ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಬಿಡಿ ಶತಕ ವ್ಯರ್ಥ, ಕೊಹ್ಲಿ ಪರಾಕ್ರಮಕ್ಕೆ ಬೆಲೆ ಸರಣಿ 2-2

By Mahesh

ಚೆನ್ನೈ, ಅ.22: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಗುರುವಾರ ನಾಲ್ಕನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಆರಂಭಿಕ ಆಘಾತ ಅನುಭವಿಸಿತು. ಆದರೆ, ನಂತರ ಉತ್ತಮ ಮೊತ್ತ ಕಲೆ ಹಾಕಿ, ದಕ್ಷಿಣ ಆಫ್ರಿಕಾ ರನ್ ಚೇಸ್ ಮಾಡದಂತೆ ಕಟ್ಟಿ ಹಾಕಿತು.

ವಿರಾಟ್ ಕೊಹ್ಲಿ ಶತಕ, ರೈನಾ ಅರ್ಧಶತಕ ನೆರವಿನಿಂದ ಉತ್ತಮ ಮೊತ್ತ 299/8 ಕಲೆ ಹಾಕಿತು. ಎಬಿ ಡಿ ವಿಲಿಯರ್ಸ್ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ಹೋರಾಟ ನಡೆಸಿದರೂ ಗುರಿ ಮುಟ್ಟಲಾಗಲಿಲ್ಲ. 50 ಓವರ್ ಗಳಲ್ಲಿ 264/9 ಸ್ಕೋರ್ ಮಾಡಿ ಸೊಲೊಪ್ಪಿಕೊಂಡಿತು. ನಾಲ್ಕನೇ ಪಂದ್ಯವನ್ನು 35 ರನ್ ಗಳಿಂದ ಭಾರತ ಸರಣಿಯನ್ನು 2-2 ಮಾಡಿಕೊಂಡಿದೆ. ಐದನೇ ಹಾಗೂ ಅಂತಿಮ ಪಂದ್ಯ ಮುಂಬೈನಲ್ಲಿ ಅಕ್ಟೋಬರ್ 25 ರಂದು ನಡೆಯಲಿದೆ.



ರನ್ ಚೇಸ್: ಉತ್ತಮ ಲಯದಲ್ಲಿರುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಡಿ ಕಾಕ್ ಅವರು 35 ಎಸೆತಗಳಲ್ಲಿ 43 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಆದರೆ, ಇನ್ನೊಂದೆಡೆ ಹಶೀಂ ಆಮ್ಲಾ 7 ಹಾಗೂ ಡುಪ್ಲೆಸಿಸ್ 17 ವಿಕಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ನಾಯಕ ಎಬಿ ಡಿ ವಿಲಿಯರ್ಸ್ 107 ಎಸೆತಗಳಲ್ಲಿ 112 ರನ್ (10x4, 2X6) ಗಳಿಸಿ ಭಾರತವನ್ನು ಕಾಡಿದರು. ಅದರೆ, ಹರ್ಭಜನ್ ಸಿಂಗ್ ಆರಂಭದಲ್ಲಿ ರನ್ ಗಳಿಕೆಗೆ ಕಡಿವಾಣ ಹಾಕಿ 2 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ 3 ವಿಕೆಟ್ ಉರುಳಿಸಿದರು. ಅಕ್ಷರ್, ಮಿಶ್ರಾ ಹಾಗೂ ಮೋಹಿತ್ ತಲಾ ಒಂದು ವಿಕೆಟ್ ಪಡೆದರು.

ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ಭಾರತ ಆರಂಭಿಕ ಆಘಾತ ಅನುಭವಿಸಿತು. ರೋಹಿತ್ ಶರ್ಮ 21ರನ್ ಗಳಿಸಿ ಔಟಾದರೆ, ಶಿಖರ್ ಧವನ್ 7 ರನ್ ಗಳಿಸಿ ಔಟಾಗಿ ಆತಂಕ ಮೂಡಿಸಿದರು.

Kohli


ಆದರೆ, ಕೊಹ್ಲಿ ಹಾಗೂ ರಹಾನೆ ಜೊತೆಯಾಟದಿಂದ ಉತ್ತಮ ಮೊತ್ತ ಕಲೆ ಹಾಕಲು ಅಡಿಪಾಯ ಸಿಕ್ಕಿತು. ನಂತರ ರೈನಾ ಉತ್ತಮ ಆಡವಾಡಿ ಕೊಹ್ಲಿಗೆ ಸಾಥ್ ನೀಡಿದರು. ದಕ್ಷಿಣ ಆಫ್ರಿಕಾ ಪರ (3/61), ಕಾಗಿಸೋ ರಬಡಾ (3/54) ಗಳಿಸಿದರೆ, ಕ್ರಿಸ್ ಮೊರಿಸ್ 1/55 ವಿಕೆಟ್ ಪಡೆದರು.

