದ ಬೌಲರ್ ಕೂಡ ಆಗಿದ್ದಾರೆ ಆದಿಲ್ ರಶೀದ್. ಮಧ್ಯಮ ಓವರ್‌ಗಳಲ್ಲಿ ಹೆಚ್ಚಾಗಿ ಬೌಲಿಂಗ್ ಮಾಡಿದ ರಶೀದ್ ಪವರ್‌ಪ್ಲೇನಲ್ಲಿಯೂ ಅನೇಕ ಸಂದರ್ಭಗಳಲ್ಲಿ ದಾಳಿಗೆ ಇಳಿದಿದ್ದಾರೆ. 81 ವಿಕೆಟ್‌ಗಳನ್ನು ಪಡೆದುಕೊಂಡಿರುವ ಆದಿಲ್ ರಶೀದ್ ಅಂತಾರಾಷ್ಟ್ರೀಯ ಕ್ರಿಕೆಟ್‌ಲ್ಲಿ ಆಡಿದ 73 ಪಂದ್ಯಗಳಲ್ಲಿ 92 ಸಿಕ್ಸರ್ ನೀಡಿದ್ದಾರೆ. ಹಾಗಿದ್ದರೂ ಅವರ ಎಕಾನಮಿ 7ರ ಸನಿಹದಲ್ಲಿದೆ.

ನಂ. 2. ಯುಜುವೇಂದ್ರ ಚಾಹಲ್- 96 ಸಿಕ್ಸರ್

ನಂ. 2. ಯುಜುವೇಂದ್ರ ಚಾಹಲ್- 96 ಸಿಕ್ಸರ್

ಭಾರತೀಯ ಕ್ರಿಕೆಟ್ ತಮಡದ ಅನುಭವಿ ಆಟಗಾರ ಯುಜುವೇಂದ್ರ ಚಾಹಲ್ ಅತಿ ಹೆಚ್ಚು ಸಿಕ್ಸರ್ ನಿಡಿದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ ಚಾಣಾಕ್ಷ ಬೌಲರ್ ಎಂದು ಖ್ಯಾತಿ ಗಳಿಸಿರುವ ಚಾಹಲ್ ಕೆಲ ಸಂದರ್ಭಗಳಲ್ಲಿ ಎಡವಿ ಸಿಕ್ಸರ್‌ಗಳನ್ನು ನೀಡಿದ್ದಾರೆ. ಆದರೆ ಇದೇ ಚಾನಾಕ್ಷತನದಿಂದಾಗಿ ವಿಕೆಟ್‌ಗಳನ್ನು ಕೂಡ ಪಡೆದಿದ್ದಾರೆ ಚಾಹಲ್. 56 ಅಂತಾರಾಷ್ಟ್ರೀಯ ಟಿ20 ಪಂದ್ಯಗಳ್ನನು ಆಡಿರುವ ಚಾಹಲ್ 96 ಸಿಕ್ಸರ್‌ಗಳನ್ನು ನೀಡಿದ್ದಾರೆ.

Dinesh Karthik 7 ನೇ ಕ್ರಮಾಂಕದಲ್ಲಿ ಬಂದ್ರೆ ಏನಾಗುತ್ತೆ ಎಂದು ಹೇಳಿದ Shreyas Iyer | *Cricket | OneIndia
ನಂ. 1. ಟಿಮ್ ಸೌಥಿ- 99 ಸಿಕ್ಸರ್

ನಂ. 1. ಟಿಮ್ ಸೌಥಿ- 99 ಸಿಕ್ಸರ್

ಅತಿ ಹೆಚ್ಚು ಸಿಕ್ಸರ್‌ಗಳನ್ನು ನೀಡಿದ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಬೌಲರ್ ನ್ಯೂಜಿಲೆಂಡ್‌ನ ವೇಗಿ ಟಿಮ್ ಸೌಥಿ. ಈ ಪಟ್ಟಿಯಲ್ಲಿರುವ ವೇಗದ ಬೌಲರ್ ಕೂಡ ಇವರೊಬ್ಬರೆ ಆಗಿದ್ದಾರೆ. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 111 ವಿಕೆಟ್‌ಗಳೊಂದಿಗೆ ಸದ್ಯ ಎರಡನೇ ಸ್ಥಾನದಲ್ಲಿರುವ ಟಿಮ್ ಸೌಥಿ ವಿಪರ್ಯಾಸವೆಂಬಂತೆ ಸಿಕ್ಸರ್‌ಗಳನ್ನು ನಿಡಿದ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. 92 ಪಂದ್ಯಗಳನ್ನು ಆಡಿರುವ ಸೌಥಿ 99 ಸಿಕ್ಸರ್‌ಗಳನ್ನು ನೀಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Wednesday, June 15, 2022, 16:17 [IST]
Other articles published on Jun 15, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X