ವಿರಾಟ್ ಕೊಹ್ಲಿ 138 ರನ್ (140 ಎಸೆತ, 6x4, 5x6) ಬಾರಿಸಿದರು. ಅಜಿಂಕ್ಯ ರಹಾನೆ 45ರನ್ ಗಳಿಸಿ ಔಟಾದರು. ರೈನಾ ಅರ್ಧಶತಕ (53) ದ ಬಾರಿಸಿ ಲಯಕ್ಕೆ ಮರಳಿದರು.

ದಕ್ಷಿಣ ಆಫ್ರಿಕಾ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಮಾರ್ನೆ ಮಾರ್ಕೆಲ್ ಹಾಗೂ ಜೆಪಿ ಡುಮಿನಿ ಗಾಯಗೊಂಡಿರುವುದರಿಂದ ಅವರ ಬದಲಿಗೆ ಕ್ರಿಸ್ ಮೊರೀಸ್ ಹಾಗೂ ಅರೋನ್ ಫಂಗಿಸೋ ಆಡುತ್ತಿದ್ದಾರೆ. ಭಾರತ ಕಳೆದ ಪಂದ್ಯದಲ್ಲಿ ಆಡಿದ ಅಂತಿಮ XI ತಂಡವನ್ನೇ ಉಳಿಸಿಕೊಂಡಿದೆ.

Unchanged India opt to bat first in Chennai

ಐದು ಏಕದಿನ ಪಂದ್ಯಗಳ ಕ್ರಿಕೆಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 2-1 ರ ಮುನ್ನಡೆ ಪಡಿದಿದೆ. ದಕ್ಷಿಣ ಆಫ್ರಿಕಾ ತಂದ ಕಾನ್ಪುರದ ಮೊದಲ ಪಂದ್ಯ ಹಾಗೂ ರಾಜ್ ಕೋಟ್ ನಲ್ಲಿ ನಡೆದ ಮೂರನೇ ಏಕದಿನ ಪಂದ್ಯ ಗೆದ್ದುಕೊಂಡಿದ್ದಾರೆ.

ಇಂದೋರ್ ನಲ್ಲಿ ಭಾರತ ಗೆಲುವು ಸಾಧಿಸಿತ್ತು. ಐದನೇ ಹಾಗೂ ಅಂತಿಮ ಏಕದಿನ ಪಂದ್ಯ ಅಕ್ಟೋಬರ್ 25ರಂದು ಮುಂಬೈನಲ್ಲಿ ನಡೆಯಲಿದೆ. ಉಭಯ ತಂಡಗಳು ನವೆಂಬರ್ ತಿಂಗಳಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳನ್ನಾಡಲಿವೆ.

ತಂಡಗಳು:

ಭಾರತ: ಎಂಎಸ್ ಧೋನಿ(ನಾಯಕ, ವಿಕೆಟ್ ಕೀಪರ್), ಶಿಖರ್ ಧವನ್, ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್, ಅಕ್ಷರ್ ಪಟೇಲ್, ಅಜಿಂಕ್ಯ ರಹಾನೆ, ಸುರೇಶ್ ರೈನಾ, ಮೋಹಿತ್ ಶರ್ಮ, ರೋಹಿತ್ ಶರ್ಮ, ಅಮಿತ್ ಮಿಶ್ರಾ, ಹರ್ಭಜನ್ ಸಿಂಗ್.

ದಕ್ಷಿಣ ಆಫ್ರಿಕಾ: ಎಬಿ ಡಿ ವಿಲೆಯರ್ಸ್(ನಾಯಕ), ಹಶೀಂ ಆಮ್ಲಾ, ಕ್ವಿಂಟಾನ್ ಡಿ ಕಾಕ್ (ವಿಕೆಟ್ ಕೀಪರ್), ಫಾಫ್ ಡು ಪ್ಲೆಸಿಸ್, ಡೇವಿಡ್ ಮಿಲ್ಲರ್, ಫರ್ಹಾನ್ ಬೆಹರ್ದೀನ್, ಕ್ರಿಸ್ ಮೊರಿಸ್, ಅರೋನ್ ಫಂಗಿಸೋ, ಇಮ್ರಾನ್ ತಾಹೀರ್, ಡೇಲ್ ಸ್ಟೈನ್, ಕಾಗಿಸೋ ರಬಡಾ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X